ಕರೋನಾ ಜಾಗೃತಿ ಅಭಿಯಾನ
ಕುಲಗೋಡ: ಮೂಡಲಗಿ ತಾಲೂಕಿನ ಕುಲಗೋಡ ಗ್ರಾಮ ಪಂಚಾಯತಿಯಲ್ಲಿ ಬುಧವಾರ ಮುಂಜಾನೆ ನವ್ಯ ದಿಶಾ ಮತ್ತು ಕ್ರೆಡಿಟ್ ಆಕ್ಸೆಸ್ ಗ್ರಾಮೀಣ ಲಿಮಿಟೆಡ್ ಸಹಯೋಗದಲ್ಲಿ ಕರೋನಾ ಜಾಗೃತಿ ಅಭಿಯಾನ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕುಲಗೋಡ ಗ್ರಾ.ಪಂ ಪಿಡಿಓ ಸದಾಶಿವ ದೇವರ ಮುಂಬರುವ ದಿನಗಳಲ್ಲಿ ಕರೋನಾ ಜಾಗೃತಿ ಜೊತೆಗೆ ಡೇಂಗ್ಯು, ಮಲೇರಿಯಾ, ಕಾಲರಾ, ಚಿಕ್ಕನ್ ಗುನ್ಯ ಇಂತಹ ಸಾಂಕ್ರಾಮಿಕ ರೋಗಗಳ ಬಗ್ಗೆ ಜನತೆ ಗಮನ ಹರಿಸಬೇಕು. ಕರೋನಾ ಹೊಗಲಾಡಿಸಲು ಸರಕಾರದ ನಿಯಮಗಳನ್ನು ಪಾಲಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ನವ್ಯ ದಿಶಾ ಮತ್ತು ಕ್ರೆಡಿಟ್ ಆಕ್ಸೆಸ್ ಗ್ರಾಮೀಣ ಲಿಮಿಟೆಡ್ ಬಸವರಾಜ ಅರಭಾವಿ. ಚೇತನ ಸನದಿ
ಗ್ರಾಮದ ಮುಖಂಡರಾದ ಸತೀಶ ವಂಟಗೋಡಿ. ವೆಂಕಪ್ಪ ಚನ್ನಾಳ. ತಮ್ಮಣ್ಣಾ ದೇವರ. ಪ್ರಶಾಂತ ವಂಟಗೋಡಿ. ಸಿಆರ್‍ಪಿ ಸುರೇಶ ತಳವಾರ. ಬಸು ನಾಯಿಕ. ಭೀಮಶಿ ಸೋಮಕ್ಕನವರ. ರುದ್ರಪ್ಪ ಲಕ್ಷ್ಮೇಶ್ವರ. ಸೋಮಲಿಂಗ ಮಿಕಲಿ. ಲಕ್ಷ್ಮಣ ನಂದಿ. ಬಸು ನಾವಿ. ವಿವೇಕ ನಾವಿ. ಹಾಗೂ ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಗ್ರಾಪಂ ಸಿಬ್ಬಂದಿ ಮುಖಂಡರು ಇದ್ದರು.
ಬಿ.ಪಿ ಕೋಟಿ ನಿರೂಪಿಸಿ ಅರ್ಜುನ ಪೂಜೇರಿ ವಂದಿಸಿ ಸ್ವಾಗತಿಸಿದರು
IN MUDALGI Latest Kannada News