ಮೊಹರಮ್ ಹಬ್ಬದ ನಿಮಿತ್ಯ ಕರ್ಬಲ್ ಮತ್ತು ರಿವಾಯತ್ ಪದಗಳು
ಮೂಡಲಗಿ: ತಾಲೂಕಿನ ಪಿ.ಜಿ.ಹುಣಶ್ಯಾಳ ಗ್ರಾಮದಲ್ಲಿ ಶನಿವಾರ ಸಾಯಂಕಾಲ ಮೊಹರಮ್ ಹಬ್ಬದ ನಿಮಿತ್ತ ವಿವಿಧ ತಂಡಗಳಿಂದ ಕರ್ಬಲ್ ಮತ್ತು ರಿವಾಯತ್ ಪದಗಳ ಸರಳ ಕಾರ್ಯಕ್ರಮ ಜರುಗಿತು.
ಪ್ರತಿ ವರ್ಷ ಈ ಗ್ರಾಮದಲ್ಲಿ ಹಿಂದೂ ಮುಸ್ಲಿಂ ಬಾಂದವರು ಭಾವೈಕ್ಯತೆಯಿಂದ ಮೊಹರಂ ಹಬ್ಬ ಆಚರಿಸುವ ವಾಡಿಕೆ ಈ ಬಾರಿ ಕೊರೋನಾದಿಂದ ಸರಳವಾಗಿ ಆಚರಿಸಿ, ಮೊಹರಂ ಕತ್ತಲ ರಾತ್ರಿ ಅಂಗವಾಗಿ ನಡೆದ ಕರ್ಯಕ್ರಮದಲ್ಲಿ ಲೇಜಿಮ್,ಹಲಗಿ ಕುಣಿತದೊಂದಿಗೆ ಹಾಡುಗಳ ಸ್ಪರ್ದೆಯಲ್ಲಿ ಮೂಡಲಗಿಯ ಎರಡು ಹಾಗೂ ಹುಣಶ್ಯಾಳ ಗ್ರಾಮದ ಎರಡು ತಂಡಗಳು ಭಾಗವಹಿಸಿ ಬೀಬಿ ಫಾತಿಮಾ,ಹಸೇನ ಹುಸೇನ ಕುರಿತು ‘ಬೀಬಿ ಫಾತಿಮಾನ ಕತಿ ಕೇಳರಿ ಕುಂತ’ಎಂಬ ವಿವಿಧ ಕರ್ಬಲ್,ರಿವಾಯತ್ ಪದಗಳನ್ನು ಹಾಡಿದರು. ಮೂಡಲಗಿಯ ಸಯ್ಯದ ಮತ್ತು ಗದ್ಯಾಳ ತಂಡದಲ್ಲಿ ಅಂಧ ಕಲಾವಿದ ಶಬ್ಬೀರ ಸಯ್ಯದ ಹಾಗೂ ಹುಸೇನಸಾಬ ಮನಗೂಳಿ ಹಾಡಿದ ಹಾಡುಗಳು ಜನಮನ ಸೆಳೆದವು ಸಹ ಕಲಾವಿದರಾದ ಮರಮಸಾಬ ಗದ್ಯಾಳ,ಸುಲೇಮಾನ ಗದ್ಯಾಳ,ಹಂಡ್ಯಾ ಗದ್ಯಾಳ,ಮಹ್ಮದ ಹುಣಶ್ಯಾಳ,ರಮಜಾನ,ನಜೀರ ಸಯ್ಯದ,ಫಾರೂಕ ಸಯ್ಯದ,ಹಜರತ್ ರಮಜಾನ,ಚುಟುಕುಸಾಬ ಜಾತಗಾರ(ಮಂಟೂರ) ಹುಣಶ್ಯಾಳ ತಂಡದ ಲಗಮನ್ನ ಹುಕ್ಕೇರಿ,ನನ್ನುಸಾಬ ಜಾತಗಾರ(ನದಾಫ) ಶಂಕರ ಸುಣಗರ,ಇಸ್ಮಾಯಿಲ್ ನದಾಫ,ಅಪ್ಪಯ್ಯಾ ಸುಂಕದ,,ಮಗತುಮಸಾಬ ನದಾಫ,ನಾಗಪ್ಪ ರಾಮಸಿದ್ದ,ಲಕ್ಷ್ಮಣ,ಹನೀಫ ನದಾಫ,ಮುತ್ತಪ್ಪ ಸುಣದೋಳಿ ಹಾಡಿ ಪ್ರೋತ್ಸಾಹಧನ ಪಡೆದರು.
ಈ ಸಮಯದಲ್ಲಿ ಮುಖಂಡರಾದ ಮಹ್ಮದಸಾಬ ಮುಲ್ಲಾ,ಬಸವರಾಜ ನನ್ನಾರಿ ಗ್ರಾಮದ ಅನೇಕ ಭಕ್ತರು ಇದ್ದರು