ಮೂಡಲಗಿ : ರೈತರ ಕಬ್ಬಿನ 2018-19ರ ಹಂಗಾಮಿನ ಬಿಲ್ಲಿನಲ್ಲಿ ಪ್ರತಿ ಟನ್ ಗೆ ರೂ 4 ರಂತೆ ಕಡಿತಗೊಳಿಸಿ ಸಮೀರವಾಡಿ ಕಬ್ಬು ಬೆಳಗಾರರ ಸಂಘಕ್ಕೆ ನೇರವಾಗಿ ಜಮಾ ಮಾಡುವುದು ಖಂಡನೀಯವಾಗಿದೆ ಎಂದು ಕಾರ್ಖಾನೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಸಮೀಪದ ಗೋದಾವರಿ ಸಕ್ಕರೆ ಕಾರ್ಖಾನೆಯ 2018-19ನೇ ಹಂಗಾಮಿನಲ್ಲಿ ಪೂರೈಸಿದ ರೈತರಿಗೆ ಪ್ರತಿ ಟನ್ ಗೆ ರೂ, 111 ರಂತೆ ನೀಡುವಂತೆ ಕಾರ್ಖಾನೆಯ ಆಡಳಿತ ಮಂಡಳಿ ತಿಳಿಸಿದರು, ಆದರೆ ಕಬ್ಬು ಬೆಳಗಾರರ ಸಂಘಕ್ಕೆ 4 ರೂ, ನೀಡಲು ರೈತರ 111ರೂ, ಹಣದಲ್ಲಿ ಕಡಿತಗೊಳಿಸಲು ನಿರ್ಧರಿಸಿರುವುದು ವಿಪರ್ಯಾಸದ ಸಂಗತಿಯಾಗಿದೆ.
ಮೊದಲೇ ಕೊರೋನಾ ಹೊಡೆತಕ್ಕೆ ತತ್ತರಿಸಿದ ರೈತ ಕುಟುಂಬಗಳು ಆರ್ಥಿಕವಾಗಿ ತೊಂದರೆ ಅನುಭವಿಸುತ್ತಿರುವವ ರೈತರಿಗೆ 111ರೂ, ಹಣ ಕೈ ಸೇರುತ್ತದೆ ಎಂಬ ಆಶಾ ಭಾವನೆಯಿಂದ ಇರುವಾಗಲೇ 4ರೂ, ಕಡಿತಗೊಳಿಸುವ ನಿರ್ಧಾರದಿಂದ ಮತ್ತಷ್ಟು ರೈತರು ಸಂಕಷ್ಟಕ್ಕೆ ಸಿಲುಕುವಂತಾಗುತ್ತೆ ಎಂದು ಕಾರ್ಖಾನೆಯ ವಿರುದ್ಧ ರೈತರು ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ರೈತರು ಹಗಲಿರುಳು ದುಡಿದು ಕಬ್ಬು ಪೂರೈಸಿದ ರೈತರಿಗೆ ಬರಬೇಕಾದ ಹಣದಲ್ಲಿ 4ರೂ, ಕಡಿತಗೊಳಿಸಿ ಸಂಘಗಳಿಗೆ ನೀಡುವುದು ಖಂಡನೀಯವಾಗಿದೆ. ರೈತರ 111ರೂ, ರೈತರ ಖಾತೆಗೆ ನೇರವಾಗಿ ಜಮಾ ಮಾಡಬೇಕೆಂದು ಮನವಿ ಮಾಡಿಕೊಡಿದ್ದಾರೆ.
ರೈತರ ಖಾತೆಗೆ 111ರೂ ಜಮಾ ಮಾಡದೇ ಇದ್ದರೆ ಮುಂದಿನ ದಿನಗಳಲ್ಲಿ ರೈತ ಸಂಘದಿಂದ ಉಗ್ರ ಹೋರಾಟ ಮಾಡಲಾಗುವುದು ಎಂದು ಕಾರ್ಖಾನೆಯ ಆಡಳಿತ ಮಂಡಳಿಗೆ ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಶ್ರೀಶೈಲ ಅಂಗಡಿ, ಬಸವಂತ ಕಾಂಬಳೆ, ಮಲ್ಲಪ್ಪ ಅಂಗಡಿ, ರಮೇಶ ಕಲಾರ್, ಕೆಂಪಣ್ಣ ಅಂಗಡಿ, ಈರಣ್ಣ ಸಸಾಲಟ್ಟಿ, ಪದ್ಮನಾ ಉಂದ್ರಿ, ಸುರೇಶ್ ಡವಳೇಶ್ವರ, ಶಿವಪುತ್ರ ಗುರಶಿದ್ದನ್ನವರ, ಈರಪ್ಪ ಬಂಗಿ, ಲಕ್ಕಪ್ಪ ಕುರನಿಂಗ, ಬರಮಪ್ಪ ಬಾಗೋಜಿ, ಹನಮಂತ ಮಾಳಗಾರ, ಸಿದ್ದು ಉಳ್ಳಾಗಡ್ಡಿ ಹಾಗೂ ಅನೇಕ ರೈತರು ಉಪಸ್ಥಿತರಿದ್ದರು.