ಜೆಡಿಎಸ್ ಎಸ್ಸಿ ಎಸ್ಟಿ ಘಟಕದ ಉಪಾಧ್ಯಕ್ಷರಾಗಿ ಶ್ರೀನಿವಾಸ ಆಯ್ಕೆ..!
ಬೆಳಗಾವಿ: ನಗರದ ಜನತಾದಳ ಪಕ್ಷದ ಕಾರ್ಯಾಲಯದಲ್ಲಿ ಇಂದು ಪಕ್ಷದ ಹಿರಿಯರು ಹಾಗೂ ಜಿಲ್ಲಾ ಅಧ್ಯಕ್ಷ ಶಂಕರ ಮಾಡಲಗಿ ಮತ್ತು ಕಾರ್ಯಕರ್ತರ ಸಭೆಯಲ್ಲಿ ಬೆಳಗಾವಿ ಜಿಲ್ಲಾ ಘಟಕದ ಉಪಾಧ್ಯಕ್ಷ ಸ್ಥಾನಕ್ಕೆ ಶ್ರೀನಿವಾಸ ಲಮಾಣಿಯವರನ್ನು ಆಯ್ಕೆ ಮಾಡಿ ಆದೇಶ ನೀಡಿದರು.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಜನತಾದಳದ ರಾಜ್ಯಾದ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಆದೇಶದ ಮೇರೆಗೆ ಬೆಳಗಾವಿ ಜಿಲ್ಲಾ ಅಧ್ಯಕ್ಷ ಶಂಕರ ಮಾಡಲಗಿ ಪಕ್ಷದ ಕಾರ್ಯಕರ್ತರ ಕಾರ್ಯಕ್ಷಮತೆ ಗುರುತಿಸಿ ಸವದತ್ತಿಯ ಶ್ರೀನಿವಾಸ ಲಮಾಣಿಯವರನ್ನು ಬೆಳಗಾವಿ ಜಿಲ್ಲೆಯ ಎಸ್ಸಿಎಸ್ಟಿ ಘಟಕದ ಉಪಾಧ್ಯಕ್ಷರಾಗಿ ಆಯ್ಕೆಮಾಡಿ, ಪಕ್ಷದ ಸಂಘಟನೆ ಮಾಡಲು ಮತ್ತು ಪಕ್ಷದ ಪರವಾಗಿ ಸಮಾಜಸೇವೆ ಮಾಡಲು ಸೂಚಿದರು.
ಕಾರ್ಯಕ್ರಮದಲ್ಲಿ ಪಕ್ಷದ ಯುವ ಘಟಕದ ಹುಮಾಯ್ಯುನ್, ಸವದತ್ತಿ ತಾಲೂಕಾ ಮಹಾ ಪ್ರದಾನ ಕಾರ್ಯದರ್ಶಿ ಎಮ್ ಎಸ್ ರೆಣ್ಕೆಗೌಡರ ಮತ್ತು ಕಾರ್ಯಕರ್ತರು ಭಾಗಿಯಾಗಿದ್ದರು.