ಪತ್ರಕರ್ತರು ಎಂದರೆ ಯಾರು..?
ಪತ್ರಕರ್ತರ ನಡೆ ಹೇಗಿರುತ್ತೆ ಗೊತ್ತಾ…!
*ಮೂಡಲಗಿ :* ಪತ್ರಕರ್ತರು ಆಧುನಿಕ ಸಮಾಜದ ಕನ್ನಡಿಯೆಂದೇ ಹೇಳಬಹುದು. ಅಂತಹ ಅದ್ಭುತ ಶಕ್ತಿ ಪತ್ರಕರ್ತರಲ್ಲಿ ಇದೆ.
ಪತ್ರಕರ್ತನು ತಾನು ಇರುವ ಸ್ಥಳಿಯ ಮತ್ತು ಹೊರನಾಡಿನ ನಡೆಯುವ ಪ್ರಸ್ತುತ ಸುದ್ದಿ-ಸನ್ನಿವೇಶಗಳನ್ನು ಸಮಾಜದ ಮುಂದೆ ಪತ್ರಿಕೋದ್ಯಮದ ಮೂಲಕ ವಿವರಿಸುತ್ತ ಹೋಗುತ್ತಾನೆ.
ಅದೇ ರೀತಿ ರಾಜಕೀಯ ವ್ಯವಸ್ಥೆ,ಭೂಗತ ಜಗತ್ತಿನ ಷಡ್ಯಂತ್ರಗಳು ಇವೇ ಮೊದಲಾದ ವಿಷಯಗಳ ಬಗ್ಗೆ ಕಾಲಕಾಲಕ್ಕೆ ಜನತೆಗೆ ವರದಿ ಮಾಡುವದರ ಜೊತೆಗೇ ಒಂದು ರೀತಿಯ ಜನಾಭಿಪ್ರಾಯ ಮೂಡಿಸುವಲ್ಲಿಯೂ ತನ್ನ ಪಾತ್ರ ವಿಸ್ತರಿಸುತ್ತಾ ಹೋಗುತ್ತಾನೆ.
ಈ ರೀತಿಯ ಪತ್ರಕರ್ತನ ವರದಿ, ಲೇಖನಗಳ ಬಗ್ಗೆ ಜನಾಭಿಪ್ರಾಯದಿಂದಲೇ ಸರ್ಕಾರ ಬದಲಾಗಿದ್ದೂ ಉಂಟು.ಹಾಗಾಗಿ ಪತ್ರಿಕೋದ್ಯಮ ಮತ್ತು ಪತ್ರಕರ್ತನನ್ನು ಸಮಾಜದ ನಾಲ್ಕನೇ ಅಂಗ ಎಂದು ಕರೆದಿದ್ದಾರೆ.
ಪತ್ರಿಯೊಂದು ರಾಜ್ಯದಲ್ಲಿ ಪತ್ರಿಕಾರಂಗ ತನ್ನ ರಾಜ್ಯದ ಮಾತೃಭಾಷೆಗೆ ಮೊದಲ ಆದ್ಯತೆ ನೀಡುತ್ತದೆ. ಅದೇ ರೀತಿಯಲ್ಲಿ ನಮ್ಮ ಕರ್ನಾಟಕ ರಾಜ್ಯದಲ್ಲಿ ಕನ್ನಡ ದಿನ ಪತ್ರಿಕೆಗಳು ಕನ್ನಡ ಭಾಷೆಗೆ ಮೊದಲ ಆದ್ಯತೆ ನೀಡಿ ಕನ್ನಡಾಂಬೆಗೆ ಗೌರವ ಸೂಚಿಸುತ್ತಿದೆ.
ಇನ್ನೂ ಪತ್ರಕರ್ತರಲ್ಲಿ ಮುದ್ರಿತ ಸ್ವರೂಪಗಳಾದ ಸುದ್ದಿಪತ್ರಿಕೆ/ಮ್ಯಾಗಜೀನ್ ವಿಭಾಗದಿಂದ ಹಿಡಿದು ರೇಡಿಯೊ,ಟೆಲಿವಿಷನ್(ದೂರದರ್ಶನ),ಅಂತರ್ಜಾಲ ವಿಭಾಗದವರೆಗೂ ಹರಡಿಕೊಂಡಿದ್ದಾನೆ.
ಪತ್ರಿಕೋದ್ಯಮದಲ್ಲಿ ಪತ್ರಕರ್ತ(ವರದಿಗಾರ)ನಲ್ಲದೇ ಸಂಪಾದಕ,ಅಂಕಣಕಾರ,ಛಾಯಾಗ್ರಾಹಕ ಕೂಡ ತಮ್ಮದೇ ಆದ ಕೊಡುಗೆ ನೀಡುತ್ತಿರುತ್ತಾರೆ.
ಕೊರೋನಾ ಸಂದರ್ಭದಲ್ಲೂ ಸಹ ತಮ್ಮ ಜೀವದ ಹಂಗು ತೊರೆದು ಕೊರೋನಾ ಕೇಸಗಳ ಬಗ್ಗೆ, ಜನರಲ್ಲಿ ಜಾಗೃತಿ ಮೂಡಿಸುವ ಬಗ್ಗೆ ಹೀಗೆ ಹಲವಾರು ತಮ್ಮ ಸೇವೆಯನ್ನು ಈ ಸಮಾಜಕ್ಕೆ ನೀಡಿದ್ದಾರೆ.
ಪತ್ರಕರ್ತರು ಎಂದರೆ ಕೆಲವು ಜನರಿಗೆ ಸ್ವಲ್ಪ ಭಯ,ಕೋಪ ಇರುವುದು ಸಾಮಾನ್ಯ ಇನ್ನೂ ಕೆಲವರಿಗೆ ಒಂದು ಅದ್ಭುತ ಶಕ್ತಿ ಹೊಂದಿರುವ ಪತ್ರಕರ್ತರ ಬಗ್ಗೆ ಪ್ರೀತಿ ವಿಶ್ವಾಸ ನಂಬಿಕೆ ಎಲ್ಲವೂ ಇದೆ.
ಸಮಾಜದ ಅಂಕುಡೊಂಕುಗಳನ್ನು ತಿದ್ದುತ್ತ, ಒಳ್ಳೆಯ ಸಮಾಜ ಕೆಲಸಗಾರರ ಬಗ್ಗೆ ಮೆಚ್ಚಿಗೆ ಮಾತುಗಳ ಬರವಣಿಗೆ ಶೈಲಿಯಲ್ಲಿ ಜನರ ಮನಸ್ಸಿಗೆ ಮುಟ್ಟಿಸುವಂಥ ಕೆಲಸ ಅದು ಪತ್ರಕರ್ತರದು.
ಪತ್ರಕರ್ತರು ಬರೆಯುವ ಲೇಖನಗಳಿಗೆ ಅಂದರೆ ಸಮಾಜಕ್ಕಾಗಿ ಒಳ್ಳೆ ಕೆಲಸ ಮಾಡುತ್ತಿರುವ ವ್ಯಕ್ತಿಗಳ ಗುರುತಿಸಿ ಅವರ ಕಾರ್ಯಗಳ ಬಗ್ಗೆ ಬರವಣಿಗೆ ಶೈಲಿಯಲ್ಲಿ ಹೊಗಳಿ ಬರೆದರೆ ಕೆಲವು ತಿಳಿಗೇಡಿಗಳು ಹಣ ಪಡೆದು ಸುದ್ದಿಯನ್ನಾಗಿ ಮಾಡಿಸಿಕೊಂಡಿದ್ದಾರೆ ಎಂದು ಹೇಳುವುದು ನಿಜಕ್ಕೂ ತಪ್ಪು.
ಖಡ್ಗಕ್ಕಿಂತ ಲೇಖನಿ ಹರಿತ ಎಂಬ ವಾಕ್ಯದಲ್ಲಿ ಇರುವ ಮಾತುಗಳು ಅಷ್ಟು ಅರ್ಥಗರ್ಭಿತವಾಗಿದೆ ಆ ಕಿಡಿಗೇಡಿಗಳಿಗೆ ಅರ್ಥವಾಗಿಲ್ಲ, ಒಬ್ಬ ಪತ್ರಕರ್ತನ ಪೆನ್ನಿನ ಮುಂದೆ ಯಾವ ದುಡ್ಡು ಲೆಕ್ಕಕ್ಕಿಲ್ಲ. ಅದನ್ನು ಮೊದಲು ತಿಳಿದುಕೊಳ್ಳಬೇಕು.
ಮುಂದಿನ ಮಂಗಳವಾರ ಮನದಾಳದ ಮಾತುಗಳು ಎಂಬ ಸಂಚಿಕೆಯಲ್ಲಿ ಮುಂದುವರಿಯುವುದು…….
*ವರದಿ : ಮಲ್ಲು ಬೋಳನವರ*
*ಮನದಾಳದ ಮಾತುಗಳು ಎಂಬ ಸಂಚಿಕೆ ಪತ್ರಿ ಮಂಗಳವಾರ*