Breaking News
Home / ತಾಲ್ಲೂಕು / ಮೂಡಲಗಿಯ ಲಯನ್ಸ್ ಕ್ಲಬ್ ಪರಿವಾರದ 2020-21ನೇ ಸಾಲಿನ ಪದಗ್ರಹಣ ಮತ್ತು ಅಧಿಕಾರ ಹಸ್ತಾಂತರ

ಮೂಡಲಗಿಯ ಲಯನ್ಸ್ ಕ್ಲಬ್ ಪರಿವಾರದ 2020-21ನೇ ಸಾಲಿನ ಪದಗ್ರಹಣ ಮತ್ತು ಅಧಿಕಾರ ಹಸ್ತಾಂತರ

Spread the love

ಮೂಡಲಗಿಯ ಲಯನ್ಸ್ ಕ್ಲಬ್ ಪರಿವಾರದ 2020-21ನೇ ಸಾಲಿನ ಪದಗ್ರಹಣ ಮತ್ತು ಅಧಿಕಾರ ಹಸ್ತಾಂತರ ಕಾರ್ಯಕ್ರಮವನ್ನು ಹಿರಿಯ ನ್ಯಾಯವಾದಿ ಗುರುದೇವ ಸಿದ್ಧಾಪುರಮಠ ಉದ್ಘಾಟಿಸಿದರು.
2020-21ರ ಮೂಡಲಗಿ ಲಯನ್ಸ್ ಕ್ಲಬ್ ಪರಿವಾರದ ಪದಗ್ರಹಣ

ಮೂಡಲಗಿ: ‘ಯಾವುದೇ ಫಲಾಪೇಕ್ಷೆ ಇಲ್ಲದೆ ನಿಸ್ವಾರ್ಥ ಮನೋಭಾವದಿಂದ ಮಾಡುವ ಸೇವೆಯು ನಿಜವಾದ ಸಮಾಜ ಸೇವೆಯಾಗುವುದು’ ಎಂದು ಗೋಕಾಕದ ಹಿರಿಯ ನ್ಯಾಯವಾದಿ ಗುರುದೇವ ಸಿದ್ದಾಪುರಮಠ ಹೇಳಿದರು.
ಇಲ್ಲಿಯ ಸಾಯಿ ಕಾಲೇಜು ಸಭಾ ಭವನದಲ್ಲಿ ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದ 2020-21ರ ಪದಗ್ರಹಣ ಮತ್ತು ಅಧಿಕಾರ ಹಸ್ತಾಂತರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಸಮಾಜ ಸೇವೆಯು ಪ್ರತಿ ವ್ಯಕ್ತಿಯ ಬದುಕಿನ ಭಾಗವಾಗಬೇಕು ಎಂದರು.
ಸಮಾಜ ಸೇವೆಯು ವ್ಯಕ್ತಿಯ ಮನಸ್ಸಿನ ಬದ್ದತೆ ಮತ್ತು ಸ್ವಯಂ ಪ್ರೇರಣೆಯಿಂದ ನಡೆಯುವಂತದ್ದು. ಸೇವೆಯಲ್ಲಿ ದೊರೆಯುವ ಆತ್ಮತೃಪ್ತಿ ಮತ್ತು ನೆಮ್ಮದಿ ಅದಕ್ಕೆ ಮೌಲ್ಯ ಕಟ್ಟಲು ಸಾಧ್ಯವಿಲ್ಲ ಎಂದರು.
ಮೂಡಲಗಿ ಲಯನ್ಸ್ ಪರಿವಾರವು ಕಳೆದ ಐದು ವರ್ಷಗಳ ಅವಧಿಯಲ್ಲಿ ಸಾಮಾಜಿಕ ಅತ್ಯುತ್ತಮ ಕಾರ್ಯಗಳನ್ನು ಮಾಡಿದ್ದು ಶ್ಲಾಘನೀಯವಾಗಿದೆ. ಪ್ರಸಕ್ತ ವರ್ಷದಲ್ಲಿ ಸ್ವಂತ ನಿವೇಶ ಮಾಡಿಕೊಂಡು ಕಟ್ಟಡ ನಿರ್ಮಿಸಿಕೊಳ್ಳಬೇಕು ಎಂದರು.
ಅತಿಥಿ ಶ್ರೀಪಾದಬೋಧ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಪ್ರೊ. ಬಿ.ಸಿ. ಹೆಬ್ಬಾಳ ಕರ್ತವ್ಯ ಮತ್ತು ಸೇವೆ ಭಿನ್ನವಾಗಿದ್ದು, ಸಾಮಾಜಿಕ ಕಳಕಳಿ ಇದ್ದರೆ ಸೇವಾ ಮನೋಭಾವ ಬೆಳೆಸುತ್ತದೆ ಎಂದರು.
ನೂತನ ಅಧ್ಯಕ್ಷ ಪುಲಕೇಶ ಸೋನವಾಲಕರ, ಕಾರ್ಯದರ್ಶಿ ಸಂಜಯ ಮೋಕಾಶಿ, ಖಜಾಂಚಿ ಸಂಜಯ ಮಂದ್ರೋಳಿ ಹಾಗೂ ಇತರ ಪ್ರದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು.
ನೂತನ ಅಧ್ಯಕ್ಷ ಪುಲಕೇಶ ಸೋನವಾಲಕ ಮಾತನಾಡಿ ಉಚಿತ ಆರೋಗ್ಯ ತಪಾಸಣೆ, ಪಶುಗಳ ಉಚಿತ ಆರೋಗ್ಯ ತಪಾಸಣೆ, ಸ್ವಚ್ಛತೆ ಜಾಗೃತಿ, ರಸ್ತೆ ಸುರಕ್ಷತೆ ಮತ್ತು ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ, ವೃತ್ತಿ ಮಾರ್ಗದರ್ಶನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ತಮ್ಮ ಅಧಿಕಾರವದಿಯಲ್ಲಿ ಲಯನ್ಸ್ ಕ್ಲಬ್‍ಕ್ಕೆ ನಿವೇಶನ ಪಡೆದು ಕಟ್ಟಡ ನಿರ್ಮಿಸುವುದಾಗಿ ¨
ಲಯನ್ಸ್ ವಿಭಾಗೀಯ ಅಧ್ಯಕ್ಷ ವೆಂಕಟೇಶ ಸೋನವಾಲಕರ, ಜಿಲ್ಲಾ ಚೇರಪರಸನ್ಸ್‍ರಾದ ಪ್ರಕಾಶ ಬಾಗೇವಾಡಿ, ಈರಣ್ಣ ಕೊಣ್ಣೂರ, ಶ್ರೀಶೈಲ್ ಲೋಕನ್ನವರ ಮತ್ತು ಸೋಮು ಹಿರೇಮಠ, ಶಿವಾನಂದ ಕಿತ್ತೂರ ವೇದಿಕೆಯಲ್ಲಿದ್ದರು.
ಸಮಾರಂಭದ ಪೂರ್ವದಲ್ಲಿ ಸಾಂಕೇತಿಕವಾಗಿ ಸಸಿಗಳನ್ನು ನೆಟ್ಟರು.
ಬಾಲಶೇಖರ ಬಂದಿ ಪ್ರಾಸ್ತಾವಿಕ ಮಾತನಾಡಿದರು. ಪವಿತ್ರಾ ಕೊಣ್ಣೂರ ಪ್ರಾರ್ಥಿಸಿದರು.
ಪ್ರಕಾಶ ಬಾಗೇವಾಡಿ ಸ್ವಾಗತಿಸಿದರು, ಮಲ್ಲಿನಾಥ ಶೆಟ್ಟಿ, ಮಹಾವೀರ ಸಲ್ಲಾಗೋಳ ನಿರೂಪಿಸಿದರು.


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ