Breaking News
Home / ತಾಲ್ಲೂಕು / ಸ್ಥಳೀಯ ಹಿರಿಯ ನಾಗರಿಕರ ನಿರ್ಧಾರಕ್ಕೆ ಕವಡೆಕಾಸಿನ ಕಿಮ್ಮತ್ತು ನೀಡದ ಬೆಟಗೇರಿ ಗ್ರಾಮದ ಜನರು ಹಾಗೂ ವ್ಯಾಪಾರಸ್ಥರು

ಸ್ಥಳೀಯ ಹಿರಿಯ ನಾಗರಿಕರ ನಿರ್ಧಾರಕ್ಕೆ ಕವಡೆಕಾಸಿನ ಕಿಮ್ಮತ್ತು ನೀಡದ ಬೆಟಗೇರಿ ಗ್ರಾಮದ ಜನರು ಹಾಗೂ ವ್ಯಾಪಾರಸ್ಥರು

Spread the love

ಬೆಟಗೇರಿ:ಸರ್ಕಾರ ಲಾಕ್‌ಡೌನ್ ತೆರವುಗೊಳಿಸಿದರೂ ಸಹ ಕರೋನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ಪ್ರತಿ ರವಿವಾರ ಸೇರುವ ಸಂತೆಯನ್ನು ರದ್ದುಗೊಳಿಸಲಾಗಿತ್ತು.

ಆದರೆ ಶನಿವಾರದಂದು ಅಪಾರ ಜನಸಂದಣಿಯೊoದಿಗೆ ಸಂತೆ ನಡೆದು, ಸ್ಥಳೀಯ ಹಿರಿಯ ನಾಗರಿಕರ ನಿರ್ಧಾರಕ್ಕೆ ಕವಡೆಕಾಸಿನ ಕಿಮ್ಮತ್ತು ಇಲ್ಲದಂತಾದ ಘಟನೆ ಆ.8 ರಂದು ನಡೆದಿದೆ.

ಬೆಟಗೇರಿ ಗ್ರಾಮ ಸುತ್ತಲಿನ ಹತ್ತೂರಿನ ಜನರ ವ್ಯಾಪಾರ ವಹಿವಾಟದ ಕೇಂದ್ರ ಸ್ಥಳವಾಗಿದ್ದರಿಂದ ನಿತ್ಯ ನೂರಾರು ಜನ ಇಲ್ಲಿಗೆ ಬಂದು ಹೋಗುವುದಲ್ಲದೇ ಪ್ರತಿ ರವಿವಾರದ ಸಂತೆಗೆ ಹತ್ತು ಸಾವಿರಕ್ಕೂ ಹೆಚ್ಚು ಜನ ಸೇರುತ್ತಾರೆ.

ಹೀಗಾಗಿ ಇಲ್ಲಿಯ ಹಿರಿಯ ನಾಗರಿಕರು ರವಿವಾರ ಸಂತೆ ಸೇರದಂತೆ ನಿರ್ಧರಿಸಿ ಆ2.ರ ಭಾನುವಾರ ಸೇರಿದಂತೆ ಅಗಸ್ಟ್ ತಿಂಗಳಲ್ಲಿ ಬರುವ ಎಲ್ಲಾ ರವಿವಾರದ ಸಂತೆಯನ್ನು ಸಂಪೂರ್ಣ ರದ್ದುಗೊಳಿಸಿದ ಕುರಿತು ಪ್ರಕಟನೆ ಮೂಲಕ ಸೂಚನೆ ಸಹ ನೀಡಲಾಗಿತ್ತು.

ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ನೂರಾರು ಜನರು, ಬೀದಿ ವ್ಯಾಪಾರಸ್ಥರು, ಹಣ್ಣು, ತರಕಾರಿ ಸೇರಿದಂತೆ ವಿವಿಧ ವಸ್ತುಗಳ ಮಾರಾಟಗಾರರು ಆ.2ರ ರವಿವಾರದ ಸಂತೆಗೆ ಗ್ರಾಮಕ್ಕೆ ಬಂದು ಸಂತೆ ರದ್ದುಗೊಳಿಸಿದ ಸುದ್ಧಿ ತಿಳಿದು ತಮ್ಮೂರಿನತ್ತ ಮರಳಿ ಹೊಗಿದ್ದರು. ಆದರೆ ಶನಿವಾರ ಆ.8 ರಂದು ಗ್ರಾಮದಲ್ಲಿ ಸಂತೆ ಅಪಾರ ಜನಜಂಗುಳಿ ಸೇರುವುದರೊಂದಿಗೆ ಬಲು ಜೋರಾಗಿ ನಡೆದು, ಕರೊನಾ ಸೋಂಕು ಬೆಟಗೇರಿ ಗ್ರಾಮದಲ್ಲಿ ಭಾರಿ ಪ್ರಮಾಣದಲ್ಲಿ ಅಬ್ಬರಿಸುವುದಂತೂ ನಿಜ ಅಂತಾ ಸ್ಥಳೀಯ ಪ್ರಜ್ಞಾವಂತ ನಾಗರಿಕರು ಕಳವಳ ವ್ಯಕ್ತಪಡಿಸುತ್ತಿದ್ದಾರೆ.

ಗ್ರಾಮದ ಹಿರಿಯ ನಾಗರಿಕರ ಮಾರ್ಗದರ್ಶನದಂತೆ ಇನ್ನೂ ಒಂದು (ಆಗಸ್ಟ್) ತಿಂಗಳಲ್ಲಿ ಬರುವ ಪ್ರತಿ ರವಿವಾರದ ಸಂತೆಯನ್ನು ರದ್ದುಗೊಳಿಸಲಾಗಿದೆ. ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ಗ್ರಾಮಸ್ಥರು ಸಹಕರಿಸಬೇಕು.

ಹಣ್ಣು, ತರಕಾರಿ ಸೇರಿದಂತೆ ವಿವಿಧ ವಸ್ತುಗಳನ್ನು ಗ್ರಾಮದಲ್ಲಿರುವ ಮನೆ ಮನೆಗೆ ಹೋಗಿ ಮಾರಾಟ ಮಾಡಬೇಕು ಎಂದು ಗ್ರಾಪಂ ಮಾಜಿ ಅಧ್ಯಕ್ಷ ಈಶ್ವರ ಬಳಿಗಾರ ಮನವಿ ಮಾಡಿಕೊಂಡಿದ್ದಾರೆ.

“ಲಾಕ್‌ಡೌನ್ ತೆರವುಗೊಂಡಿದೆ ಹೊರತು ಕರೊನಾ ಸೋಂಕು ಹರಡುವಿಕೆ ಇನ್ನೂ ಕಡಿಮೆ ಆಗಿಲ್ಲ, ಕರೊನಾ ತಡೆಗಟ್ಟುವ ನಿಟ್ಟಿನಲ್ಲಿ ಸ್ಥಳೀಯರು ತಪ್ಪದೇ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು.

ಎಚ್.ಎನ್.ಬಾವಿಕಟ್ಟಿ ಪಿಡಿಒ ಗ್ರಾಮ ಪಂಚಾಯತಿ ಬೆಟಗೇರಿ, ತಾ.ಗೋಕಾಕ.

ವರದಿ : ಅಡಿವೇಶ ಮುಧೋಳ.


Spread the love

About inmudalgi

Check Also

ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ. ಮುಖ್ಯೋಪಾದ್ಯಾಯ — ಚಂದ್ರಕಾಂತ ಬಿ. ಪೂಜೇರಿ

Spread the loveಮೂಡಲಗಿ : ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ ವಿದ್ಯಾರ್ಥಿಗಳು ತಂದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ