Breaking News
Home / ತಾಲ್ಲೂಕು / ಮೂಡಲಗಿ ಸ್ಮಶಾನದ ತುಂಬೆಲ್ಲ ಕೊರೋನಾ ಪಿಪಿ ಕಿಟ್, ಜನತೆ ಆತಂಕದಲ್ಲಿ !

ಮೂಡಲಗಿ ಸ್ಮಶಾನದ ತುಂಬೆಲ್ಲ ಕೊರೋನಾ ಪಿಪಿ ಕಿಟ್, ಜನತೆ ಆತಂಕದಲ್ಲಿ !

Spread the love

ಮೂಡಲಗಿ: ಕೋವಿಡ್ 19 ಕೊರೋನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಗಳ ಶವಸಂಸ್ಕಾರದಲ್ಲಿ ಬಳಸಿದ ಪಿಪಿಇ ಕಿಟ್, ಹ್ಯಾಂಡಗ್ಲೌಜ ಮತ್ತು ಶವಕ್ಕೆ ಪ್ಯಾಕ್ ಮಾಡಿದ ಪ್ಲಾಸ್ಟಿಕ್‍ಗಳು ಸ್ಮಶಾನದಲ್ಲಿ ಕಂಡು ಬಂದಿವೆ ಎಂದು ಪರಿಸರ ಪ್ರೇಮಿ ಈರಪ್ಪ ಢವಳೇಶ್ವರ ತಿಳಿಸಿದ್ದಾರೆ.

ಸ್ಮಶಾನದಲ್ಲಿ ಗಿಡಗಳನ್ನು ಹಚ್ಚಿ ಪೋಷಣೆ ಮಾಡುತ್ತಿರುವ ಈರಪ್ಪ ಢವಳೇಶ್ವರ ಪ್ರತಿದಿನದಂತೆ ನೆಟ್ಟ ಗಿಡಗಳ ವೀಕ್ಷಣೆಗೆ ಹೋದಾಗ ಶವಸಂಸ್ಕಾರ ಮಾಡಿದ ವಸ್ತುಗಳ ಪೋಟೋಗಳನ್ನು ವೈರಲ್ ಮಾಡಿದ್ದಾರೆ.

ಈ ಬಗ್ಗೆ ಪತ್ರಿಕೆ ವಿಚಾರಿಸಿದಾಗ ಸೋಂಕಿನಿಂದ ಮೃತಪಟ್ಟವರ ಶವಸಂಸ್ಕಾರ ಮಾಡುವ ಸ್ಥಳೀಯ ಕಮಿಟಿಯೊಂದರ ಸದಸ್ಯರು ತಾವು ಶವಸಂಸ್ಕಾರದ ನಂತರ ಬಳಸಿದ ಬದ್ರತೆಯ ವಸ್ತುಗಳನ್ನು ತೆಗ್ಗು ಅಗೆದು ಮುಚ್ಚಿರುದಾಗಿ ಇದಕ್ಕೆ ಸಾಕ್ಷಿಯಾಗಿ ಗೋರಿ ಅಗೆಯಲು ಬಂದ ಜೆ.ಸಿ.ಬಿ.ಚಾಲಕ ಇದ್ದಾನೆ ಎಂದು ಹೇಳಿದರು. ನಂತರ ಅರೋಗ್ಯ ಇಲಖೆಯ ಸಿಬ್ಬಂದಿ ಸ್ಮಶಾನದ ಒಳಗಡೆ ಹೋಗಿಲ್ಲ ಇವು ನಮಗೆ ಸಂಬಂದಿಸಿದ್ದಲ್ಲ ಎಂದು ಹೇಳುತ್ತಾರೆ.

“ಇದ್ದ ಮೂವರಲ್ಲಿ ಕದ್ದವರಾರು ಎಂಬಂತೆ 3ನೇ ವ್ಯಕ್ತಿಗಳಾದ ಶವ ತಂದ ಅಂಬುಲೆನ್ಸ ಸಿಬ್ಬಂದಿಯೆ ಇರಬೇಕೆಂದು ಈ ಬಗ್ಗೆ ಸ್ಥಳೀಯ ಪುರಸಭೆ ಮುಖ್ಯಾಧಿಕಾರಿಗಳಿಗೆ ತಿಳಿಸಲಾಗಿದೆ.

ಅಂಬುಲೆನ್ಸ ಸಿಬ್ಬಂದಿಯೂ ಕೈ ಮೇಲೆ ಎತ್ತಿದರೆ ಸ್ಮಶಾನದಲ್ಲಿ ಚೆಲ್ಲಿದ ವಸ್ತುಗಳ ಬಗ್ಗೆ ಅ “ಸತ್ಯ ಹರಿಶ್ಚಂದ್ರ”ನೇ ಸತ್ಯ ಹೇಳಬೇಕಾಗುತ್ತದೆ.


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ