Breaking News
Home / ತಾಲ್ಲೂಕು / ಎಲ್ಲ ಕೆಲಸಕ್ಕೂ ಗೌರವವಿದೆ ಹಾಗೆಯೇ ಪತ್ರಿಕಾ ವಿತರಣೆ ಕೆಲಸಕ್ಕೂ ಗೌರವವಿದೆ -ಬಾಲಶೇಖರ ಬಂದಿ

ಎಲ್ಲ ಕೆಲಸಕ್ಕೂ ಗೌರವವಿದೆ ಹಾಗೆಯೇ ಪತ್ರಿಕಾ ವಿತರಣೆ ಕೆಲಸಕ್ಕೂ ಗೌರವವಿದೆ -ಬಾಲಶೇಖರ ಬಂದಿ

Spread the love

ಎಲ್ಲ ಕೆಲಸಕ್ಕೂ ಗೌರವವಿದೆ ಹಾಗೆಯೇ ಪತ್ರಿಕಾ ವಿತರಣೆ ಕೆಲಸಕ್ಕೂ ಗೌರವವಿದೆ -ಬಾಲಶೇಖರ ಬಂದಿ

ಮೂಡಲಗಿ – ಪತ್ರಿಕೆ ವಿತರಣೆಯೆಂದರೆ ಸಣ್ಣ ಕೆಲಸವಲ್ಲ. ಎಲ್ಲ ಕೆಲಸಕ್ಕೂ ಅದರದೇ ಆದ ಗೌರವವಿದೆ.
ಪತ್ರಿಕೆ ಎಷ್ಟೇ ಮುದ್ರಣವಾದರೂ ಓದುಗರನ್ನು ತಲುಪಿದಾಗಲೇ ಸಾರ್ಥಕವಾಗುವುದು. ಬೆಳಿಗ್ಗೆ ಪತ್ರಿಕೆ ಬರದಿದ್ದರೆ ಎಲ್ಲರಿಗೂ ನೆನಪಾಗುವುದು ವಿತರಕರು ಎಂದು ಪತ್ರಕರ್ತ ಬಾಲಶೇಖರ ಬಂದಿ ಹೇಳಿದರು.
ಪತ್ರಿಕೆಗಳ ಬೆನ್ನೆಲುಬಾಗಿರುವ ಪತ್ರಿಕಾ ವಿತರಕರ ದಿನಾಚರಣೆಯ ಸಂದರ್ಭ ಮೂಡಲಗಿ ಪ್ರೆಸ್ ಕ್ಲಬ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಅವರು ಮಾತನಾಡಿದರು.
ಕೊರೋನಾದಂಥ ಸಂಕಷ್ಟದ ಸಮಯದಲ್ಲಿ ಕೂಡ ಪ್ರಾಣಕ್ಕೆ ಹೆದರದೆ ಸಮಯಕ್ಕೆ ಸರಿಯಾಗಿ ಪತ್ರಿಕೆಗಳನ್ನು ಮುಟ್ಟಿಸುವ ಕೆಲಸವನ್ನು ವಿತರಕರು ಮಾಡುತ್ತಾರೆ. ಅವರನ್ನು ಸನ್ಮಾನಿಸುವುದು ತುಂಬ ದೊಡ್ಡ ಕೆಲಸ ಎಂದು ಅವರು ಹೇಳಿದರು
ಮೂಡಲಗಿಯ ಪತ್ರಿಕಾ ವಿತರಕರಾದ ಸಿದ್ದಾರೂಢ ಪೂಜೇರಿ ಪ್ರಜ್ವಲ ಪುಟಾಣಿವಿನೋದ ಕಂಕಣವಾಡಿ, ಅಜಯ ಗುಡ್ಲಮನಿ,ವಿಶಾಲ ಬುಗಡಿಕಟ್ಟಿ, ಶಿವಬಸು ಜೀರಗಿ, ಸಿದ್ದಪ್ಪ ಕಪ್ಪಲಗುದ್ದಿ, ಅಮಿತಕುಮಾರ ನಾಗಪ್ಪಗೋಳ, ಧರೆಪ್ಪ ಕಪ್ಪಲಗುದ್ದಿ, ಸಚಿನ್ ಪತ್ತಾರ, ಬಂದೇನವಾಜ ಮುಲ್ಲಾ ಹಾಗೂ ಸುರೇಶ ಬೆಳವಿ ಇವರನ್ನು ಮೂಡಲಗಿ ತಾಲೂಕಾ ಪತ್ರಕರ್ತರ ಬಳಗದಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಸಮಾರಂಭದ ಅತಿಥಿಯಾಗಿ ಉಮೇಶ ಬೆಳಕೂಡ ಆಗಮಿಸಿದ್ದರು.ಅಧ್ಯಕ್ಷತೆಯನ್ನು ಮೂಡಲಗಿ ಪ್ರೆಸ್ ಕ್ಲಬ್ ಅಧ್ಯಕ್ಷ ಸುಧಾಕರ ಉಂದ್ರಿ ವಹಿಸಿದ್ದರು. ಹಿರಿಯ ಪತ್ರಕರ್ತ್ ವಾಯ್.ವಾಯ್.ಸುಲ್ತಾನಪುರ, ರ್ಕಾರ್ಯದರ್ಶಿ ಅಲ್ತಾಫ ಹವಾಲ್ದಾರ, ಕೆ.ಬಿ.ಗಿರೆನ್ನವರ,   ಭೀಮಶಿ ತಳವಾರ, ಸುಭಾಷ್ ಗೋಡ್ಯಾಗೋಳ, ಈರಪ್ಪ ಡವಳೇಶ್ವರ್, ಕಲಾವಿದ ಮಂಜುನಾಥ್ ರೇಳೆಕರ, ಚುಟುಕುಸಾಬ ಜಾತಗಾರ ಮಟ್ಟಿತರು ಇದ್ದರು.


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ