Breaking News
Home / ತಾಲ್ಲೂಕು / ಗ್ರಾಮದ ಯುವಕರಿಕೆ ಆಸರೆಯಾದ ಮಾಜಿ ಸೈನಿಕರು

ಗ್ರಾಮದ ಯುವಕರಿಕೆ ಆಸರೆಯಾದ ಮಾಜಿ ಸೈನಿಕರು

Spread the love

ಗ್ರಾಮದ ಯುವಕರಿಕೆ ಆಸರೆಯಾದ ಮಾಜಿ ಸೈನಿಕರು

ಕುಲಗೋಡ:ಭಾರತಾಂಬೆಯ ಸೇವೆ ಮಾಡಿ ನಿವೃತ್ತಿ ಹೊಂದಿದ ನಂತರ ಸೈನಿಕರು ಹೊಲ,ಮನೆ,ಹೆಂಡತಿ,ಮಕ್ಕಳು, ಪರಿವಾರ ಎಂದು ಉಳಿಯುತ್ತಾರೆ. ಇನ್ನೂ ಕೇಲವರು ನಿವೃತ್ತಿ ನಂತರ ಮತ್ತೆ ಸರಕಾರಿ ಕೇಲಸದಲ್ಲಿ ತೊಡಗುತ್ತಾರೆ.
ಆದ್ದರೆ ಮೂಡಲಗಿ ತಾಲೂಕಿನ ಕುಲಗೋಡ ಗ್ರಾಮದ ಮಾಜಿ ಸೈನಿಕರು ಗ್ರಾಮದ 80 ಕ್ಕೂ ಹೆಚ್ಚು ಯುವಕರಿಗೆ ಸೈನಿಕ, ಪೊಲೀಸ್, ಹಾಗೂ ಇತರೆ ನೌಕರಿಗಾಗಿ ನಿರಂತರ ಉಚಿತ ತರಬೇತಿ ನೀಡುತ್ತಿರುವ ಮೂಲಕ ಗ್ರಾಮದ ಯುವಕರಿಗೆ ಆಸರೆಯಾಗಿದ್ದಾರೆ.
ಭಾರತೀಯ ಸೈನೆಯಲ್ಲಿ 15-20 ವರ್ಷಗಳ ಸೇವೆ ಮಾಡಿ ಕಳೆದ ಕೆಲವು ತಿಂಗಳ ಹಿಂದೆ ನಿವೃತ್ತಿ ಹೊಂದಿದ ಗ್ರಾಮದ ಮಾಜಿ ಸೈನಿಕರಾದ ಮಾರುತಿ ಮನ್ನಿಕೇರಿ. ಭೀಮಶಿ ಮಡಿವಾಳರ. ಸಂಗಮೇಶ ತಗ್ಗಿ. ಈ ಮೂವರು ಸೈನಿಕರು ಬೇರೆ ನೌಕರಿ ಆಸೆ ಬಿಟ್ಟು ಗ್ರಾಮಕ್ಕೆ ಆಸರೆಯಾಗಬೇಕು. ಗ್ರಾಮಕ್ಕಾಗಿ ಏನಾದರು ಮಾಡಬೇಕು ಪ್ರತಿ ಇಲಾಖೆಯಲ್ಲಿ ನಮ್ಮವರು ಇರಬೇಕು ಎನ್ನೂವ ಉದ್ದೇಶದಿಂದ ಗ್ರಾಮದ ಸಂಕಲ್ಪ ಪೌಂಡೇಶನ್ ಹಾಗೂ ಕುಲಗೋಡ ಕೆ.ಬಿ.ಎಸ್ ಅಲ್ಯುಮ್ನಿ ಅಸೋಸಿಯೇಷನ್ ಇವರ ಸಹಕಾರ ಪಡೆದು ಯುವಕರಿಗೆ ದೈಹಿಕ ತರಬೇತಿ ಹಾಗೂ ಲಿಖಿತ ಪರೀಕ್ಷೆ ತರಬೇತಿ ನೀಡುವ ಮೂಲಕ ಬಡ ಯುವಕರ ಪಾಲಿಗೆ ಆಸರೆಯಾಗಿದ್ದಾರೆ.
ಗ್ರಾಮದ ಯುವಕರು ಹಲವಾರು ಸ್ಪರ್ಧಾತ್ಮಕ ಪರೀಕ್ಷೆ, ಸೈನಿಕ, ಪೊಲೀಸ್ ರ್ಯಾಲಿಯಲ್ಲಿ ಭಾಗವಹಿಸಿ ಸಾವಿರಾರು ಹಣ ಖರ್ಚು ಮಾಡಿ ಹಿಂತಿರುಗಿದ್ದಾರೆ. ಯಾವ ಪರೀಕ್ಷೆಗಳ ಹೇಗೆ ಬರೆಯಬೇಕು, ಉತ್ತರ ಹೇಗಿರಬೇಕು ದೇಹ ಸಾಮಥ್ಯ, ಓಟದ ವೇಗ,ಮಿತಿ. ಯಾವ ತರಹದ ಪುಸ್ತಕ ಓದಿದರೇ ಅನೂಕುಲ ಎಂದುವದು ತಿಳಿಯದೆ ರ್ಯಾಲಿಗಳಲ್ಲಿ ಭಾಗವಹಿಸಿ ಅಸಮಾಧಾನರಾದ ಯುವಕರಿಗೆ ಮಾರ್ಗದರ್ಶನ ನೀಡಿ ಪ್ರತಿ ಕುಟುಂಬದಲ್ಲಿ ಒಬ್ಬ ಶಿಕ್ಷಣವಂತ ಹಾಗೂ ನೌಕರ ಇರಬೇಕು ಎಂದು ಮಹದಾಸೆಯಿಂದ ನಿವೃತ್ತಿಯ ಬಳಿಕ ಗ್ರಾಮಕ್ಕೆ ಆಸರೆಯಾಗುತ್ತಿರುವ ಸೈನಿಕರು.
ಪ್ರತಿ ದಿನ ಮುಂಜಾನೆ 5 ಕ್ಕೆ ಓಟ, ನಂತರ ದೈಹಿಕ ವ್ಯಾಯಾಮ ಹಾಗೂ ಸ್ಪರ್ಧಾತ್ಮಕತೆ ಬಗ್ಗೆ ಮಾಹಿತಿ. ಪ್ರತಿ ರವಿವಾರ ಲಿಖಿತ ಪರೀಕ್ಷೆ ನಡೆಸುತ್ತಾರೆ. ಇವರಿಗೆ ಆಸರೆಯಾಗಿ ಗ್ರಾಮದ ಸಂಕಲ್ಪ ಪೌಂಡೇಶನ್ ಹಾಗೂ ಕುಲಗೋಡ ಕೆ.ಬಿ.ಎಸ್ ಅಲ್ಯುಮ್ನಿ ಅಸೋಸಿಯೇಷನ್ ಇವರು ಮಕ್ಕಳಿಗೆ ಸಾಮಗ್ರಿ ಪುಸ್ತಕ ಹಾಗೂ ಲಿಖಿತ ಪರೀಕ್ಷೆಗೆ ಪ್ರಶ್ನೇ ಪತ್ರಿಕೆ ಹಾಗೂ ಇತರೆ ಸಹಾಯ ನೀಡುತ್ತಿವೆ.

ಮಾಜಿ ಸೈನಿಕ ಮಾರುತಿ ಮನ್ನಿಕೇರಿ ಹೇಳಿಕೆ:

ನಗರಕ್ಕೆ ತರಬೇತಿ ಪ್ರತಿ ತಿಂಗಳು 15 ಸಾವಿರ ಹಣ ನೀಡಿ ಮಕ್ಕಳಿಗೆ ತರಬೇತಿ ಕೊಡಿಸಲು ಗ್ರಾಮೀಣ ಜನರಿಗೆ ಕಷ್ಟಕರ. ಆ ಕಾರಣಕ್ಕಾಗಿ ಮೂವರು ಸ್ನೇಹಿತರು ಹಾಗೂ ಸಂಸ್ಥೆಗಳ ಸಹಾಯದಿಂದ ಉಚಿತ ತರಬೇತಿ ನಡೆಸಿದ್ದೇವೆ. ಪ್ರತಿ ಗ್ರಾಮಗಳಲ್ಲಿಯ ಮಾಜಿ ಸೈನಿಕರ ಇಂತಹ ತರಬೇತಿ ನೀಡಿ ಗ್ರಾಮದ ಋಣ ತೀರಿಸಬೇಕು.

ಸಂಗಮೇಶ ತಗ್ಗಿ.

ಭೀಮಶಿ ಮಡಿವಾಳರ.


Spread the love

About inmudalgi

Check Also

ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ

Spread the love ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ ಮೂಡಲಗಿ: ಕೆರಳಾದ ಶ್ರೀ ಶಟ್ ಶಾಸ್ತ್ರ …

2 comments

  1. ಇಂತಹ ಸಾಮಾಜಿಕ ಕಾಳಜಿ ಹಾಗೂ ಸದೃಡ ರಾಷ್ಟ್ರ ನಿರ್ಮಾಣ ಮತ್ತು ದೇಶ ಸೇವೆ ಯಲ್ಲಿ ಅವರ ಪಾತ್ರದ ಬಗ್ಗೆ ಅರಿವು ಮೂಡಿಸಲು ನಾವೆಲ್ಲರೂ ಕೂಡಿ ಸಹಕರಿಸೋಣ . ಜೈ ಹಿಂದ್

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ