ಭಾರತದ ಸಂಸ್ಕøತಿ ಬಿಂಬಿಸುವ ಹೊಸ ಶಿಕ್ಷಣ ನೀತಿ.
ಕೇಂದ್ರ ಸರಕಾರದ ಹೊಸ ಶಿಕ್ಷಣ ನೀತಿ ; ಎಚ್.ಆರ್.ಎನ್ ಸ್ವಾಗತ.
ಮಕ್ಕಳಿಗೆ ಪ್ರಾಥಮಿಕ ಶಿಕ್ಷಣವನ್ನು ಮಾತೃಭಾಷೆಯಲ್ಲಿ ನೀಡಬೇಕು ಎಂಬ ಅನೇಕ ವರ್ಷಗಳ ಬೇಡಿಕೆ ಈಗ ಈಡೇರಿದೆ. ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗಳನ್ನು ತರುವ ಕೇಂದ್ರ ಸರಕಾರ ಹೊಸ ಶಿಕ್ಷಣ ನೀತಿ 2020ನ್ನು ತಾವು ಹಾರ್ದಿಕವಾಗಿ ಸ್ವಾಗತಿಸುವುದಾಗಿ ವಿಧಾನ ಪರಿಷತ್ ಸದಸ್ಯ ಹನುಮಂತ ಆರ್ ನಿರಾಣಿ ತಿಳಿಸಿದ್ದಾರೆ.
ಭಾರತದ ಭವ್ಯ ಪರಂಪರೆ ಮತ್ತು ಸಂಸ್ಕøತಿಯ ತಳಹದಿಯ ಮೇಲೆ ನಮ್ಮ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಬೇಕು ಎಂಬ ಕನಸು ಈಗ ಸಾಕಾರಗೊಂಡಿದೆ. 5ನೇಯ ತರಗತಿಯ ವರೆಗೆ ಮಾತೃಭಾಷೆಯಲ್ಲಿ ಕಲಿಕೆಗೆ ಒತ್ತು ನೀಡಿರುವುದು ದಿಟ್ಟ ನಿರ್ಧಾರವಾಗಿದೆ.
ದುರ್ಬಲವರ್ಗದಿಂದ ಬರುವ ಹಾಗೂ ಬಡ ವಿದ್ಯಾರ್ಥಿಗಳು ಸೇರಿದಂತೆ ಎಲ್ಲರಿಗೂ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುವದನ್ನು ಖಾತ್ರಿಪಡಿಸುವ ಉದ್ದೇಶವನ್ನು ಈ ಹೊಸ ಶಿಕ್ಷಣ ನೀತಿಯಲ್ಲಿ ಹೆಚ್ಚಿನ ಆದ್ಯತೆಯಲ್ಲಿ ಸೇರಿಸಲಾಗಿದೆ. ವೈಜ್ಞಾನಿಕ ತಳಹದಿಯ ಮೇಲೆ ಶಿಕ್ಷಣವ್ಯವಸ್ಥೆ ರೂಪಿಸುತ್ತಿರುವುದು ಮೋದಿ ನೇತೃತ್ವದ ಕೇಂದ್ರ ಸರಕಾರದ ಐತಿಹಾಸಿಕ ದಾಖಲೆಂiÀi ಸಾಧಾನೆಯಾಗಿದೆ ಎಂದು ಹನುಮಂತ ನಿರಾಣಿ ಬಣ್ಣಿಸಿದ್ದಾರೆ.
ನೂತನ ಶಿಕ್ಷಣ ನೀತಿಯು ಶಾಲಾ ಶಿಕ್ಷಣ ಹಂತದಲ್ಲಿ ಹಲವು ಅವಶ್ಯ ಬದಲಾವಣೆಗಳನ್ನು ತಂದಿದೆ. ಸಮಗ್ರವಾಗಿ ಅಡಿಪಾಯ ಹಂತ, ಪೂರ್ವಭಾವಿ ಹಂತ, ಮಾಧ್ಯಮಿಕ ಹಂತ, ಪ್ರೌಢ ಶಿಕ್ಷಣ ಹಂತ ಎಂದು ಕಲಿಕೆಯನ್ನು ನಾಲ್ಕು ಹಂತಗಳಾಗಿ ವಿಂಗಡಿಸಲಾಗಿದೆ. ಎಲ್ಲಕ್ಕಿಂತಲೂ ಮುಖ್ಯವಾಗಿ ಉನ್ನತಶಿಕ್ಷಣದಲ್ಲಿ ವಿಷಗಳನ್ನು ಆಯ್ಕೆ ಮಾಡಿಕೊಳ್ಳಲು ವಿಧ್ಯಾರ್ಥಿಗಳಿಗೆ ಮುಕ್ತ ಅವಕಾಶ ನೀಡಲಾಗಿದೆ. ಮೇಜರ್ ಮತ್ತು ಮೈನರ್ ವಿಷಗಳಾಗಿ ತಮ್ಮ ಆಯ್ಕೆ ವಿಷಯಗಳ ಸಂಯೋಜನೆಗಳನ್ನು ಕಲಿಯಲು ವಿದ್ಯಾರ್ಥಿಗಳಿಗೆ ಅವಕಾಶ ದೊರೆತಿರುವುದು ಒಂದು ಮಹತ್ವದ ಸಂಗತಿಯಾಗಿದೆ ಎಂದು ಅವರು ಹೇಳಿದ್ದಾರೆ.
ವಿಜ್ಞಾನ ಓದುವ ವಿದ್ಯಾರ್ಥಿಗಳು ಕೇವಲ ವಿಜ್ಞಾನ ವಿಷಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳಲು ಹಿಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಕಡ್ಡಾಯವಾಗಿತ್ತು. ಆದರೆ ಈಗ ಭೌತ ವಿಜ್ಞಾನ ಓದುವ ವಿದ್ಯಾರ್ಥಿ ಸಂಗೀತವನ್ನು ಕೂಡಾ ಒಂದು ವಿಷಯವಾಗಿ ಕಲಿಯಲು ಅವಕಾಶ ದೊರೆತಿದೆ. ಈ ಮುಕ್ತ ವ್ಯವಸ್ಥೆ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಬಹು ದೊಡ್ಡ ಬಾಗಿಲನ್ನು ತೆರೆಯಲಿದೆ. ನರೇಂದ್ರ ಮೋದಿ ಅವರ ಕೇಂದ್ರ ಸರಕಾರ ಜನಹಿತದ ದಿಟ್ಟ ನಿರ್ಧಾರ ತೆಗೆದುಕೊಳ್ಳುತ್ತಿರುವುದು ಜನ ಮೆಚ್ಚಗಳಿಸಿದೆ ಎಂದೂ ನಿರಾಣಿ ಅವರು ಹೇಳಿದ್ದಾರೆ.