ಶರಣರ ಕಾಲಘಟ್ಟ ಮನುಜಕುಲದ ಅರಿವಿನ ಕಾಲ
: ಶ್ರೀ ಬಸವರಾಜ ಹಿರೇಮಠ
ಜಗದ ಉದಯದೊಂದಿಗೆ ಜೀವರಾಶಿಗಳ ಉತ್ಪತ್ತಿಯಾಗಿದೆ. ಹನ್ನೆರಡನೆಯ ಶತಮಾನದ ಶಿವಶರಣರ ಕಾಲಘಟ್ಟ ಮನುಷ್ಯನ ಅರುಹಿನ ಕಾಲವಾಗಿದೆ ಎಂದು ಬೆಳಗಾವಿ ಮಹಾನಗರ ಮಾಲಿಕೆ ನಗರ ಯೋಜನಾ ವಿಭಾಗದ ಉಪನಿರ್ದೇಶಕ ಶ್ರೀ ಬಸವರಾಜ ಹಿರೇಮಠ ಹೇಳಿದರು .
ಅವರು ಗೋಕಾವಿ ಗೆಳೆಯರ ಬಳಗ ಹಮ್ಮಿಕೊಂಡ ಕೋವಿಡ್ -19 ಲಾಕ್ ಡೌನ್ ನಿಮಿತ್ಯ ಗೂಗಲ್ ಮೀಟ್ ಸೆಮಿನಾರ್ ಅಲ್ಲ ವೇಬಿನಾರ್ ವಿಶೇಷ ಉಪನ್ಯಾಸ ಮಾಲಿಕೆ 17ನೇ ಗೋಷ್ಠಿಯಲ್ಲಿ “ಶ್ರೀ ಚನ್ನಬಸವೇಶ್ವರರ ಕರಣ ಹಸಿಗೆ “ಪುಸ್ತಕ ಕುರಿತು ಮಾತುಗಳನ್ನಾಡುತ್ತಾ , ಬ್ರಹ್ಮಾಂಡ ಮತ್ತು ಪಿಂಡಾಂಡ ಗರ್ಭೀಕರಿಸಿದ ವಿಷಯವನ್ನು ಚನ್ನಬಸವೇಶ್ವರರು ಕರಣ ಹಸಿಗೆ ಪುಸ್ತಕದಲ್ಲಿ ಕಟ್ಟಿ ಕೊಟ್ಟಿರುವರು ಇದನ್ನು ವೈಚಾರಿಕ ಮತ್ತು ತಾತ್ವಿಕ ಹಿನ್ನೆಲೆಯಿಂದ ಅರಿತು ವಿಜ್ಞಾನ ವೈದ್ಯ ಸ.ಜ.ನಾಗಲೋತಿಮಠರವರು ಅದೊಂದು ಸಂಶೋಧನ ಬೀಜದ ಖನಿಜ ಎಂದು ಹೇಳಿರುವ ಬಗ್ಗೆ ವಿವೇಚಿಸಿದರು .
ಕಲಾವಿದ ಸಾಹಿತಿ ಜಯಾನಂದ ಮಾದರ ಸಂಘಟನೆ ಹಾಗೂ ಸಂಚಾಲಕತ್ವದಲ್ಲಿ ಮೂಡಿಬಂದ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಬಸವತತ್ವ ಚಿಂತಕರಾದ ಸೋಮಶೇಖರ ಮಗದುಮ್ ಅವರು ಶ್ರೀ ಚನ್ನಬಸವೇಶ್ವರರು ಕೇವಲ ಇಪ್ಪತ್ತನಾಲ್ಕು ವರ್ಷ ಬದುಕಿದ್ದು, ಅವಿರಳ ಜ್ಞಾನಿಗಳೆನಿಸಿಕೊಂಡಿರುವರು. ಶಿವಶರಣರು ವೈಜ್ಞಾನಿಕ ಮನೋಭಾವದಿಂದಲೇ ವಚನಗಳನ್ನು ರಚಿಸಿದ್ದಾರೆ ಎಂದರು.
ಇಂದಿನ ವೆಬಿನಾರದಲ್ಲಿ ೬೫ ಜನ ಭಾಗವಹಿಸಿದ್ದರು. ಪ್ರೊ. ಶಿವಲೀಲಾ ಪಾಟೀಲ ಪರಿಚಯಿಸಿ ಸ್ವಾಗತಿಸಿದರು .