Breaking News
Home / ತಾಲ್ಲೂಕು / ಸ್ಥಳನಾಮವೆಂದರೆ ಊರು ಕೇರಿ ಹಳ್ಳಿ ಗ್ರಾಮ- – ಪ್ರೊ. ಯರಿಯಪ್ಪ ಬೆಳಗುರ್ಕಿ

ಸ್ಥಳನಾಮವೆಂದರೆ ಊರು ಕೇರಿ ಹಳ್ಳಿ ಗ್ರಾಮ- – ಪ್ರೊ. ಯರಿಯಪ್ಪ ಬೆಳಗುರ್ಕಿ

Spread the love

ಸ್ಥಳನಾಮವೆಂದರೆ ಊರು

ಕೇರಿ ಹಳ್ಳಿ ಗ್ರಾಮ-
– ಪ್ರೊ. ಯರಿಯಪ್ಪ ಬೆಳಗುರ್ಕಿ

 

ಗೋಕಾಕ: ಸಾಂಸ್ಕೃತಿಕ ಇತಿಹಾಸಕ್ಕೆ ಸ್ಥಳೀಯ ನೆಲದ ಹೆಸರುಗಳನ್ನು ಅರ್ಥೈಸುವಲ್ಲಿ ಅಧ್ಯಯನದ ಅಗತ್ಯವಿದೆ. ಒಂದು ಪ್ರದೇಶದ ಜನರ ನೆಲೆ, ಜಾಗ, ಸ್ಥಳ ಹೆಸರುಗಳಿಗೆ ಊರು, ಕೇರಿ, ಹಳ್ಳಿ, ಗ್ರಾಮ ಎಂದು ಕರೆಯಲಾಗಿದೆ ಎಂದು ರಾಯಚೂರು ಜಿಲ್ಲೆಯ ಸಿಂಧನೂರಿನ ಸ್ನಾತಕೋತ್ತರ ಕೇಂದ್ರದ ಕನ್ನಡ ಪ್ರಾಧ್ಯಾಪಕ ಯರಿಯಪ್ಪ ಬೆಳಗುರ್ಕಿ ಅಭಿಪ್ರಾಯ ಪಟ್ಟರು.
ಅವರು ಗೋಕಾವಿ ಗೆಳೆಯರ ಬಳಗ ಹಮ್ಮಿಕೊಂಡ ಕೋವಿಡ್ -19 ಲಾಕ್ ಡೌನ್ ನಿಮಿತ್ಯ ಗೂಗಲ್ ಮೀಟ್ ಸೆಮಿನಾರ್ ಅಲ್ಲ ವೇಬಿನರ್ ವಿಶೇಷ ಉಪನ್ಯಾಸ ಮಾಲಿಕೆ 15ನೇ ಗೋಷ್ಠಿಯಲ್ಲಿ ” ಗೋಕಾವಿ ನಾಡಿನ ಸ್ಥಳನಾಮಗಳು” ಎಂಬ ವಿಷಯದ ಕುರಿತು ಮಾತನಾಡುತ್ತಾ, ಪ್ರಾಕೃತಿಕ, ಸಾಂಸ್ಕೃತಿಕ, ಸಂಕೀರ್ಣ, ವ್ಯಕ್ತಿ ಹಾಗೂ ಸಾಮಾಜಿಕ ವಾಚಕರ ನಾಮಗಳಿಂದ ನಾಡು ಕಂಗೊಳಿಸುತ್ತಿದೆ ಎಂದರು.

ಕಲಾವಿದ ಸಾಹಿತಿ ಜಯಾನಂದ ಮಾದರ ಅವರ ಸಂಘಟನೆ ಹಾಗೂ ಸಂಚಾಲಕತ್ವದಲ್ಲಿ ಮೂಡಿಬಂದ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಸಂಶೋಧಕ ಡಾ. ಮಹಾದೇವ ಜಿಡ್ಡಿಮನಿ ಗ್ರಾಮಗಳಲ್ಲಿ ಒಂದು ನಾಡಿನ ಸಂಸ್ಕೃತಿ ಅಡಗಿರುತ್ತದೆ. ನೀರು ನೆರಳು ಇದ್ದಲ್ಲಿ ಗ್ರಾಮಗಳ ಉದಯವಾಗಿದೆ ಎಂದು ಹೇಳಿದರು.
ಶುಕ್ರವಾರದ ಈ ಉಪನ್ಯಾಸದಲ್ಲಿ ಡಾ.ಸಿ.ಕೆ.ನಾವಲಗಿ. ಪ್ರೊ. ಚಂದ್ರಶೇಖರ ಅಕ್ಕಿ, ಮಾರುತಿ ದಾಸನ್ನವರ, ಪ್ರಸಿದ್ದ ಕತೆಗಾರ ಬಸವಣ್ಣೆಪ್ಪ ಕಂಬಾರ, ಶಕುಂತಲ ದಂಡಗಿ ಇನ್ನೂ ಮುಂತಾದವರು ಇದ್ದರು.


Spread the love

About inmudalgi

Check Also

ಬೆಟಗೇರಿ ಗ್ರಾಮದಲ್ಲಿ ಕಟ್ಟಾ ವಾರ ಆಚರಣೆ

Spread the loveಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಜನ-ಜಾನುವಾರುಗಳಿಗೆ ರೋಗ-ರುಜೀನ ಬರದಂತೆ ಹಾಗೂ ಸಕಾಲಕ್ಕೆ ಮಳೆಯಾಗದಿದ್ದ ಕಾರಣ ಮಳೆಗಾಗಿ ಇದೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ