ಮೂಡಲಗಿ: ರಾಜ್ಯಸಭೆಗೆ ನೂತನವಾಗಿ ಆಯ್ಕೆಯಾಗಿರುವ ತಾಲ್ಲೂಕಿನ ಕಲ್ಲೋಳಿಯ ಈರಣ್ಣ ಕಡಾಡಿ ಅವರಿಗೆ ಪಟ್ಟಣದ ಬಸವೇಶ್ವರ ಅರ್ಬನ್ ಕ್ರೆಡಿಟ್ ಸೌಹಾರ್ದ ಸೊಸೈಟಿಯಲ್ಲಿ ಸನ್ಮಾನಿಸಿ ಗೌರವಿಸಿದರು.
ಅಧ್ಯಕ್ಷತೆವಹಿಸಿದ್ದ ಸೊಸೈಟಿ ಅಧ್ಯಕ್ಷ ಬಿ.ಬಿ. ಬೆಳಕೂಡ ಮಾತನಾಡಿ ‘ಗ್ರಾಮೀಣ ಭಾಗದಲ್ಲಿ ಜನಪರ ಕಾರ್ಯಗಳ ಮೂಲಕ ಗುರುತಿಸಿಕೊಂಡಿರುವ ಈರಣ್ಣ ಕಡಾಡಿ ಅವರು ಕಲ್ಲೋಳಿ ಪಟ್ಟಣಕ್ಕೆ ಬಹದೊಡ್ಡ ಗೌರವ ತಂದಿದ್ದಾರೆ’ ಎಂದರು.
ಈರಣ್ಣ ಕಡಾಡಿ ಅವರು ರಾಜ್ಯಸಭಾ ಸದಸ್ಯತ್ವದೊಂದಿಗೆ ರಾಜ್ಯ ರೈತ ಮೋರ್ಚಾದ ಅಧ್ಯಕ್ಷತೆಗೆ ನೇಮಕವಾಗಿದ್ದಾರೆ. ಕಡಾಡಿ ಅವರು ಕೃಷಿ, ಸಹಕಾರ ಹಾಗೂ ಗ್ರಾಮೀಣ ಭಾಗದ ಅಭಿವೃದ್ಧಿಗೆ ಹೆಚ್ಚು ಅವಕಾಶ ನೀಡಲಿ ಎಂದರು.
ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಈರಣ್ಣಾ ಕಡಾಡಿ ‘ಕಲ್ಲೋಳಿ ಜನರ ಪ್ರೀತಿ, ವಿಶ್ವಾಸ ಮತ್ತು ಸಹಕಾರದಿಂದಾಗಿ ರಾಜ್ಯಸಭಾ ಸದಸ್ಯ ಆಗುವಂತ ಅವಕಾಶ ದೊರೆತಿದೆ.
ಗ್ರಾಮೀಣ ಭಾಗದ ಬೆಳವಣಿಗೆಗೆ ಮೊದಲ ಆದ್ಯತೆಯನ್ನು ನೀಡುವೆನು ಎಂದರು.
ಇದೇ ಸಂದರ್ಭದಲ್ಲಿ ಕಲ್ಲೋಳಿಯ ವೀರಭದ್ರೇಶ್ವರ ಅರ್ಬನ್ ಕೋ.ಆಪ್. ಸೊಸೈಟಿ ಮತ್ತು ಬಸವೇಶ್ವರ ಸೊಸೈಟಿ ಸಿಬ್ಬಂದಿಯವರು ಕಡಾಡಿ ಅವರನ್ನು ಸನ್ಮಾನಿಸಿದರು.
ಅತಿಥಿಯಾಗಿ ಸೊಸೈಟಿ ಉಪಾಧ್ಯಕ್ಷ ಶಿವರುದ್ರ ಬಿ. ಪಾಟೀಲ ವೇದಿಕೆಯಲ್ಲಿದ್ದರು.
ಸೊಸೈಟಿ ನಿರ್ದೇಶಕರಾದ ಭೀಮಪ್ಪ ಕಡಾಡಿ, ಬಸಗೌಡ ಪಾಟೀಲ, ಎಂ.ಬಿ. ಖಾನಾಪೂರ, ಆರ್.ಬಿ. ದಬಾಡಿ, ಎಚ್.ಡಿ. ಪರಕನಟ್ಟಿ, ಸುಭಾಷ ಖಾನಾಪುರ, ಬಸಪ್ಪ ಹೆಬ್ಬಾಳ, ಪ್ರಕಾಶ ಕಲಾಲ, ಆರ್.ಎನ್. ಶಿರಗಾಂವಕರ, ವೀರಭದ್ರೇಶ್ವರ ಸೊಸೈಟಿ ಅಧ್ಯಕ್ಷ ಮಹಾಂತೇಶ ಪಾಟೀಲ, ನಿರ್ದೇಶಕರಾದ ಕಾಡೇಶ ಗೋರೋಶಿ, ಬಾಳಣ್ಣಾ ಕಂಕಣವಾಡಿ, ರಮೇಶ ಕವಟಕೊಪ್ಪ ಇದ್ದರು.
ಸೊಸೈಟಿ ಪ್ರಧಾನ ವ್ಯವಸ್ಥಾಪಕ ಎಚ್.ಎಸ್. ಖಾನಗೌಡ್ರ ನಿರೂಪಿಸಿದರು.
Check Also
‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’
Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …