ಬನಹಟ್ಟಿ ಮತ್ತು ತೇರದಾಳ ಪೊಲೀಸ್ ಠಾಣೆ ಸಿಲ್ ಡೌನ್
inmudalgi
ಜುಲೈ 16, 2020
ತಾಲ್ಲೂಕು, ಬೆಳಗಾವಿ
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿ ಪೊಲೀಸ್ ಠಾಣೆಯ ಎ ಎಸ್ ಐ ಮತ್ತು ತೇರದಾಳ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಇವರ ಇಬ್ಬರಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ. ಸೋಂಕಿತ ಸಂಪರ್ಕದಲ್ಲಿ ಇರುವ ಕೆಲವರನ್ನು ಕ್ವಾರೆಂಟನ್ ಮಾಡಲಾಗಿದೆ. ಸೋಂಕಿತನನ್ನು ಬಾಗಲಕೋಟೆ ಜಿಲ್ಲಾ ಕೋವಿಡ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಅಲ್ಲಿ ಐಸೋಲೇಶನ್ ವಾರ್ಡ್‌ಗೆ ದಾಖಲಿಸಿ, ಚಿಕಿತ್ಸೆ ಕೊಡಲಾಗುತ್ತಿದೆ.
ಸೋಂಕಿತನ ಮನೆಯವರು ಹೊರಗೆ ಹೋಗದಂತೆ ನಿರ್ಬಂಧಿಸಲಾಗಿದೆ. ಪ್ರಥಮ ಮತ್ತು ದ್ವಿತೀಯ ಸಂಪರ್ಕ ಹೊಂದಿರುವ ಜನರನ್ನು ಹೋಮ್ ಕ್ವಾರೆಂಟನ್ ಮಾಡಲಾಗಿದೆ. ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಬನಹಟ್ಟಿ ಪೊಲೀಸ್ ಠಾಣೆ ಮತ್ತು ತೇರದಾಳ ಪೊಲೀಸ್ ಠಾಣೆಯನ್ನು ಪುರಸಭೆ ಮತ್ತು ನಗರಸಭೆ ಸಿಬ್ಬಂದಿಗಳಿಂದ ಔಷಧ ಸಿಂಪಡಣೆ ಮಾಡಲಾಗಿದೆ.