Breaking News
Home / ತಾಲ್ಲೂಕು / ಸಾಂಪ್ರದಾಯಿಕ ಕೃಷಿ ಪದ್ದತಿಯಿಂದ ರೈತ ಸಮುದಾಯ ಹೊರಬಂದು, ಆಧುನಿಕ ತಂತ್ರಜ್ಞಾನ ಬಳಸಿ ಕೃಷಿ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಿ

ಸಾಂಪ್ರದಾಯಿಕ ಕೃಷಿ ಪದ್ದತಿಯಿಂದ ರೈತ ಸಮುದಾಯ ಹೊರಬಂದು, ಆಧುನಿಕ ತಂತ್ರಜ್ಞಾನ ಬಳಸಿ ಕೃಷಿ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಿ

Spread the love

ಮೂಡಲಗಿ : ಸಾಂಪ್ರದಾಯಿಕ ಕೃಷಿ ಪದ್ದತಿಯಿಂದ ರೈತ ಸಮುದಾಯ ಹೊರಬಂದು, ಆಧುನಿಕ ತಂತ್ರಜ್ಞಾನ ಬಳಸಿ ಕೃಷಿ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಬೇಕೆಂದು ಗೋದಾವರಿ ಸಕ್ಕರೆ ಕಾರ್ಖಾನೆಯ ಕಬ್ಬು ವಿಭಾಗಧಿಕಾರಿ ಆರ್ ವಿ ಕುರ್ಲಕಣಿ ಹೇಳಿದರು.

ಸಮೀಪದ ಹಳ್ಳೂರ ಗ್ರಾಮದ ಬಸವನಗರ ತೋಟದಲ್ಲಿ ಗೋದಾವರಿ ಸಕ್ಕರೆ ಕಾರ್ಖಾನೆಯ ಕಬ್ಬು ಅಭಿವೃದ್ಧಿ ಅಧಿಕಾರಿಗಳು ಹಮ್ಮಿಕೊಳ್ಳಲಾದ ಆಧುನಿಕ ತಂತ್ರಜ್ಞಾನ ಬಳಸಿ ಅಧಿಕ ಇಳುವರಿ ಪಡೆಯುವ ಬಗ್ಗೆ ರೈತರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿ, ಆಧುನಿಕ ಯುಗದ ಕೃಷಿ ಕ್ಷೇತ್ರದಲ್ಲಿ ಬದಲಾವಣೆಯು ಅತಿ ಅವಶ್ಯಕತೆವಾಗಿದೆ. ಕಬ್ಬು ಬೆಳೆಗಾರರು ಲಕ್ಷ್ಯವಹಿಸಬೇಕಾದದ್ದು ಆಧುನಿಕ ನಾಟಿ ಪದ್ಧತಿಯ ಕಡೆ. ಈ ಪದ್ಧತಿ ಇಂದ ಸಾಂಪ್ರಾದಾಯಿಕ ನಾಟಿ ಪದ್ಧತಿಗಿಂತ ಹೆಚ್ಚು ಆರೋಗ್ಯಕರವಾದ ಕಬ್ಬಿನ ಬೆಳೆಯನ್ನು ಪಡೆಯಬಹುದಾಗಿದೆ. ಒಂದು ಕಣ್ಣಿನ ಕಬ್ಬಿನ ಸಸಿ ನಾಟಿ ಪದ್ಧತಿಯಿಂದ ರೈತರು ಎದುರಿಸುತ್ತಿರುವ ಅನೇಕ ಸಮಸ್ಯೆಗಳನ್ನು ಪರಿಹರಿಸಬಹುದಾಗಿದೆ. ಈ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದರಿಂದ ಹೆಚ್ಚು ಪ್ರಯೋಜನವಾಗುವುದು ಎಂದರು.

ಅಗಲ ಸಾಲು ಪದ್ದತಿಯಲ್ಲಿ ಕಬ್ಬು ಬೇಸಾಯ ಮಾಡುವುದರಿಂದ ರೈತರು ಅಧಿಕ ಇಳುವರಿ ಪಡೆಯಲು ಸಾಧ್ಯ. ಕಬ್ಬಿನ ಸಸಿ ಮಡಿ ತಯಾರಿ, ನಾಟಿ ಪದ್ಧತಿಯಲ್ಲಿ ಅನುಸರಿಸಬೇಕಾದ ಕ್ರಮ, ಜೈವಿಕ ಗೊಬ್ಬರಗಳ ಬಳಕೆಯಿಂದ ದೊರಕುವ ಲಾಭವನ್ನು ತಿಳಿಸಿದ ಅವರು, ಅಗಲ ಸಾಲು ಪದ್ದತಿಯಲ್ಲಿ ಅಲ್ಪ ನೀರಿನಿಂದ ರೈತರು ಹೆಚ್ಚು ಇಳುವರಿ ಪಡೆಯಲು ಸಾಧ್ಯ ಎಂದರು.

ಕಬ್ಬು ಅಭಿವೃದ್ಧಿ ವಿಭಾಗದ ವಿ ಎಸ್ ಭುಜನ್ನವರ ಮಾತನಾಡಿ, ರಾಸಾಯನಿಕಗಳ ಬಳಕೆಯು ಆಧುನಿಕ ಯುಗದಲ್ಲಿ ಶಾಪವಾಗಿಯೂ ಪರಿಣಮಿಸಿರುವ ಅನೇಕ ಉದಾಹರಣೆಗಳಿವೆ. ಗ್ರಾಮೀಣ ಭಾಗದ ಜನರು ಭೂಮಿಗೆ ಹಾನಿಕಾರಕವಾಗಿ ಪರಿಣಮಿಸಿರುವ ರಾಸಾಯನಿಕ ಗೊಬ್ಬರ ಪದ್ಧತಿಯಿಂದ ಹೊರಬಂದು ಸಾವಯವ ಕೃಷಿ ಪದ್ದತಿಯನ್ನು ಅಳವಡಿಸಿಕೊಳ್ಳಬೇಕು. ಈ ಮೂಲಕ ಭೂಮಿ ಬಂಜರಾಗುವುದನ್ನು ತಪ್ಪಿಸಬೇಕೆಂದರು. ರಾಸಾಯನಿಕ ಗೊಬ್ಬರದಿಂದ ಬಳಕೆಯಿಂದ ಹೆಚ್ಚು ಇಳುವರಿ ಪಡೆಯಬಹುದು ಎನ್ನುವ ತಪ್ಪು ಭಾವನೆ ರೈತರಲ್ಲಿದೆ. ಸಾವಯವ ಗೊಬ್ಬರ ಬಳಕೆಯನ್ನು ಹೆಚ್ಚಿಸಿ ಅಗಲ ಸಾಲು ಪದ್ದತಿಯಡಿಯಲ್ಲಿ ಬೇಸಾಯ ಮಾಡುವುದರಿಂದ ದೀರ್ಘ ಕಾಲದವರೆಗೆ ಮಣ್ಣಿನ ಗುಣಮಟ್ಟವನ್ನು ಕಾಪಾಡಿಕೊಂಡು ಅಧಿಕ ಇಳುವರಿ ಪಡೆಯಬಹುದು ಎಂದರು.

ಮುಗಳಖೋಡ ಕಬ್ಬು ವಿಭಾಗ ಕ್ಷೇತ್ರಾಧಿಕಾರಿ ಎ ಸಿ ಕುಡಚಿ ಮಾತನಾಡಿ, ಪ್ರತಿಬಾರಿ ಕಬ್ಬು ಬಿತ್ತನೆ ಮಾಡುವ ಮುನ್ನ ಜಮೀನಿನ ಮಣ್ಣಿನ ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಿಸಬೇಕು. ಇದರಿಂದ ಮಣ್ಣಿನಲ್ಲಿರುವ ಪೋಷಕಾಂಶಗಳ ಕೊರತೆ ತಿಳಿಯುತ್ತದೆ. ಕೊರತೆ ಇರುವ ಪೋಷಕಾಂಶಗಳನ್ನು ಅಗತ್ಯ ಪ್ರಮಾಣದಲ್ಲಿ ನೀಡಬೇಕು.

ಸಾವಯವ ಗೊಬ್ಬರ ಪೂರೈಕೆಯನ್ನು ಕಡ್ಡಾಯವಾಗಿ ಮಾಡಲೇಬೇಕು, ಒಂದು ಎಕರೆಗೆ ಕನಿಷ್ಠ 9 ಗಾಡಿ ಗೊಬ್ಬರ ಹಾಕಿ. ಇದರ ಪೂರೈಕೆ ಇಲ್ಲದಿದ್ದರೆ ಇಳುವರಿ ಕುಂಠಿತವಾಗುತ್ತದೆ. ಇದಲ್ಲದೆ ಯೂರಿಯಾ, ಪೊಟಾಷ್ ಮತ್ತು ಜೈವಿಕ ಗೊಬ್ಬರಗಳನ್ನು ಅಗತ್ಯಕ್ಕೆ ತಕ್ಕಂತೆ ಪೂರೈಕೆ ಮಾಡಿ. ಹೀಗೆ ಮಾಡುವುದರಿಂದ ಮಣ್ಣಿಗೆ ಬೇಕಾದ ಪೋಷಕಾಂಶಗಳ ಪ್ರಮಾಣ ಸರಿಯಾಗಿರುತ್ತದೆ. ಇದರಿಂದ ಇಳುವರಿಯ ಪ್ರಮಾಣ ತಗ್ಗುವುದಿಲ್ಲ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕಾರ್ಖಾನೆಯ ಸಿಬ್ಬಂದಿಗಳಾದ ಎಸ್ ಬಿ ಸಂಕಾನಟ್ಟಿ, ಕೆ ಎಮ್ ದಳವಾಯಿ, ಜೆ ಪಿ ಪಾಟೀಲ,ಬಿ ಎನ್ ದರೂರ, ಬಿ ವಿ ಮುಕುಂದ ಹಾಗೂ ಪ್ರಗತಿಪರ ರೈತರಾದ ಅರ್ಜುನ್ ಬೋಳನ್ನವರ, ಮುತ್ತಪ್ಪ ತಳವಾರ, ಸುರೇಶ ಬೆಳಗಲಿ, ರವೀಂದ್ರ ನುಚ್ಚುoಡಿ, ಪ್ರಕಾಶ್ ನುಚ್ಚುoಡಿ, ಮಹಾವೀರ ಸಪ್ತಸಾಗರ, ಬಸವರಾಜ್ ಬೋಳನ್ನವರ, ಮಹದೇವ್ ಅಳಗೋಡಿ ಇನ್ನೂ ಅನೇಕ ರೈತರು ಉಪಸ್ಥಿತರಿದ್ದರು.


Spread the love

About inmudalgi

Check Also

ಖಾನಟ್ಟಿ ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ಉತ್ತಮ ಸಹಕಾರ ಸಂಘ ಪ್ರಶಸ್ತಿ

Spread the loveಮೂಡಲಗಿ : ಬೆಳಗಾವಿ ಜಿಲ್ಲಾ ಉತ್ತಮ ಸಹಕಾರಿ ಸಂಘ ಪ್ರಶಸ್ತಿ  ಬೆಳಗಾವಿಯಲ್ಲಿ ನಡೆದ 71ನೇ ಅಖಿಲ ಭಾರತ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ