ಮೂಡಲಗಿ : ಮೂಡಲಗಿಯಿಂದ ಗುರ್ಲಾಪೂರ ವರಗೆ ರಸ್ತೆ ಅಭಿವೃದ್ಧಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಆಪ್ತ ಸಹಾಯಕ ದಾಸಪ್ಪ ನಾಯಕ್ ಅವರು ಚಾಲನೆ ನೀಡಿದರು.
ಇಂದು ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಪುರಸಭೆಯ SFC ವಿಶೇಷ ಅನುದಾನದ ಅಡಿಯಲ್ಲಿ 45 ಲಕ್ಷ ರೂ, ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಮಾಡಲಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿಗಳಾದ ದೀಪಕ್ ಹರ್ದಿ, ಹಿರಿಯರಿಗೆ ನಿರ್ದೇಶಕ ಚಿದಾನಂದ ಮುಗಳಕೋಡ ಹಾಗೂ ಪುರಸಭೆಯ ಸದಸ್ಯರುಗಳಾದ ಶಿವು ಚಂಡಿಕಿ, ರವೀಂದ್ರ ಸಣ್ಣಕ್ಕಿ, ಈರಣ್ಣ ಕೊನ್ನೂರ್, ಶಿವಾನಂದ್ ಸಣ್ಣಕ್ಕಿ, ಜಯಾನಂದ ಪಾಟೀಲ್, ಆನಂದ ಟಪಾಲದಾರ್, ಮುಖಂಡರಾದ ಮರೇಪ್ಪ ಮರೆಪ್ಪಗೋಳ, ಅನ್ವರ್ ನದಫ್, ಸಿದ್ದು ಗಡ್ಡೆ ಗಡ್ಡೆಕರ್, ಬಸು ಬಸು ಜಂಡೇಕುರುಬರ, ರಾಮಣ್ಣ ಬಂಗೆನ್ನವರ್, ಈಶ್ವರ್ ಕಂಕನವಾಡಿ, ಪ್ರಕಾಶ್ ಮುಗುಳುಕೋಡ್, ಆದಹಮ್ ತಾಂಬೋಳಿ, ರಾಜು ಪೂಜಾರಿ, ರಾಜು ಭಜಂತ್ರಿ, ಶಿವಲಿಂಗ ಹಾದಿಮನಿ, ಬಿಜೆಪಿ ಬೆಳಗಾವಿ ಜಿಲ್ಲಾ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಈರಪ್ಪ ಡವಳೇಶ್ವರ, ಗುತ್ತಿಗೆದಾರ ಪುಂಡಲಿಕ್ ಮಾದರ್, ಪ್ರಕಾಶ್ ಮಗದುಮ್.