ಮೂಡಲಗಿ : ಗೌರ್ಭಿಣಿಯರು ಹುಟ್ಟುವ ಮಕ್ಕಳ ಉತ್ತಮ ಬೆಳವಣಿಗೆಗೆ ಪೌಷ್ಠಿಕಾಂಶವುಳ್ಳ ಆಹಾರ ಸೇವನೆ ಮಾಡಬೇಕು, ಗರ್ಭಿಣಿ ಮತ್ತು ಭಣಂತೀಯರಲ್ಲಿ ರಕ್ತಹೀನತೆ ಮತ್ತು ಮಕ್ಕಳ ಅಪೌಷ್ಠಿಕತೆ ಕಡಿಮೆ ಮಾಡುವ ಉದ್ದೇಶದಿಂದ ಇಲಾಖೆಯು ಇಂತಹ ಜಾಗೃತ ಅಭಿಯಾನವನ್ನು ಮಾಡಲಾಗುತ್ತಿದೆ ಎಂದು ತಾಪಂ ಸದಸ್ಯೆ ಸವಿತಾ ಡಬ್ಬನ್ನವರ ಹೇಳಿದರು.
ಅವರು ಸಮೀಪದ ಹಳ್ಳೂರ ಗ್ರಾಮದಲ್ಲಿ ಶಿಶು ಅಭಿವೃದ್ಧಿ ಯೋಜನೆ ಅರಭಾಂವಿ ಮತ್ತು ಮೂಡಲಗಿ ಕಚೇರಿಯವರು ಹಮ್ಮಿಕೊಳ್ಳಲಾದ ರಾಷ್ಟ್ರೀಯ ಪೋಷಣಾ ಅಭಿಯಾನ ಮಾಸಾಚರಣೆಗೆ ಚಾಲನೆ ನೀಡಿ ಮಾತನಾಡಿ, ಪೋಷಣಾ ಅಭಿಯಾನ ಯೋಜನೆ ಅತ್ಯಂತ ಪ್ರಮಖವಾದ ಯೋಜನೆಯಾಗಿದೆ, ಮಕ್ಕಳ ಬೆಳವಣಿಗೆಗೆ ಮತ್ತು ಏಳಿಗೆಗೆ ಅಪೌಷ್ಠಿಕತೆ ಹೊಂದಿರುವ ಮಕ್ಕಳನ್ನು ಗುರುತಿಸಿ ಅವರಿಗೆ ಸೂಕ್ತ ಚಿಕಿತ್ಸೆ ನೀಡಿ ಆರೋಗ್ಯವಂತ ಮಕ್ಕಳು ಬೆಳೆಯುವಂತೆ ಎಲ್ಲ ಕಾರ್ಯಕರ್ತೆಯರು ಶ್ರಮೀಸಬೇಕೆಂದು ಕರೆ ನೀಡಿದರು.
ಮಕ್ಕಳ ಉತ್ತಮ ಬೆಳೆವಣಿಗೆಗೆ ಗರ್ಭಿಣಿಯರು ಕಾಲಕಾಲಕ್ಕೆ ವ್ಯೆದ್ಯರಿಂದ ಸಲಹೆ ಪಡೆದು ನಿತ್ಯ ಸೇವಿಸುವ ಆಹಾರದೊಂದಿಗೆ ಪೌಷ್ಠಿಕಾಂಶ ಪದಾರ್ಥ ಸೇವನೆ ಮಾಡುವುದರಿಂದ ಜನಿಸುವ ಮಕ್ಕಳು ಸದೃಢತೆ ಹೊಂದಿರಲು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಗ್ರಾಪಂ ಸಿಬ್ಬಂದಿ ಮಂಜುನಾಥ ಕೊಹಳ್ಳಿ, ಅಂಗನವಾಡಿ ಕಾರ್ಯಕರ್ತೆಯರ ಮೇಲ್ವಿಚಾರಕಿ ಸಿ ಆಯ್ ಕುಡಚಿ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.