ಗೋಕಾಕ: ಜನಪದರ ದೃಷ್ಟಿಯಲ್ಲಿ ಗ್ರಾಮ ದೇವತೆಗಳು ಜನರ ನಂಬಿಕೆಯ ಮೇಲೆ ಉದ್ಭವ ಗೊಂಡಿವೆ. ರೋಗ-ರುಜಿನ ಆರೋಗ್ಯಕರ ವಾತಾವರಣಕ್ಕಾಗಿ ಜನರು ದೇವತೆಗಳ ಮೊರೆ ಹೋಗುತ್ತಿದ್ದರು ಹೀಗೆ ಗ್ರಾಮಗಳ ರಕ್ಷಣೆಗಾಗಿಯೇ ದೇವತೆಗಳು ಹುಟ್ಟಿಕೊಂಡವು ಎಂದು ಗೋಕಾಕದ ಹಿರಿಯ ಕವಿಯತ್ರಿ ಹಾಗೂ ವೈದ್ಯೆ ಡಾ|| ಶಶಿಕಲಾ ಕಾಮೋಜಿ ಹೇಳಿದರು.
ಅವರು ಗೋಕಾವಿ ಗೆಳೆಯರ ಬಳಗ ಹಮ್ಮಿಕೊಂಡ ಕೋವಿಡ್-19 ಲಾಕ್ಡೌನ್ ನಿಮಿತ್ಯ ಗೂಗಲ್ ಮೀಟನಲ್ಲಿ ಹಮ್ಮಿಕೊಂಡಿರುವ ಮಂಗಳವಾರದ ಸೆಮಿನಾರ್ ಅಲ್ಲ ವೆಬಿನಾರ್ ವಿಶೇಷ ಉಪನ್ಯಾಸ ಮಾಲಿಕೆ ಹನ್ನೆರಡನೆಯ ಗೋಷ್ಠಿಯಲ್ಲಿ
“ಗೋಕಾವಿ ಗ್ರಾಮೀಣ ದೇವತೆಯರು” ಎಂಬ ವಿಷಯ ಕುರಿತು ಉಪನ್ಯಾಸ ನೀಡಿದರು.
ಕಲಾವಿದ-ಸಾಹಿತಿ ಪ್ರಾ. ಜಯಾನಂದ ಮಾದರ ಅವರ ಸಂಘಟನೆ ಹಾಗೂ ಸಂಚಾಲಕತ್ವದಲ್ಲಿ ಮೂಡಿ ಬರುತ್ತಿರುವ ಸರಣೀ 12ನೇ ಉಪನ್ಯಾಸ ಮಾಲಿಕೆಯಲ್ಲಿ ಪ್ರೊ. ಅರ್ಜುನ್ ಪಂಗಣ್ಣವರ್ ಅಧ್ಯಕ್ಷತೆ ವಹಿಸಿ ನಂಬಿಕೆಯ ಮೇಲೆ ಸೃಷ್ಟಿಯಾದ ಗ್ರಾಮ ದೇವತೆಗಳು ಜನಪದರ ದೇವರುಗಳಾಗಿವೆ . ಒಂದು ಸಭ್ಯತೆಯು ನಾಶವಾಗಿ ಮತ್ತೊಂದು ಸಬ್ಯತೆ ಹುಟ್ಟಲು 1000 ವರ್ಷ ಕಾಲಾವಧಿ ಬೇಕಾಗುವುದು ಹಾಗೆಯೇ ದೇವರ ನಂಬಿಕೆಯು ಕೂಡ ಭಾವನಾತ್ಮಕ ವಿಚಾರವಾಗಿದೆ ಎಂದು ಹೇಳಿದರು.
ಸಿದ್ಧಾರ್ಥ ವಾಡೆನ್ನವರ್, ವಿದ್ಯಾ ರಡ್ಡಿ, ಸುರೇಶ ಮುದ್ದಾರ, ಸುರೇಶ ಹನಗಂಡಿ, ಈಶ್ವರ ಮಮದಾಪೂರ, ವಿನೂತನ ಕಾಮೋಜೆ, ರವೀಂದ್ರ ಗಾಣಗಿ, ಶಿವರಾಜ್ ಕಾಂಬಳೆ, ಸುಮಾ ಮದಿಹಳ್ಳಿ, ರಜನಿ ಜೀರಗಾಳ, ನಿವೇದಿತ ಕಾಮೋಜಿ, ಮಂಜುನಾಥ್ ಬುಳ್ಳಿ, ಮಹೇಶ್ವರಿ ಕಲ್ಯಾಣಿ, ಮಲ್ಲಿಕಾರ್ಜುನ್ ದಂಡಿನ, ಮಲ್ಲಿಕಾರ್ಜುನ ಹೊಂಗಲ, ಜ್ಯೋತಿ ದೊಡ್ಡನವರ್, ಅನ್ನಪೂರ್ಣ ಹೊಸಮನಿ, ವಿಜಯಲಕ್ಷ್ಮಿ ಜುಗಳಿ ಇತರರು ಇದ್ದರು.