ಮರೆಯಾದ ಸಂಗೀತ ಲೋಕದ ಮೇರು ಪರ್ವತ ಎಸ್.ಪಿ.ಬಿ: ರಾಜ್ಯಸಭಾ ಸದಸ್ಯ ಕಡಾಡಿ ಶೋಕ
ಬೆಳಗಾವಿ: ಕನ್ನಡ ಭಾಷಯ ಬಗ್ಗೆ ವಿಶೇಷ ಅಭಿಮಾನ ಹೊಂದಿರುವ ಹಿನ್ನೆಲೆ ಗಾಯಕ, ಪದ್ಮಭೂಷಣ ಡಾ. ಎಸ್.ಪಿ. ಬಾಲಸುಬ್ರಮಣ್ಯಂ (74) ಅವರ ಅಗಲಿಕೆಗೆ ರಾಜ್ಯಸಭಾ ಸದಸ್ಯ ಹಾಗೂ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ ಶೋಕ ವ್ಯಕ್ತಪಡಿಸಿದರು. ಇಡೀ ಜಗತ್ತಿಗೆ ಬೇಕಾದಂಥ ಸಂಗೀತ ಲೋಕದ ಗಾರುಡಿಗ, ಅಂತಹ ವ್ಯಕ್ತಿಯನ್ನು ಕಳೆದುಕೊಂಡಿದ್ದೆವೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ. ಕುಟುಂಬಸ್ಥರಿಗೆ, ಅಭಿಮಾನಿಗಳಿಗೆ ದು:ಖವನ್ನು ಬರಿಸುವ ಶಕ್ತಿ ನೀಡಲಿ ಎಂದು ಕಡಾಡಿ ಅವರು ಸಂತಾಪ ಸೂಚಿಸಿದ್ದಾರೆ
