ಮೂಡಲಗಿ ತಾಲೂಕಿನಲ್ಲಿ ಮೊದಲ ಬಲಿ ಪಡೆದ ಕೊರೋನಾ
ಮೂಡಲಗಿ : ನಿನ್ನೆ ತಾನೇ ಮೂಡಲಗಿಗೆ ಪ್ರವೇಶಿಸಿದ ಕೊರೋನಾ, ಇಂದು ಮೊದಲ ಬಲಿ ಪಡೆದು ಮೂಡಲಗಿ ಜನತೆಗೆ ಆತಂಕ ಹೆಚ್ಚಿಸುವಂತೆ ಮಾಡಿದೆ.

ಹೌದು ನಿನ್ನೆ ತಾನೆ ಮೊದಲಿಗೆ ಪಟ್ಟಣದ ತಳವಾರ ಓಣಿಯಲ್ಲಿ 38 ವರ್ಷದ ಮಹಿಳೆಗೆ ಕೊರೋನಾ ದೃಢವಾಗಿತ್ತು.
ಇಂದು ಆ ಮಹಿಳೆ ಮೃತಪಟ್ಟಿದ್ದು, ಮೂಡಲಗಿಯ ಸಾರ್ವಜನಿಕ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ಮಾಡಲಾಯಿತು.
ಈ ಸಂದರ್ಭದಲ್ಲಿ ತಾಲೂಕಾ ದಂಡಾಧಿಕಾರಿ ಡಿ ಜಿ ಮಹಾತ್, ಪೊಲೀಸ್ ಇಲಾಖೆಯ ಸಿಪಿಐ ವೆಂಕಟೇಶ್ ಮುರನಾಳ, ಪಿಎಸ್ಐ ಮಲ್ಲಿಕಾರ್ಜುನ್ ಸಿಂಧೂರ್, ಪುರಸಭೆಯ ಮುಖ್ಯಾಧಿಕಾರಿ ದೀಪಕ್ ಹರ್ದಿ, ಪುರಸಭೆಯ ಆರೋಗ್ಯ ನಿರೀಕ್ಷಕ ಚಿದಾನಂದ ಮುಗಳಖೋಡ, ಆರೋಗ್ಯ ಇಲಾಖೆಯ ಶಿವಲಿಂಗ ಪಾಟೀಲ್ ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿಗಳು, ಆರೋಗ್ಯ ಇಲಾಖೆ ಪುರಸಭೆ ಇಲಾಖೆಯ ಸಿಬ್ಬಂದಿಗಳು ಮತ್ತು ಮೃತರ ಸಂಬಂಧಿಕರಾದ ಪತಿ ಸಹೋದರ ಭಾಗಿಯಾಗಿದ್ದರು.
IN MUDALGI Latest Kannada News