ಮೂಡಲಗಿ : ಮೂಡಲಗಿ ತಾಲ್ಲೂಕಿನಲ್ಲಿ ಯಾರಿಗೂ ಸೋಂಕು ತಗಲಬಾರದು ಎಂದು ತಮ್ಮ ಜೀವದ ಹಂಗು ತೋರೆದು ಈ ಮಹಾಮಾರಿ ಕೊರೋನಾ ಬಂದ ನಾಲ್ಕು ತಿಂಗಳಿಂದ ಕರ್ತವ್ಯ ನಿರ್ವಹಿಸಯತ್ತಿದ್ದಾರೆ, ಆದರೆ ಇಂದು ಆ ಮಹಾಮಾರಿ ಕಣ್ಣು ಪೋಲಿಸ್ ಸಿಬ್ಬಂದಿ ಮೇಲೆ ಬಂದಿದೆ.
ಹೌದು ಮೂಡಲಗಿ ಪಟ್ಟಣದ ಪೋಲಿಸ್ ಠಾಣೆಯ 33 ವಯಸ್ಸಿನ ಸಿಬ್ಬಂಧಿಗೆ ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾದ ಹಿನ್ನೆಲೆ ಪೋಲಿಸ್ ಠಾಣೆಯನ್ನು ಸೀಲ್ ಡೌನ್ ಮಾಡಲಾಗಿದೆ. ಸಂಪರ್ಕದಲ್ಲಿ ಇರುವ ಠಾಣೆಯ ಎಲ್ಲ ಸಿಬ್ಬಂಧಿಗಳನ್ನು ಕ್ವಾರೆಂಟೈನ್ ಮಾಡುವ ಸಾಧ್ಯತೆ ಇದೆ.
ಕೊರೋನಾ ಬಂದಾಗಿನಿಂದ ಪೋಲಿಸ್ ಸಿಬ್ಬಂಧಿಗಳು ವೈರಸ್ ಹರಡದಂತೆ ಕಟ್ಟುನಿಟ್ಟಿ ಕ್ರಮಗಳನ್ನು ತೆಗೆದುಕೊಂಡು, ಸಾರ್ವಜನಿಕರ ಹಿತ್ತಕ್ಕಾಗಿ ಹಗಲಿರುಳು ತಮ್ಮ ಕುಟುಂಬಳನ್ನು ಲೆಕ್ಕಿಸದೆ ಸರ್ಕಾರದ ಆದೇಶ ಪಾಲಿಸುವಲ್ಲಿ ಪ್ರಮಾಣಿಕ ಕರ್ತವ್ಯವನ್ನು ನಿಭಾಯಿಸಿದ್ದಾರೆ.
ಓ ದೇವರೇ ನೀನೆಷ್ಟು ಕ್ರೂರಿ ಜನರ ಜೀವವನ್ನು ರಕ್ಷಿಸಲು ತಮ್ಮ ಕುಟುಂಬಗಳನ್ನು ಬಿಟ್ಟು, ಯಾವುದೇ ರಕ್ಷಣೆ ಇಲ್ಲದೆ ಈ ಮಹಾಮಾರಿ ಕೊರೋನಾ ವಿರುದ್ದ ಎದೆತಟ್ಟಿ ಕರ್ತವ್ಯ ಮಾಡುತ್ತಿರುವ ಸಿಬ್ಬಂಧಿಗಳಿಗೆ ಯಾಕಾದ್ರೂ ಈ ಪರಸ್ಥಿತಿ ತಂದೆ. ಜನರನ್ನು ರಕ್ಷಿಸುವವನ್ನು ದೇವತಾ ಮನುಷ್ಯ ಎಂಬ ಮಾತುಗಳು ಹೊಷಿಯಾದಂತೆ.
ಜನರ ರಕ್ಷಣೆಗೆ ಪ್ರಮುಖ ಪಾತ್ರ ವಹಿಸಿದ ಪೋಲಿಸ್ ಸಿಬ್ಬಂಧಿಗಳಿಗೆ ಇಂತಹ ಮಹಾಮಾರಿ ವಕ್ಕರಿಸಿದರೇ ಇನ್ನೂ ಸಾರ್ವಜನಿಕರನ್ನು ರಕ್ಷಿಸುವ ಹೊಣೆ ಯಾರಿಗೆ ?
ಮೂಡಲಗಿ ತಾಲೂಕಿನ ಸಾರ್ವಜನಿಕರು ಇನ್ನೂ ಮುಂದೆ ತಮ್ಮ ಜೀವವನ್ನು ತಾವೇ ರಕ್ಷಿಸಿಕೊಳ್ಳಬೇಕು. ಇಷ್ಟು ದಿನ ಪೋಲಿಸ್ ಸಿಬ್ಬಂಧಿಗಳು ಮನೆ ಬಿಟ್ಟು ಹೊರಗೆ ಬರಬೇಡಿ ಎಂದು ಹೇಳಿದರು ಸಾರ್ವಜನಕರು ತೆಲೆ ಕೆಡಿಸಿಕೊಳ್ಳಲಿಲ್ಲ, ಇವಾಗ ಮೂಡಲಗಿ ತಾಲೂಕಿನಲ್ಲಿ ಪೋಲಿಸ್ ಸಿಬ್ಬಂಧಿ ಹಿಡಿದು 7 ಕೊರೋನಾ ಕೇಸ್ ಪತ್ತೆಯಾಗಿವೆ. ಇನ್ನಾದರೂ ತಾಲೂಕಿನ ಜನತೆ ಎಚ್ಚೆತ್ತುಕೊಳ್ಳಬೇಕು
Check Also
‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’
Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …