ಮೂಡಲಗಿ ನಗರದಲ್ಲಿ ಮತ್ತೊಂದು ಕೊರೋನಾ ಕೇಸ್ ಪತ್ತೆ; ಜನರಲ್ಲಿ ಹೆಚ್ಚಿದ ಆತಂಕ
ಮೂಡಲಗಿ: ನಗರದ ಲಕ್ಷ್ಮಿ ನಗರದಲ್ಲಿ ಮತ್ತೊಂದು ಕೊರೋನಾ ಪಾಸಿಟಿವ್ ಕೇಸು ಪತ್ತೆಯಾಗಿದ್ದು ಜನರಲ್ಲಿ ಆತಂಕ ಹೆಚ್ಚಾಗಿದೆ.
ಲಕ್ಷ್ಮಿ ನಗರ ನಿವಾಸಿಯಾಗಿದ್ದ ಅಂಗನವಾಡಿ ಕಾರ್ಯಕರ್ತೆಯೊಬ್ಬರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು ಆರೋಗ್ಯ ಇಲಾಖೆಯ ಮೂಲಗಳಿಂದ ಅಧಿಕೃತ ಪ್ರಕಟಣೆಯೊಂದೇ ಬಾಕಿ ಉಳಿದಿದೆ.
ಕೊರೋನಾ ಕೇಸುಗಳು ಮೂಡಲಗಿ ನಗರಕ್ಕೆ ಒಂದೊಂದಾಗಿ ಹೆಜ್ಜೆಯಿಡುತ್ತಿದ್ದು ಇಷ್ಟುದಿನ ಶಾಂತವಾಗಿದ್ದ ನಗರದಲ್ಲಿ ಹುಯಿಲೆದ್ದಂತಾಗಿದೆ.
ಮೊದಲಿನಿಂದಲೂ ಪೊಲೀಸರು, ಅಂಗನವಾಡಿ ಕಾರ್ಯಕರ್ತೆಯರು, ಪುರಸಭಾ ಅಧಿಕಾರಿಗಳು ಹಾಗೂ ಆರೋಗ್ಯ ಕಾರ್ಯಕರ್ತರು ಬಹಳ ಪರಿಶ್ರಮಪಟ್ಟು ಕೊರೋನಾವನ್ನು ತುಂಬಾ ಹತೋಟಿಯಲ್ಲಿಟ್ಟಿದ್ದರು. ಆದರೆ ಸಾರ್ವಜನಿಕರ ದಿವ್ಯ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನದಿಂದಾಗಿ ಇಂದು ಕೊರೋನಾದ ಎರಡು ಕೇಸುಗಳು ಮೂಡಲಗಿ ಪ್ರವೇಶ ಮಾಡಿದಂತಾಗಿದೆ.
ಇದೇ ರೀತಿಯಾದರೆ ಇನ್ನೂ ಕೇಸುಗಳು ಹೆಚ್ಚಾಗುವ ಸಂಭವವಿದ್ದು ಜನರಲ್ಲಿ ಜಾಗೃತಿಯಾಗಬೇಕಾಗಿದೆ.
ಇವತ್ತು ಪತ್ತೆಯಾದ ಸೋಂಕಿತೆಯ ಮನೆಯ ಸುತ್ತಮುತ್ತ ಸೀಲ್ ಡೌನ್ ಮಾಡುವ ಸಾಧ್ಯತೆ ಇದೆ.
ಗೋಕಾಕ ಹಾಗೂ ಮೂಡಲಗಿ ತಾಲೂಕಿನಲ್ಲಿ ಇಂದು ಒಟ್ಟು 41 ಕರೋನಾ ಪಾಜಿಟಿವ ಕೇಸ ಪತ್ತೆ.
ಗೋಕಾಕ- 18, ಅಕ್ಕ ತಂಗೇರಹಾಳ- 8, ತವಗ- 9, ಕುಲಗೋಡ- 1, ಬಳೋಬಾಳ- 2, ತುಕ್ಕಾನಟ್ಟಿ- 1, ಬೆಟಗೇರಿ- 1,
ಮೂಡಲಗಿ- 1. ಇವರುಗಳಲ್ಲಿ 4 ಜನ ಉಪಚಾರ ನೀಡಿದ ವೈದ್ಯರು. ಆರೋಗ್ಯ ಇಲಾಖೆಯ ಬಲ್ಲ ಮೂಲಗಳಿಂದ ತಿಳಿದು ಬಂದಿದೆ.