ಮೂಡಲಗಿ – 12 ನೇಯ ಶತಮಾನದಲ್ಲಿ ಸಮಾನತೆ ಸಾರಿದ ಅಣ್ಣ ಬಸವಣ್ಣ ಆದರ್ಶಗಳನ್ನು ಎಲ್ಲರ ಬದುಕಿನಲ್ಲಿ ಅಳವಡಿಸಿಕೊಂಡರೆ ದೇಶದಲ್ಲಿ ಯಾವದೇ ತರಹದ ಬಿನ್ನಾಭಿಪ್ರಾಯಗಳು ಬರುವದಿಲ್ಲಾ, ಧರ್ಮ ರಕ್ಷಣೆ ಯಾರು ಮಾಡುತ್ತಾರೆ ಧರ್ಮ ಅವರನ್ನು ಖಂಡಿತಾ ಕಾಪಾಡುತ್ತದೆ ಎಂದು ಇಂಚಲದ ಶ್ರೀ ಶಿವಯೋಗೇಶ್ವರ ಸಾದು ಸಂಸ್ಥಾನ ಮಠದ ಶ್ರೀ ಡಾ ಶಿವಾನಂದ ಭಾರತಿ ಮಹಾ ಸ್ವಾಮಿಜಿಗಳು ಹೇಳಿದರು
ಅವರು ಕಲ್ಲೋಳಿಯ ಗಾಂಧಿ ಮೈದಾನದಲ್ಲಿ ನಿಯೋಜಿತ 12 ಪೂಟ ಎತ್ತರದ ಅಶ್ವಾರೂಡ ಕಂಚಿನ ಶ್ರೀ ಬಸವೇಶ್ವರ ಪುತ್ಥಳಿಯ ಶಂಕುಸ್ಥಾಪನೆ ಭೂಮಿ ಪೂಜನ ಕಾರ್ಯಕ್ರಮ ನೇರೆವೇರಿಸಿ ಆಶಿರ್ವಚನ ನೀಡಿದರು,
ಶ್ರೀ ಬಸವೇಶ್ವರ ಪ್ರತಿಮೆ ಸ್ಥಾಪನೆಯ ರೂವಾರಿ ಕಲ್ಲೋಳಿಯ ಮುಖಂಡ ಈರಪ್ಪ ಬೆಳಕೂಡ ಮಾತನಾಡಿ 12 ಪೂಟ ಎತ್ತರದ ಕಂಚಿನ ಪ್ರತಿಮೆಯನ್ನು 10 ಅಡಿ ಎತ್ತರದ ಸ್ಥಂಭದ ಮೇಲೆ ಸುಮಾರು 35 ಲಕ್ಷ ರೂಗಳ ವೇಚ್ಚದಲ್ಲಿ ಸ್ಥಾಪಿಸಲಾಗುತ್ತಿದೆ ಇದ್ದಕೆ ಹಲವಾರು ಮಹನೀಯರು ದೇಣಿಗೆ ನೀಡಿದ್ದಾರೆ ಮತ್ತು ವತ್ತಿಗೆ ನೀಡುತ್ತಿದ್ದಾರೆ ಎಂದರು
ಇದೆ ಸಮಯದಲ್ಲಿ ಕಲ್ಲೋಳಿಯ ಸ್ವಸ್ಥ ಔಷದಿ ಸೇವಾ ಜೆನರೀಕ್ ಔಷದ ಮಳಿಗೆಯನ್ನು ಶ್ರೀ ಶಿವಯೋಗೇಶ್ವರ ಸಾದು ಸಂಸ್ಥಾನ ಮಠದ ಶ್ರೀ ಡಾ ಶಿವಾನಂದ ಭಾರತಿ ಮಹಾ ಸ್ವಾಮಿಜಿಗಳುನಿವೃತ್ತ ಜಿಲ್ಲಾ ವೈಧ್ಯಾಧಿಕಾರಿ ಡಾ ಅಶೋಕ ಮುರಗೋಡ ಉದ್ಘಾಟಿಸಿದರು,
ಈ ಶುಭ ಸಮಾರಂಭದಲ್ಲಿ ಡಾ ಭೋಜರಾಜ ಬೆಳಕೂಡ, ಡಾ ತುಕಾರಾಮ ಉಮರಾಣಿ, ,ಪರಪ್ಪ ಮಜ್ಜಿಗ್ಯಾರ, ಗಿರಿಮಲ್ಲಪ್ಪ ಸವಸುದ್ದಿ, ರಮೇಶ ಬೆಳಕೂಡ,ಡಾ ಮಹಾದೇವ ಹೆಬ್ಬಾಳ,ಮಲ್ಲಪ್ಪ ಕಡಾಡಿ ಉಪಸ್ಥಿತರಿದ್ದರು,
Home / ತಾಲ್ಲೂಕು / ಧರ್ಮ ರಕ್ಷಣೆ ಯಾರು ಮಾಡುತ್ತಾರೆ ಧರ್ಮ ಅವರನ್ನು ಖಂಡಿತಾ ಕಾಪಾಡುತ್ತದೆ – ಶ್ರೀ ಡಾ ಶಿವಾನಂದ ಭಾರತಿ ಮಹಾ ಸ್ವಾಮಿಜಿಗಳು
Check Also
‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’
Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …