ಬೆಳಗಾವಿ : ಜಿಲ್ಲೆಯಲ್ಲಿ ಇಂದು ಕೂಡ ಮಹಾಮಾರಿ ಕೊರೊನಾ ತನ್ನ ಆರ್ಭಟ ಪ್ರದರ್ಶಿಸಲಿದೆ ಎಂಬ ಅನುಮಾನಗಳು ಹುಟ್ಟಿಕೊಂಡಿವೆ.
ಇಂದು ಜಿಲ್ಲೆಯಲ್ಲಿ ಹೊಸದಾಗಿ 60-80 ಕೊರೊನಾ ಪಾಸಿಟಿವ್ ಕೇಸ್‍ಗಳು ಬರುವ ಸಾಧ್ಯತೆಯಿದೆ. ಇದರಿಂದ ಜಿಲ್ಲೆಯಲ್ಲಿ ಮತ್ತಷ್ಟು ಕೊರೊನಾ ಆತಂಕ ಶುರುವಾಗಿದೆ.
ಬೆಳಗಾವಿ ಜಿಲ್ಲೆಯಲ್ಲಿ ದಿನೇದಿನೆ ಕೊರೊನಾ ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳುತ್ತಿದೆ. ಗುರುವಾರ 92 ಕೊರೊನಾ ಪಾಸಿಟಿವ್ ಕೇಸ್‍ಗಳು ದೃಢಪಟ್ಟಿದ್ದವು ಕಂಡು ಬರುವ ಸಾಧ್ಯತೆಯಿದೆ.
ಇಷ್ಟು ದಿನ ಸದ್ದಿಲ್ಲದೆ ಶಾಂತವಾಗಿ ನಡೆಯುತ್ತಿದ್ದ ಮೂಡಲಗಿಗೆ ನಗರದಲ್ಲಿ ಒಂದು ಕೊರೋನಾ ಪಾಸಿಟಿವ್ ಕೇಸ್ ಪತ್ತೆಯಾಗಿದೆ, ಹಾಗೆ ರಾಜಪೂರ ಗ್ರಾಮದಲ್ಲಿ ಒಂದು ಕೊರೋನಾ ಸೋಂಕು ದೃಢ ಪಟ್ಟಿದೆ.
ಇನ್ನೂ ಗೋಕಾಕ ತಾಲೂಕಿನ ಕೌಜಲಗಿ-8, ಗೋಕಾಕ್ ಸಿಟಿ-2, ದುರದುಂಡಿ-1, ಹಿರೇನಂದಿ-1, ಆರೋಗ್ಯ ಇಲಾಖೆಯ ಅಧಿಕೃತ ಪ್ರಕಟಣೆಯೊಂದೇ ಬಾಕಿ ಉಳಿದಿದೆ.
ಇಷ್ಟು ಹೆಚ್ಚಾಗುತ್ತಿರುವ ಕೊರೋನಾ ಕೇಸ್ ಗಳನ್ನು ನೋಡಿದರೆ ಜನರು ಹೆಚ್ಚಿನ ಜಾಗೃತಿ ವಹಿಸಬೇಕಾದ ಅನಿವಾರ್ಯತೆ ಎದುರಾಗಿದೆ.