ಭಾಷೆ ಭಾವನೆಗಳಿಗೆ ಬಾಯಿಯಿದ್ದಂತೆ: ಡಾ.ವೈ.ಎಮ್.ಭಜಂತ್ರಿ
ಗೋಕಾಕ: ಗೋಕಾವಿಯ ದೇಶೀಯ ಭಾಷೆ ವೈವಿಧ್ಯಮಯವಾದುದು, ನಮ್ಮ ಆಡು ಭಾಷೆಯೇ ಬದುಕಿನ ಭಾಷೆಯಾಗಿದೆ. ಭಾಷೆ ದೀಪವಿದ್ದಂತೆ ಮತ್ತು ಭಾಷೆ ಭಾವನೆಗಳಿಗೆ ಬಾಯಿಯಿದ್ದಂತೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಿಂಡೆಕೇಟ ಸದಸ್ಯರು ಮತ್ತು ಹುಬ್ಬಳ್ಳಿ ಸರಕಾರಿ ಪದವಿ ಕಾಲೇಜಿನ ಕನ್ನಡ ಅಧ್ಯಾಪಕರಾದ ಡಾ.ವೈ.ಎಮ್. ಭಜಂತ್ರಿ ಹೇಳಿದರು.
ಅವರು ಗೋಕಾವಿ ಗೆಳೆಯರ ಬಳಗ ಹಮ್ಮಿಕೊಂಡಿದ್ದ ಕೋವಿಡ್ -19 ಲಾಕ್ಡೌನ್ ಗೂಗಲ್ ಮೀಟಿನಲ್ಲಿ ಸೆಮಿನಾರ್ ಅಲ್ಲ ವೇಬಿನರ್ ವಿಶೇಷ ಉಪನ್ಯಾಸ ಮಾಲಿಕೆ 24 ನೇ ಗೋಷ್ಠಿಯಲ್ಲಿ
“ಗೋಕಾವಿ ದೇಶೀಯ ಭಾಷೆ ಮತ್ತು ಸಂಸ್ಕೃತಿ” ವಿಷಯ ಕುರಿತು ಉಪನ್ಯಾಸ ಮಾಡುತ್ತಾ, ನಮ್ಮ ನಾಗರಿಕತೆ ಬೆಳೆದಂತೆಲ್ಲ ದೇಶೀಯತೆ ಕಡಿಮೆಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸುತ್ತಾ ಬದುಕಿನ ಭಾಷೆಯಿಂದ ಹೊರಬರಲು ಸಾಧ್ಯವಿಲ್ಲ ಎಂದು ಹೇಳಿದರು.
ಕಲಾವಿದ-ಸಾಹಿತಿ ಪ್ರಾ. ಜಯಾನಂದ ಮಾದರ ಸಂಘಟನೆ ಮತ್ತು ಸಂಚಾಲಕತ್ವದಲ್ಲಿ ರವಿವಾರದಂದು ಮೂಡಿಬಂದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಚಿಕ್ಕೋಡಿಯ ಹಿರಿಯ ಸಾಹಿತಿ ವಿದ್ವಾಂಸರಾದ ಪ್ರೊ. ಎಸ್.ವೈ ಹಂಜಿ ಮಾತನಾಡಿ, ಇಂದಿನ ಸಾಹಿತ್ಯ ವೆಲ್ಲಾ ದೇಶೀಯ ನೆಲೆಗಟ್ಟಿನಲ್ಲಿ ಅರಳಿವೆ. ಇಂತಹ ಜನಪದೀಯ ಭಾಷೆಯ ಉಳಿವಿಗೆ ಏನು ಮಾಡಬೇಕೆಂಬ ಅಲೋಚನೆಗಳ ಅಗತ್ಯವಿದೆ ಎಂದು ಹೇಳಿದರು.
ಕನ್ನಡ ಅಧ್ಯಾಪಕಿ ಪ್ರೊ. ವಿದ್ಯಾ ರಡ್ಡಿ ಪರಿಚಯಿಸಿ ಸ್ವಾಗತಿಸಿದರು.