ಅಪ್ಪಟ ಗ್ರಾಮೀಣ ಪ್ರತಿಭೆಯ ಹೆಮ್ಮೆಯ ಸಾಧನೆ
ಮೂಡಲಗಿ :- ಸಮೀಪದ ಕೌಜಲಗಿ ಗ್ರಾಮದ ಭೀಮಪ್ಪ ಹುಂಡರದ ಎಂಬುವವರು ಪುತ್ರ ವಿಠ್ಠಲ ಹುಂಡರದ ಮೂಧೋಳ ನಗರದ ಪ್ರತಿಷ್ಠತ ವಾಗ್ದೇವಿ ವಿಜ್ಞಾನ ಪಿಯು ಕಾಲೇಜಿನ ವಿದ್ಯಾರ್ಥಿಯು ಪಿಸಿಎಮ್‍ಬಿ ವಿಷಯಗಳಲ್ಲಿ ಬಾಗಲಕೋಟ ಜಿಲ್ಲೆಗೆ ಪ್ರಥಮ ಸ್ಥಾನ ಹಾಗೂ ತಾಲೂಕಿನಲ್ಲಿ ದ್ವೀತಿಯ ಸ್ಥಾನ ಪಡೆಯುವ ಮೂಲಕ ಅಮೋಘ ಸಾಧನೆಗೈದು ಎಲ್ಲರ ಗಮನ ಸೆಳೆದಿದ್ದಾನೆ.
ಮೂಲತಃ ಕೃಷಿ ಕುಟುಂಬದ ಹಿನ್ನೆಲೆಯುಳ್ಳ ಗ್ರಾಮೀಣ ಪ್ರತಿಭೆ ತನ್ನ ಸ್ವಸಾಮಥ್ರ್ಯ ತೋರಿದ್ದಾನೆ. ವಿದ್ಯಾರ್ಥಿಯ ತಾಯಿ ಸುಮಾರು ವರ್ಷಗಳ ಹಿಂದೆ ತಿರಿಕೊಂಡಿದ್ದು, ತಂದೆಯ ಆಶ್ರಯದಲ್ಲಿ ವಿದ್ಯಾಭ್ಯಾಸ ಮಾಡಿ ಅತ್ಯುನುತ ಶ್ರೇಣಿಯಲ್ಲಿ ಉತ್ತಿರರ್ಣನಾಗಿದ್ದಾನೆ. ಪರೀಕ್ಷೆಯಲ್ಲಿ 578 (96.34%) ಅಂಕಗಳನ್ನು ಪಡೆದು, ಭೌತಶಾಸ್ತ್ರದಲ್ಲಿ-100, ರಸಾಯನಶಾಸ್ತ್ರ-100, ಜೀವಶಾಸ್ತ್ರ-99, ಗಣಿತ-98 ಅಂಕಗಳನ್ನು ಪಡೆದು ಗ್ರಾಮೀಣ ಭಾಗದ ವಿದ್ಯಾರ್ಥಿಯಾಗಿದ್ದರು ಒಳ್ಳೆಯ ಸಾಧನೆ ಮಾಡಿ ಗ್ರಾಮದ ಕಿರ್ತಿ ತರುವಲ್ಲಿ ಯಶಸ್ವಿಯಾಗಿದ್ದಾನೆ.