Breaking News
Home / ತಾಲ್ಲೂಕು / ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತವತಿಯಿಂದ ಶನಿವಾರ ಆಚರಿಸಿದ ವಚನ ದಿನ ಕಾರ್ಯಕ್ರಮ

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತವತಿಯಿಂದ ಶನಿವಾರ ಆಚರಿಸಿದ ವಚನ ದಿನ ಕಾರ್ಯಕ್ರಮ

Spread the love

ಮೂಡಲಗಿ ತಾಲ್ಲೂಕಿನ ಕಲ್ಲೋಳಿಯ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಆತಿಥ್ಯದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತವತಿಯಿಂದ
ಶನಿವಾರ ಆಚರಿಸಿದ ವಚನ ದಿನ ಕಾರ್ಯಕ್ರಮವನ್ನು ಸಂಸ್ಥೆಯ ಅಧ್ಯಕ್ಷ ಬಸಗೌಡ ಪಾಟೀಲ ಉದ್ಘಾಟಿಸಿದರು.

ಮೂಡಲಗಿ ಮತ್ತು ಗೋಕಾಕದ ಶರಣ ಸಾಹಿತ್ಯ ಪರಿಷತ್ತಿನಿಂದ ‘ವಚನ ದಿನ’ ಆಚರಣೆ
ಶರಣರ ಒಂದೊಂದು ವಚನಗಳು ಅಮೃತದ ಹನಿಗಳಿದ್ದಂತೆ
ಮೂಡಲಗಿ: ‘ಬಸವಾದಿ ಶರಣರ ವಚನ ಸಾಹಿತ್ಯವು ಕನ್ನಡ ನಾಡಿನ ಬಹುದೊಡ್ಡ ನಿಧಿಯಾಗಿದ್ದು, ಶರಣರ ಒಂದೊಂದು ವಚನಗಳು ಅಮೃತದ ಹನಿಗಳಿದ್ದಂತೆ’ ಎಂದು
ಕಲ್ಲೋಳಿಯ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಸಗೌಡ ಎಸ್. ಪಾಟೀಲ ಹೇಳಿದರು.
ತಾಲ್ಲೂಕಿನ ಕಲ್ಲೋಳಿಯ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಆತಿಥ್ಯದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮೂಡಲಗಿ
ಗೋಕಾಕ ಘಟಕಗಳು ಸಂಯುಕ್ತವಾಗಿ ಏರ್ಪಡಿಸಿದ್ದ ‘ವಚನ ದಿನ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ವಚನಗಳನ್ನು
ಓದಿಷ್ಟು ಜ್ಞಾನ ವೃದ್ಧಿಯಾಗುವುದರೊಂದಿಗೆ ಆದರ್ಶ ಬದುಕನ್ನು ಕಟ್ಟಿಕೊಡುತ್ತವೆ ಎಂದರು.
ಶರಣ ಸಾಹಿತ್ಯ ಪರಿಷತ್‍ನ ಗೋಕಾಕ ಘಟಕದ ಕಾರ್ಯದರ್ಶಿ ಸೋಮಶೇಖರ ಮಗದುಮ್ ಮಾತನಾಡಿ ನಡೆ ಮತ್ತು ನುಡಿಯಲ್ಲಿ ಒಂದೇ ಇರಬೇಕು ಎನ್ನುವುದು
ಶರಣರು ವಚನಗಳಲ್ಲಿ ಪ್ರತಿಪಾಸಿದ್ದರು. ವಚನಗಳ ಸಂಗ್ರಹ ಮಾಡಿ ಮುದ್ರಣ ರೂಪದಲ್ಲಿ ಕಟ್ಟಿಕೊಟ್ಟಿರುವ ಡಾ. ಫ. ಗು. ಹಳಕಟ್ಟಿಯವರ ಕಾರ್ಯವು ಬಸವಣ್ಣವರಷ್ಟೇ
ಪ್ರಚಲಿತವಾಗಿದೆ ಎಂದರು.
ಸುತ್ತೂರು ಜಗದ್ಗುರು ಡಾ. ಶಿವರಾತ್ರಿ ರಾಜೇಂದ್ರ ಸ್ವಾಮೀಜಿಗಳು ಸ್ಥಾಪಿಸಿದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಸಂಸ್ಥಾಪನ ದಿನ
ಹಾಗೂ ಶ್ರೀಗಳ ಜನ್ಮದಿನವನ್ನು ಪ್ರತಿ ವರ್ಷ ವಚನ ದಿನವನ್ನಾಗಿ ಆಚರಿಸಿ, ವಚನಗಳ ಮಹತ್ವವನ್ನು ಸಮಾಜಕ್ಕೆ ಸಾರಲಾಗುತ್ತಿದೆ ಎಂದರು.
ಅತಿಥಿ ಶರಣ ಪರಿಷತ್ ಗೌರವ ಅಧ್ಯಕ್ಷ ಬಾಲಶೇಖರ ಬಂದಿ ಮಾತನಾಡಿ ವಚನ ದಿನವು ಕೇವಲ ಆಗಷ್ಟ್ 29ಕ್ಕೆ ಮಾತ್ರ ಸೀಮಿತವಾಗದೆ, ಪ್ರತಿ ನಿತ್ಯ ವಚನ ದಿನವಾಗಬೇಕು.
ಅಂದಾಗ ಮಾತ್ರ ಆದರ್ಶ ಸಮಾಜ ಮತ್ತು ಗಾಂಧೀಜಿಯವರ ರಾಮರಾಜ್ಯ ಕನಸು ನನಸಾಗಲು ಸಾಧ್ಯ ಎಂದರು.
ಪ್ರೊ. ಸುಭಾಷ ವಾಲಿಕಾರ ಅವರು ‘ವಚನ ಸಾಹಿತ್ಯದ ಮಹತ್ವ ಮತ್ತು ವಿಶೇಷತೆ’ ಕುರಿತು ಮತ್ತು ಪ್ರೊ. ಬಿ.ಎ. ದೇಸಾಯಿ ‘ವಚನ ಸಾಹಿತ್ಯ
ಮತ್ತು ಜೀವನ ಮೌಲ್ಯಗಳು’ ಕುರಿತು ಉಪನ್ಯಾಸ ನೀಡಿದರು.
ಶರಣ ಸಾಹಿತ್ಯ ಪರಿಷತ್ತಿನ ಮೂಡಲಗಿ ಘಟಕದ ಅಧ್ಯಕ್ಷ ಡಾ. ಸುರೇಶ ಹನಗಂಡಿ ಪ್ರಾಸ್ತಾವಿಕ ಮಾತನಾಡಿದರು.
ಸಂಸ್ಥೆ ನಿರ್ದೇಶಕ ಸಾತಪ್ಪ ಖಾನಾಪುರ ಅತಿಥಿಯಾಗಿ ವೇದಿಕೆಯಲ್ಲಿದ್ದರು.
ವಚನ ಕುರಿತು ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು.
ಪ್ರೊ. ಸುರೇಶ ಮುದ್ದಾರ, ಪ್ರೊ. ಡಿ.ಎಸ್. ಹುಗ್ಗಿ, ಬಿ.ಕೆ. ಸೊಂಟನವರ, ರಾಜು ಉಪ್ಪಾರ ಭಾಗವಹಿಸಿದ್ದರು.
ಪ್ರೊ. ಶಂಕರ ನಿಂಗನೂರ, ಪ್ರೊ. ಮಹಾದೇವ ಪೋತರಾಜ ನಿರೂಪಿಸಿದರು, ಪರಿಷತ್ ಕಾರ್ಯದರ್ಶಿ ಪ್ರೊ. ಬಿ.ಎಲ್. ಮಾದಗೌಡರ ವಂದಿಸಿದರು.
ವಚನಗಳ ಕುರಿತು ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಏರ್ಪಡಿದ್ದ ಪ್ರಬಂಧ ಸ್ಪರ್ಧೆ ವಿಜೇತರು: ತೇಜಶ್ವಿನಿ ಮರಡಿ (ಪ್ರಥಮ),
ಸರೋಜಿನಿ ಗಾಣಿಗೇರ (ದ್ವಿತೀಯ), ಸೂರಜ ಹೆಬ್ಬಾಳ (ತೃತೀಯ) ಸಾರ್ವಜನಿಕ ವಿಭಾಗದಲ್ಲಿ ಅಭಿಷೇಕ ಹಿರಲಕ್ಕಿ(ಪ್ರಥಮ).


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ