ಮೂಡಲಗಿ : ಇಷ್ಟು ದಿನ ಸದ್ದಿಲ್ಲದೆ ಶಾಂತವಾಗಿ ನಡೆಯುತ್ತಿದ್ದ ಮೂಡಲಗಿ ಹಾಗೂ ಸುತ್ತಮುತ್ತಲಿನ ಗ್ರಾಮದ ಜನಜೀವನ ಅಸ್ತವ್ಯಸ್ಥ ವಾಗುವ ಕಾಲ ಸನ್ನಿಹಿತವಾಗಿದೆ. ಏಕೆಂದರೆ ಬಲ್ಲ ಮೂಲಗಳ ಪ್ರಕಾರ ಮೂಡಲಗಿ ನಗರದ ತಳವಾರ ಓಣಿಯಲ್ಲಿ ಒಂದು ಕೊರೋನಾ ಪಾಸಿಟಿವ್ ಕೇಸ್ ಗಳು ಪತ್ತೆಯಾಗಿದ್ದು ಆರೋಗ್ಯ ಇಲಾಖೆಯ ಅಧಿಕೃತ ಪ್ರಕಟಣೆಯೊಂದೇ ಬಾಕಿ ಉಳಿದಿದೆ.
ಪ್ರಾಥಮಿಕ ಮಾಹಿತಿ ಪ್ರಕಾರ ಕಳೆದ ಹತ್ತು ದಿನಗಳ ಹಿಂದೆ ಮಹಾರಾಷ್ಟ್ರದ ಸಂಬಂಧಿಕರ ಮದುವೆಗೆ ಊರಿಗೆ ಹೋಗಿದ್ದ 38 ವರ್ಷದ ಮಹಿಳೆಗೆ ಇವತ್ತು ಕೋರೋನಾ ದೃಢವಾಗಿದೆ.
ಇದರಿಂದಾಗಿ ಇಷ್ಟು ದಿನ ಶಾಂತವಾಗಿದ್ದ ಮೂಡಲಗಿ ಪಟ್ಟಣಕ್ಕೆ ಕೊರೋನಾ ಪ್ರವೇಶ ಪಡೆದಿದ್ದು ಜನರು ಹೆಚ್ಚಿನ ಜಾಗೃತಿ ವಹಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ಗುರುವಾರ ರಾತ್ರಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಬಂದ ಸಂದರ್ಭದಲ್ಲಿ ಮಹಿಳಿಗೆ ರೋಗದ ಲಕ್ಷಣಗಳು ಕಂಡುಬಂದಿದ್ದರಿಂದ ಆಸ್ಪತ್ರೆಯ ವೈದ್ಯರು ಇದು ಕೊರೋನಾ ಪಾಸಿಟಿವ್ ಇದೆ ಎಂದು ಬೆಳಗಾವಿ ಆಸ್ಪತ್ರೆಗೆ ಹೋಗಿ ಎಂದು ಮಹಿಳೆಗೆ ತಿಳಿಸಿದ್ದಾರೆ.
ಆ ಮಹಿಳೆಗೆ ಕೊರೋನಾ ಪಾಸಿಟಿವ್ ಇದೆ ಎಂಬ ಮಾಹಿತಿಯೂ ಆರೋಗ್ಯ ಇಲಾಖೆಯ ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಸದ್ಯ ಆ ಮಹಿಳೆ ಬೆಳಗಾವಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೂಡಲಗಿ ನಗರದ ತಳವಾರ ಓಣಿಯನ್ನು ಪೊಲೀಸ್ ಅಧಿಕಾರಿಗಳು ಸೀಲ್ ಡೌನ್ ಮಾಡಿದ್ದಾರೆ.
ಇನ್ನು ಆ ಖಾಸಗಿ ಆಸ್ಪತ್ರೆಗಳನ್ನು ಸೀಲ್ ಡೌನ್ ಮಾಡುವ ಸಾಧ್ಯತೆಗಳು ಇದೆ.