Breaking News
Home / ತಾಲ್ಲೂಕು / ಕೊರೊನಾದಿಂದ ಮುಕ್ತರಾಗಲು ಮನೆಮದ್ದು ಸೂಕ್ತ

ಕೊರೊನಾದಿಂದ ಮುಕ್ತರಾಗಲು ಮನೆಮದ್ದು ಸೂಕ್ತ

Spread the love

ಕೊರೊನಾದಿಂದ ಮುಕ್ತರಾಗಲು ಮನೆಮದ್ದು ಸೂಕ್ತ

ಮೂಡಲಗಿ: ‘ಕೊರೊನಾ ಸೋಂಕಿನಿಂದ ಮುಕ್ತರಾಗಲು ಮನೆಮದ್ದು ಸೂಕ್ತ ಪರಿಹಾರವಾಗಿದೆ’ ಎಂದು ಮೂಡಲಗಿ ಪುರಸಭೆಯ ಆರೋಗ್ಯ ನಿರೀಕ್ಷಕ ಚಿದಾನಂದ ಮುಗಳಖೋಡ ಹೇಳಿದರು.
ತಾಲ್ಲೂಕಿನ ಮುನ್ಯಾಳ ಗ್ರಾಮದಲ್ಲಿ   ನಡೆದ ಅಧಿಕ ಮಾಸದ ನಿಮಿತ್ತವಾಗಿ ಒಂದು ತಿಂಗಳ ಪರ್ಯಂತರವಾಗಿ ಹಮ್ಮಿಕೊಂಡಿರುವ ‘ಮನೆ, ಮನೆಗೆ ಅರುಹಿನ ಅರಮನೆ ಪ್ರವಚನ ಮತ್ತು ಕೋವಿಡ್ ಅರಿವು’ ಅಭಿಯಾನದ 5ನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕೊರೊನಾ ಸೋಂಕಿನ ಬಗ್ಗೆ ಅಲಕ್ಷತೆ ಮಾಡಬಾರದು ಎಂದರು.
ಶುಂಠಿ, ಅರಿಶಿನ, ಮೆಣಸು, ಬೆಳ್ಳುಳ್ಳಿ, ದಾಲ್ಚಿನ್ನಿ, ಲವಂಗ, ಮೆಂತೆಕಾಳು, ಲಿಂಬು ರಸ, ಬೆಲ್ಲ, ಕಲ್ಲುಸಕ್ಕರೆ, ಜೇನುತುಪ್ಪ ಹೀಗೆ ಅಡುಗೆ ಮನೆಯಲ್ಲಿಯೇ ಸೋಂಕು ದೂರಮಡುವ ಸಂಗತಿಗಳಿದ್ದು, ಅವುಗಳಿಂದ ಕಷಾಯ ಮಾಡಿ ಬಳಸಬೇಕು ಎಂದು ಬಳಸುವ ಕ್ರಮವನ್ನು ತಿಳಿಸಿದರು.
ವಯಸ್ಸಾದವರು, ಬಿಪಿ, ಸಕ್ಕರೆ, ಕಿಡ್ನಿ ಕಾಯಲೆ ಇದ್ದವರು ಕೊರೊನಾ ಸೋಂಕಿನ ಸುರಕ್ಷತೆಯ ಬಗ್ಗೆ ತೀವ್ರ ನಿಗಾವಹಿಸಬೇಕು. ಉಸಿರಾಟದ ತೊಂದರೆ ಅನುಭವಿಸುವವರು ಕೂಡಲೇ ಆಸ್ಪತ್ರೆಗೆ ದಾಖಲಾಗಬೇಕು ಎಂದರು.
ಪ್ರವಚನಕಾರ ಶರಣ ಲಕ್ಷ್ಮಣ ದೇವರು ಮಾತನಾಡಿ ಸದ್ಗುರುವಿನ ಉಪದೇಶ ಮತ್ತು ಸನ್ಮಾರ್ಗದಲ್ಲಿ ನಡೆದಾಗ ಮಾತ್ರ ಮುಕ್ತಿ ಪ್ರಾಪ್ತವಾಗುತ್ತದೆ. ಪ್ರತಿ ಮನುಷ್ಯನಿಗೆ ಗುರುವಿನ ಬಲ ಇರಬೇಕು ಎಂದರು.
ಸಾನ್ನಿಧ್ಯವಹಿಸಿದ್ದ ಡಾ. ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮೀಜಿಗಳು ಆಶೀರ್ವಚನ ನೀಡಿದರು.
ಆನಂದರಾವ ನಾಯ್ಕ್ ಅತಿಥಿಯಾಗಿ ಭಾಗವಹಿಸಿದ್ದರು.
ಕಾರ್ತಿಕ ಶಾಸ್ತ್ರೀ, ವೀರಯ್ಯ ಶಾಸ್ತ್ರೀಗಳು ಪ್ರಾರಂಭದಲ್ಲಿ ಮಂತ್ರಘೋಷ ಪಠಣ ಮಾಡಿದರು.
ಲಕ್ಷ್ಮಣ ಮೇತ್ರಿ, ಮಹಾದೇವ ಮೇಲಗಡೆ, ಚಂದ್ರು ಮಾಸನ್ನವರ, ಭೀಮಶಿ ಮೇತ್ರಿ, ಸದಾಶಿವ ಮೇಲಗಡೆ, ಸದಾಶಿವ ದೊಡ್ಡಮನಿ ಇದ್ದರು.
ಡಾ. ಕೆ.ಎಚ್. ನಾಗರಾಳ ನಿರೂಪಿಸಿದರು, ಸಂಜು ಮಂಟೂರ ವಂದಿಸಿದರು.
ಮಸೀದಿಯಲ್ಲಿ ಕಾರ್ಯಕ್ರಮ: ನಾಳೆ ಸೆ. 23ರಂದು ಬೆಳಿಗ್ಗೆ 8ಕ್ಕೆ ಮುನ್ಯಾಳ ಗ್ರಾಮದ ಮಸೀದಿ ಆವರಣದಲ್ಲಿ ಕಾರ್ಯಕ್ರಮ ಇರುವುದು. ಶ್ರೀಗಳ ಸಾನ್ನಿಧ್ಯ, ಮುಸ್ಲಿಂ ಸಮಾಜದ ಹಿರಿಯರು ಭಾಗವಹಿಸುವರು. ಖ್ಯಾತ ಜಾನಪದ ಗಾಯಕ ಶಬ್ಬೀರ ಡಾಂಗೆ ಅತಿಥಿಯಾಗಿ ಭಾಗವಹಿಸುವರು.


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ