ಮೂಡಲ, ಮೂಡಣ ಎಂಬುದೇ ಮೂಡಲಗಿ : ಶ್ರೀ ಮಹಾದೇವ ಪೋತರಾಜ
ಗೋಕಾಕ: ಮೂಡಣ ಪ್ರದೇಶ ಎಂಬ ದಿಗ್ವಾಚಕ ಪದವೇ ಮೂಡಲಗಿ ಎಂದಾಗಿರಬಹುದು ಎಂದು ಖಾನಟ್ಟಿಯ ಪಿ.ಎಚ್. ಡಿ ಸಂಶೋಧನಾರ್ಥಿ ಶ್ರೀ ಮಹಾದೇವ ಪೋತರಾಜ ಅಭಿಪ್ರಾಯಿಸಿದರು.
ಅವರು ಗೋಕಾವಿ ಗೆಳೆಯರ ಬಳಗ ಹಮ್ಮಿಕೊಂಡ ಕೋವಿಡ್ 2019 ಲಾಕ್ ಡೌನ್ ನಿಮಿತ್ಯ ಗೂಗಲ್ ಮೀಟ್ ಸೆಮಿನಾರ್ ಅಲ್ಲ ವೇಬಿನಾರ್ ವಿಶೇಷ ಉಪನ್ಯಾಸ ಮಾಲಿಕೆ 16ನೇ ಗೋಷ್ಠಿಯಲ್ಲಿ
“ಮೂಡಲಗಿ ಐತಿಹಾಸಿಕ ಚಿಂತನೆ” ವಿಷಯ ಕುರಿತು ಮಾತನಾಡುತ್ತಾ, ಶ್ರೀ ಶಿವಭೋಧರಂಗರು ಮಹಾರಾಷ್ಟ್ರದಿಂದ ರಾತ್ರಿಯೆಲ್ಲ ಕುದುರೆ ಮೇಲೆ ಸಂಚರಿಸುತ್ತ ಮೂಡಲ ಹರಿಯುವ ಸಮಯಕ್ಕೆ ಬಂದು ತಲುಪಿದ ಪ್ರದೇಶವನ್ನು ಮೂಡಲಗಿ ಎಂದು ಹೇಳಿರಬಹುದೆಂದರು.
ಕಲಾವಿದ ಸಾಹಿತಿ ಜಯಾನಂದ ಮಾದರ ಸಂಘಟನೆ ಹಾಗೂ ಸಂಚಾಲಕತ್ವದಲ್ಲಿ ಮೂಡಿಬಂದ ಗೋಷ್ಠಿಯ ಅಧ್ಯಕ್ಷತೆ ವಹಿಸಿ ವಿಶ್ರಾಂತ ಪ್ರಾಧ್ಯಾಪಕ ಪ್ರೊ ಗಂಗಾಧರ ಮಳಗಿ ಮಾತನಾಡಿದರು.
ಶನಿವಾರದ ಈ ಗೋಷ್ಠಿಯಲ್ಲಿ ಡಾ. ಸಿ.ಕೆ. ನಾವಲಗಿ, ಪ್ರೊ. ಚದ್ರಶೇಖರ ಅಕ್ಕಿ, ವಿದ್ಯಾ ರಡ್ಡಿ, ಪ್ರೊ. ಶಿವಲೀಲ ಪಾಟೀಲ, ರಾಮಚಂದ್ರ ಕಾಕಡೆ, ಸೋಮಶೇಖರ ಮಗದುಮ್, ಶಕುಂತಲ ದಂಡಗಿ, ಶಂಕರ ನಿಂಗನೂರ, ಬಸವರಾಜ ಹಣಮಂತಗೋಳ, ಡಾ. ಸುರೇಶ ಹನಗಂಡಿ, ಬಾಲಶೇಖರ ಬಂದಿ, ಸಂಗಮೇಶ ಗುಜಗೊಂಡ, ಶಾದಿಕ್ ಹಳ್ಯಾಳ ಇನ್ನೂಅನೇಕರು ಇದ್ದರು.