ಮೂಡಲಗಿ : ಶಾಲಾ ಕೊಠಡಿಗಳಿಗೆ ನಬಾರ್ಡ ಯೋಜನೆಯಡಿ ಮಂಜೂರಾದ ಕಾಮಗಾರಿಗಳಿಗೆ ಇತ್ತೀಚೆಗೆ ಗುದ್ದಲಿ ಪೂಜೆ ನೆರವೇರಿಸಲಾಯಿತು.
ಇಲ್ಲಿಗೆ ಸಮೀಪದ ಸುಣಧೋಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡಗಳಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಸಹಾಯಕ ನಿಂಗಪ್ಪ ಕುರಬೇಟ ಗುದ್ದಲಿ ಪೂಜೆ ನೆರವೇರಿಸಿದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಪ್ರಯತ್ನದಿಂದಾಗಿ ನಬಾರ್ಡ ಯೋಜನೆಯಡಿ ನೂತನ ಶಾಲಾ ಕೊಠಡಿಗಳಿಗೆ 1.04 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಶಿಕ್ಷಣದ ಸರ್ವಾಂಗೀಣ ಅಭಿವೃದ್ಧಿಗಾಗಿ ಹಾಗೂ ಮಕ್ಕಳು ವಿದ್ಯಾಭ್ಯಾಸದಿಂದ ಹಿಂದುಳಿಯಬಾರದು. ಮೂಡಲಗಿ ವಲಯದ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿ ಈ ನೆಲದ ಹಿರಿಮೆ ಸಾಧಿಸಬೇಕೆಂಬುದು ಶಾಸಕರ ಆಶಯವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಪಂ ಸದಸ್ಯ ರಮೇಶ ಗಡಗಿ, ಗುರುರಾಜ ಪಾಟೀಲ, ಕಲ್ಲಪ್ಪ ಕಮತಿ, ಸಿದ್ಧಾರೂಢ ಕಮತಿ, ಬಿ.ಬಿ. ಹಟ್ಟಿಹೊಳಿ, ರಾಜು ವಾಲಿ, ದುಂಡಪ್ಪ ಚೌಗಲಾ, ಮಹಾದೇವ ಹಾರೂಗೇರಿ, ಬಸು ಪಾಟೀಲ, ಸಹದೇವ ಕಮತಿ, ಚಂದ್ರು ಗಾಣಿಗೇರ, ಸಿಆರ್‍ಪಿ ಹಿರೇಮಠ, ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಲೋಳಸೂರ, ಖಂಡ್ರಟ್ಟಿ, ತೋಕರಟ್ಟಿ ಗ್ರಾಮಗಳ ಶಾಲಾ ಕೊಠಡಿಗಳ ನಿರ್ಮಾಣ ಕಾಮಗಾರಿಗಳಿಗೆ ನಿಂಗಪ್ಪ ಕುರಬೇಟ ಅವರು ಗುದ್ದಲಿ ಪೂಜೆ ನೆರವೇರಿಸಿದರು.
Check Also
‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’
Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …