Breaking News
Home / ತಾಲ್ಲೂಕು / ಗ್ರಾಮೀಣ ಭಾಗದಲ್ಲಿ “ಸ್ವಯಂ ಸೇವಕರು” ಮತ್ತು “ಕರೋನಾ ವಾಯಿರಸ್” ತಂಡಗಳನ್ನು ರಚಿಸಿಕೊಂಡು ಜಾಗೃತಿ ಮೂಡಿಸುವದು ಮತ್ತು ಮನೆ ಮನೆ ಮತ್ತೊಮ್ಮೆ ತೆರಳಿ ಸದಸ್ಯರನ್ನು ತಪಾಸಣೆ ಮಾಡಿ

ಗ್ರಾಮೀಣ ಭಾಗದಲ್ಲಿ “ಸ್ವಯಂ ಸೇವಕರು” ಮತ್ತು “ಕರೋನಾ ವಾಯಿರಸ್” ತಂಡಗಳನ್ನು ರಚಿಸಿಕೊಂಡು ಜಾಗೃತಿ ಮೂಡಿಸುವದು ಮತ್ತು ಮನೆ ಮನೆ ಮತ್ತೊಮ್ಮೆ ತೆರಳಿ ಸದಸ್ಯರನ್ನು ತಪಾಸಣೆ ಮಾಡಿ

Spread the love

ಮೂಡಲಗಿ: ಕರೋನ ಮಹಾಮಾರಿ ರೋಗವು ವಿಶ್ವದಲ್ಲೆಡೆ ಮೂಲೆ ಮೂಲೆಯಲ್ಲಿ ಹರಡುತಿದ್ದು ಗ್ರಾಮೀಣ ಭಾಗದಲ್ಲಿ ರೋಗದ ಬಗ್ಗೆ ಕಟ್ಟು ನಿಟ್ಟಾಗಿ ಜಾಗೃತಿ ಮೂಡಿಸುವುದು ಅತಿ ಅವಶ್ಯಕವಾಗಿರುತ್ತದೆ ಎಂದು ತಾಲೂಕಿನ ಕಲ್ಲೋಳಿಯ ಜೈ ಹನುಮಾನ ಯುವಜನಾ ಸೇವಾ ಸಂಘದ ಪದಾಧಿಕಾರಿಗಳು ಮೂಡಲಗಿ ತಹಶಿಲ್ದಾರ ಮೂಖಾಂತರ ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು.
ಸಮುದಾಯ ಮಟ್ಟದಲ್ಲಿ ಹರಡದಂತೆ ಮುಂದಿನ ಕ್ರಮ ತೆಗೆದುಕೊಳ್ಳಬೇಕು,
ಗ್ರಾಮೀಣ ಭಾಗದಲ್ಲಿ “ಸ್ವಯಂ ಸೇವಕರು” ಮತ್ತು “ಕರೋನಾ ವಾಯಿರಸ್” ತಂಡಗಳನ್ನು ರಚಿಸಿಕೊಂಡು ಜಾಗೃತಿ ಮೂಡಿಸುವದು ಮತ್ತು ಮನೆ ಮನೆ ಮತ್ತೊಮ್ಮೆ ತೆರಳಿ ಸದಸ್ಯರನ್ನು ತಪಾಸಣೆ ಮಾಡುವದು ಮನೆ ಸದಸ್ಯರನ್ನು ತಪಾಸಣೆ ಮಾಡುವ ವೇಳೆಯಲ್ಲಿ ಕರೋನ ಲಕ್ಷಣ ಕಂಡು ಬಂದಲ್ಲಿ ರೋಗಿ ಕುಟುಂಬದವರಿಗೆ ದೈರ್ಯ ಹೇಳಿ ತಕ್ಷಣ ಕಾರ್ಯಪ್ರವೃತ್ತಿರಾಗಿ ಚಿಕಿತ್ಸೆ ನೀಡಿ ಇನ್ನು ಉಳಿದ ಸದಸ್ಯರಿಗೆ ರೋಗ ಹರಡುವುದನ್ನು ನಿಲ್ಲಿಸುವುದು ಬಹು ಅವಶ್ಯಕವಾಗಿರುತ್ತದೆ. ಅದೇ ರೀತಿ ಮನೆ ಮನೆಗೆ “ಅ” ವಿಟಮಿನ್ ಮಾತ್ರೆ ತಲುಪಿಸುವ ಕಾರ್ಯ ಆದಷ್ಟು ಬೇಗ ಆಗಬೇಕು.
ಮತ್ತು ಗ್ರಾಮೀಣ ಭಾಗದಲ್ಲಿರುವ “ಪ್ರಾಥಮೀಕ ಕೆಂದ್ರ ಉಪ ಕೇಂದ್ರಗಳು” ಮೇಲ್ದರ್ಜೆಗೆ ಏರಿಸುವುದು ಮತ್ತು ದಿನದ 24 ಗಂಟೆಗಳ ವರೆಗೆ ಕಾರ್ಯನಿರ್ವಹಿಸುವದು ಮತ್ತು ಸಮುದಾಯ ಮಟ್ಟದಲ್ಲಿ ರೋಗ ಹರಡುವುದನ್ನು ತಡೆಗಟ್ಟವುದು ಬಹಳ ಅವಶ್ಯಕವಾಗಿರುತ್ತದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಮಯದಲ್ಲಿ ಸಂಘಟನೆಯ ಅಧ್ಯಕ್ಷ್
ಪರಶುರಾಮ ಇಮಡೇರ, ಉಪಾಧ್ಯಕ್ಷ
ಮಹಾಂತೇಶ ಕಡಲಗಿ, ಕಾರ್ಯದರ್ಶಿ
ಭೀಮಶಿ ಗೋಕಾಂವಿ,
ರಾಜಪ್ಪ ಮಾವರಕರ,
ಸಿದ್ದಪ್ಪ ಪೂಜೇರಿ,
ಭೀಮಶಿ ಕಡಲಗಿ,
ಸಿದ್ದಪ್ಪ ಉಮರಾಣಿ ಮತ್ತು ಇತರರು ಇದ್ದರು


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ