Breaking News
Home / ತಾಲ್ಲೂಕು / ಅಹಂಕಾರವನ್ನು ಸಂಹಾರ ಮಾಡುವ ಸಲುವಾಗಿ ಶಿವನು ವೀರಭದ್ರೇಶ್ವರ ಅವತಾರವನ್ನು ತಾಳಬೇಕಾಯಿತು’ – ಡಾ. ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮ್ಭಿಜಿಗಳು

ಅಹಂಕಾರವನ್ನು ಸಂಹಾರ ಮಾಡುವ ಸಲುವಾಗಿ ಶಿವನು ವೀರಭದ್ರೇಶ್ವರ ಅವತಾರವನ್ನು ತಾಳಬೇಕಾಯಿತು’ – ಡಾ. ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮ್ಭಿಜಿಗಳು

Spread the love

ಡಾ. ಶಿವಲಿಂಗ ಮುರುಘರಾಜೇಂದ್ರ ಸ್ವಾಮೀಜಿಗಳ ನುಡಿ ಧರ್ಮದ ನೆಲೆಗಾಗಿ ವೀರಭದ್ರೇಶ್ವರನು ಅವತರಿಸಿದ
ಮೂಡಲಗಿ: ‘ಗರ್ವ ಮತ್ತು ಅಹಂಕಾರವನ್ನು ಸಂಹಾರ ಮಾಡುವ ಸಲುವಾಗಿ ಶಿವನು ವೀರಭದ್ರೇಶ್ವರ ಅವತಾರವನ್ನು ತಾಳಬೇಕಾಯಿತು’ ಎಂದು ಭಾಗೋಜಿಕೊಪ್ಪ, ಮುನ್ಯಾಳದ ಡಾ. ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮ್ಭಿಜಿಗಳು ಹೇಳಿದರು.
ಇಲ್ಲಿಯ ವೀರಭದ್ರೇಶ್ವರ ದೇವಸ್ಥಾನದಲ್ಲಿ ವೀರಭದ್ರೇಶ್ವರ ಸಮಿತಿಯವರು ಆಚರಿಸಿದ ವೀರಭದ್ರೇಶ್ವರ ಜಯಂತ್ಯೋತ್ಸವ ಸಮಾರಂಭವನ್ನು ದೀಪಕ್ಕೆ ತೈಲವನ್ನು ಹಾಕುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಪರಶಿವನು ಅಧರ್ಮ ಮತ್ತು ಜಗದ ಅಹಂಕಾರವನ್ನು ಮುಕ್ತಗೊಳಿಸಿ ಧರ್ಮವನ್ನು ನೆಲೆಗೊಳಿಸಿದರು ಎಂದರು.
ನಾಡಿನ ತುಂಬೆಲ್ಲಿ ಪೂಜೀತಗೊಳ್ಳುತ್ತಿರುವ ವೀರಭದ್ರೇಶ್ವರರ ಜಯಂತ್ಯುತ್ಸವ ನಾಡಿನ ತುಂಬೆಲ್ಲ ಆಚರಿಸುತ್ತಿದ್ದು, ಬರುವ ವರ್ಷದಲ್ಲಿ ಜಯಂತಿಯನ್ನು ಇನ್ನೂ ಅದ್ದೂರಿಯಿಂದ ಆಚರಿಸಲು ಸಮಿತಿಯವರಿಗೆ ಸಲಹೆ ನೀಡಿದರು.
ನಾಗನೂರಿನ ಕಾವ್ಯಶ್ರೀ ಅಮ್ಮನವರು ಮಾತನಾಡಿ ವೀರಭದ್ರೇಶ್ವರ ಮಹಾತ್ಮೆ ಕುರಿತು ಪ್ರವಚನ ನೀಡಿದರು. ವೇದಮೂರ್ತಿ ಶಿವಪುತ್ರಯ್ಯ ಮಠಪತಿ ಪ್ರಾಸ್ತಾವಿಕ ಮಾತನಾಡಿದರು.
ಅಧ್ಯಕ್ಷತೆವಹಿಸಿದ್ದ ಶ್ರೀ ವೀರಭದ್ರೇಶ್ವರ ಸಮಿತಿಯ ಅಧ್ಯಕ್ಷ ಬಿ.ಬಿ. ಹಂದಿಗುಂದ ಮಾತನಾಡಿ ಬರುವ ವರ್ಷಗಳಲ್ಲಿ ವಿರಭದ್ರೇಶ್ವರ ಜಯಂತ್ಯುತ್ಸವನ್ನು ಅದ್ದೂರಿಯಾಗಿ ಮಾಡುವ ಸಂಕಲ್ಪ ಮಾಡಿದ್ದು, ಎಲ್ಲ ಭಕ್ತರು ಸಹಕಾರ ನೀಡಬೇಕು ಎಂದರು.
ವೇದಿಕೆಯಲ್ಲಿ ವೀರಭದ್ರೇಶ್ವರ ಸಮಿತಿ ಉಪಾಧ್ಯಕ್ಷ ರಾಮಣ್ಣ ಸೋನವಾಲಕರ, ಮಹಾಲಕ್ಷ್ಮೀ ಕೋ.ಆಪ್. ಕ್ರೆಡಿಟ್ ಸೊಸೈಟಿ ಅಧ್ಯಕ್ಷ ಶಿವಬಸು ಖಾನಟ್ಟಿ ಅತಿಥಿಯಾಗಿ ಉಪಸ್ಥಿತರಿದ್ದರು.
ಮುತ್ತಯ್ಯ ವೀರುಪಾಕ್ಷಯ್ಯ ಅವರಿಂದ ವೇದಘೋಷ ಜರುಗಿತು, ಸಂಗಯ್ಯ ಮಠಪತಿ ಭಕ್ತಿಗೀತೆ ಹೇಳಿದರು, ನಾಗಮ್ಮ ಪೂಜೇರಿ ಪ್ರಾರ್ಥಿಸಿದರು.
ವೀರಭದ್ರೇಶ್ವರ ಸಮಿತಿ ಕಾರ್ಯದರ್ಶಿ ಮಲ್ಲಪ್ಪ ಗಾಣಿಗೇರ ಸ್ವಾಗತಿಸಿದರು, ಬಾಲಶೇಖರ ಬಂದಿ ನಿರೂಪಿಸಿದರು, ಈಶ್ವರ ಗೊಲಶೆಟ್ಟಿ ವಂದಿಸಿದರು.
ತೊಟ್ಟಿಲೋತ್ಸವ: ಸಮಾರಂಭದ ನಂತರ ತೊಟ್ಟಿಲೋತ್ಸವ ಕಾರ್ಯಕ್ರಮ ಜರುಗಿತು. ಮಹಿಳೆಯರಿಗೆ ಉಡಿ ತುಂಬಿದರು ಮತ್ತು ಎಲ್ಲ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಿದ್ದರು.


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ