ಮೂಡಲಗಿ ಶಿಕ್ಷಣ ಸಂಸ್ಥೆಯಲ್ಲಿ ಸಂತಾಪ ಸಭೆ
‘ಸುರೇಶ ಅಂಗಡಿ ಜನ ಮಾನಸದಲ್ಲಿ ಶಾಶ್ವತವಾಗಿ ಉಳಿಯುವ ವ್ಯಕ್ತಿತ್ವ
ಮೂಡಲಗಿ: ಹಲವಾರು ರೈಲ್ವೆ ಯೋಜನೆಗಳನ್ನು ಕರ್ನಾಟಕಕ್ಕೆ ತರುವ ಮೂಲಕ ಸಚಿವ ಸುರೇಶ ಅಂಗಡಿ ಅವರ ಕೊಡುಗೆ ಅಪಾರವಾಗಿದೆ’ ಎಂದು ಮೂಡಲಗಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ವಿಜಯಕುಮಾರ ಸೋನವಾಲಕರ ಹೇಳಿದರು.
ಸಚಿವ ಸುರೇಶ ಅಂಗಡಿ ಅವರ ಅಕಾಲಿಕ ನಿಧನಕ್ಕೆ ಸಂಸ್ಥೆಯಲ್ಲಿ ಗುರುವಾರ ಏರ್ಪಡಿಸದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.
ಬೆಳಗಾವಿಯಿಂದ ಬೆಂಗಳೂರಿಗೆ ರೈಲು ಪ್ರಾರಂಭಿಸಿದ್ದು ಶ್ಲಾಘನೀಯ ಕಾರ್ಯವಾಗಿದ್ದು, ಸುರೇಶ ಅಂಗಡಿ ಅವರು ಮಾಡಿರುವ ಕೆಲಸಗಳ ಮೂಲಕ ಜನ ಮಾನಸದಲ್ಲಿ ಶಾಸ್ವತವಾಗಿ ಉಳಿಯುತ್ತಾರೆ. ಅಂಥ ಸಜ್ಜನ ರಾಜಕಾರಣಿಯನ್ನು ನಾಡು ಕಳೆದುಕೊಂಡಿರುವುದು ಅತೀವ ದು:ಖದ ಸಂಗತಿಯಾಗಿದೆ ಎಂದರು.
ಸಾಹಿತಿ ಪ್ರೊ. ಸಂಗಮೇಶ ಗುಜಗೋಂಡ ಸುರೇಶ ಅಂಗಡಿ ಅವರು ನಡೆದು ಬಂದ ದಾರಿ ಹಾಗೂ ಸಾಧನೆಯ ಬಗ್ಗೆ ಹೇಳಿದರು.
ಸಭೆಯಲ್ಲಿ 2 ನಿಮಿಷ ಮೌನ ಆಚರಿಸಿ ಮೃತರಿಗೆ ಗೌರವ ಸಮರ್ಪಿಸಿದರು.
ಸಂತಾಪ ಸಭೆಯಲ್ಲಿ ನಿರ್ದೇಶಕರಾದ ಆರ್.ಪಿ. ಸೋನವಾಲಕರ, ಬಿ.ಎಚ್. ಸೋನವಾಲಕರ, ಅನಿಲ ಸತರಡ್ಡಿ, ಪ್ರಾಚಾರ್ಯ ಡಾ. ಆರ್.ಎ. ಶಾಸ್ತ್ರೀಮಠ, ಪ್ರೌಢ ಶಾಲೆಯ ಉಪಪ್ರಾಚಾರ್ಯ ಎ.ಆರ್. ಶೇಗುಣಶಿ ಹಾಗೂ ಸಿಬ್ಬಂದಿಯವರು ಭಾಗವಹಿಸಿದ್ದರು..