Breaking News
Home / ತಾಲ್ಲೂಕು / ಸಿರಿಸಂಪಿಗೆ ದೇಶೀಯ ನೆಲದ ಸಾಹಿತ್ಯ ಕುಸುಮ: ಶ್ರೀ ಮಾರುತಿ ದಾಸನ್ನವರ

ಸಿರಿಸಂಪಿಗೆ ದೇಶೀಯ ನೆಲದ ಸಾಹಿತ್ಯ ಕುಸುಮ: ಶ್ರೀ ಮಾರುತಿ ದಾಸನ್ನವರ

Spread the love

ಸಿರಿಸಂಪಿಗೆ ದೇಶೀಯ ನೆಲದ ಸಾಹಿತ್ಯ ಕುಸುಮ: ಶ್ರೀ ಮಾರುತಿ ದಾಸನ್ನವರ

ಗೋಕಾಕ- ಅಗಷ್ಟ್ ೮: ಚಂದ್ರಶೇಖರ ಕಂಬಾರರ ಕಾವ್ಯ, ಕಥೆ, ಕಾದಂಬರಿ ನಾಟಕ ಕೃತಿಗಳಲ್ಲಿ ಅಡ್ಡಾಡಿದರೆ ದೇಶಿಯ ನೆಲದಲ್ಲೇ ಎಡವಿದಂತೆ, ಎಬ್ಬಿಸಿದಂತೆ, ಕೆಣಕಿದಂತೆ, ಭಾಸವಾಗುತ್ತದೆ. ಅದೇ ವಾಸನೆ ನೀಡುವ “ಸಿರಿಸಂಪಿಗೆ ” ಜಾನಪದ ನೆಲದ ಸುವಾಸನೆ ಬೀರುವ ಹೂವಾಗಿದೆ ಎಂದು ಹೇಳಿದರು.
ಅವರು ಗೋಕಾವಿ ಗೆಳೆಯರ ಬಳಗ ಹಮ್ಮಿಕೊಂಡಿದ್ದ ಕೋವಿಡ್ -19 ಲಾಕ್ಡೌನ್ ಗೂಗಲ್ ಮೀಟಿನಲ್ಲಿ ಸೆಮಿನಾರ್ ಅಲ್ಲ ವೇಬಿನರ್ ವಿಶೇಷ ಉಪನ್ಯಾಸ ಮಾಲಿಕೆ 23ನೇ ಗೋಷ್ಠಿಯಲ್ಲಿ
“ಡಾ ಚಂದ್ರಶೇಖರ ಕಂಬಾರರ ಸಿರಿಸಂಪಿಗೆ ” ಒಂದು ಮರು ಓದು ವಿಷಯ ಕುರಿತು ಉಪನ್ಯಾಸ ಮಾಡುತ್ತಾ, ಉತ್ತರ ಕರ್ನಾಟಕದ ಜಾನಪದ ನಂಬಿಕೆ, ಸಂಪ್ರದಾಯಗಳನ್ನು ಕಂಬಾರರು ತಮ್ಮ ಸಾಹಿತ್ಯ ಕೃಷಿಯಲ್ಲಿ ದುಡಿಸಿಕೊಂಡಿದ್ದಾರೆ ಎಂದು ಹೇಳಿದರು .
ಕಲಾವಿದ-ಸಾಹಿತಿ ಪ್ರಾ. ಜಯಾನಂದ ಮಾದರ ಸಂಘಟನೆ ಮತ್ತು ಸಂಚಾಲಕತ್ವದಲ್ಲಿ ಶನಿವಾರದಂದು ಮೂಡಿಬಂದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸವದತ್ತಿಯ ವಿದ್ವಾಂಸರು ಡಾ.ವೈ.ಎಮ್. ಯಾಕೊಳ್ಳಿ ಮಾತನಾಡಿ, ಕಂಬಾರರ ನಾಟಕಗಳಲ್ಲಿ ಜೀವವನ್ನೇ ಪ್ರೀತಿಸುವ ಪಾತ್ರಗಳಿವೆ. ಇಡೀ ಜಗತ್ತನ್ನು ಕಾಪಾಡುವುದು ಸ್ತ್ರೀತ್ವ ಎಂಬುದನ್ನು ಸಿರಿಸಂಪಿಗೆ ಪ್ರತಿಪಾದಿಸುತ್ತದೆ ಮತ್ತು ಜಾನಪದವನ್ನು ಆಧುನೀಕರಣವಾಗಿ ಚಿತ್ರಿಸಿದ್ದಾರೆ ಎಂದು ಹೇಳಿದರು. ಶ್ರೀ ರಾಜೇಂದ್ರ ಕಲ್ಯಾಣಿ ಪರಿಚಯಿಸಿ ಸ್ವಾಗತಿಸಿದರು.


Spread the love

About inmudalgi

Check Also

ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ

Spread the love ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ ಮೂಡಲಗಿ: ಕೆರಳಾದ ಶ್ರೀ ಶಟ್ ಶಾಸ್ತ್ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ