ಮೂಡಲಗಿ ಲಯನ್ಸ್ ಕ್ಲಬ್ ಪರಿವಾರದಿಂದ ಅಕಾಲಿಕ ನಿಧನರಾದ ಪ್ರಕಾಶ ಬಾಗೇವಾಡಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದರು
ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದಲ್ಲಿ ಶ್ರದ್ಧಾಂಜಲಿ
‘ಶಿಸ್ತು, ಕಾಯಕಶ್ರದ್ಧೆಗೆ ಮಾದರಿ ಪ್ರಕಾಶ ಬಾಗೇವಾಡಿ’
ಮೂಡಲಗಿ: ‘ಪ್ರಕಾಶ ಬಾಗೇವಾಡಿ ಅವರಲ್ಲಿದ್ದ ಶಿಸ್ತು, ಒಳ್ಳೆಯ ಸಂಘಟನೆಯ ಚಾತುರ್ಯತೆ ಹಾಗೂ ಕಾಯಕ ಶ್ರದ್ಧೆಯ ವ್ಯಕ್ತಿತ್ವವು ಎಲ್ಲರಿಗೂ ಮಾದರಿಯಾಗಿತ್ತು’ ಎಂದು ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದ ಅಧ್ಯಕ್ಷ ಪುಲಕೇಶ ಸೋನವಾಲಕರ ಹೇಳಿದರು.
ಅಕಾಲಿಕ ನಿಧನರಾದ ಲಯನ್ಸ್ ಕ್ಲಬ್ ನಿಕಟಪೂರ್ವ ಅಧ್ಯಕ್ಷರಾಗಿದ್ದ ಪ್ರಕಾಶ ಬಾಗೇವಾಡಿ ಅವರಿಗೆ ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದಿಂದ ಸ್ಥಳೀಯ ಸಾಯಿ ಮಹಾವಿದ್ಯಾಲಯದಲ್ಲಿ ಗುರುವಾರ ಏರ್ಪಡಿಸಿದ್ದ ಶ್ರದ್ದಾಂಜಲಿ ಮತ್ತು ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಲಯನ್ಸ್ ಕ್ಲಬ್‍ಗೆ ಅನನ್ಯ ಸೇವೆ ಸಲ್ಲಿಸಿದ್ದು, ಲಯನ್ಸ್ ಪರಿವಾರಕ್ಕೆ ಒಂದು ಶಕ್ತಿಯಾಗಿದ್ದರು ಎಂದರು.
ಲಯನ್ಸ್ ಕ್ಲಬ್ ವಿಭಾಗೀಯ ಅಧ್ಯಕ್ಷ ವೆಂಕಟೇಶ ಸೋನವಾಲಕರ ಮಾತನಾಡಿ ಪ್ರಕಾಶ ಬಾಗೇವಾಡಿ ಅವರ ನಿಧನವು ಅತ್ಯಂತ ಆಘಾತಕಾರಿಯಾಗಿದೆ. ಅಂಥ ಕ್ರೀಯಾಶೀಲ ಮತ್ತು ಚಿಂತನಾಶೀಲ ವ್ಯಕ್ತಿಯ ಅಗಲಿಕೆಯಿಂದ ನಾಡಿಗೆ ಬಹಳಷ್ಟು ನಷ್ಟವಾಗಿದೆ ಎಂದರು.
ಡಾ. ಎಸ್.ಎಸ್. ಪಾಟೀಲ ಹಾಗೂ ಬಾಲಶೇಖರ ಬಂದಿ ಮಾತನಾಡಿ ಅವರ ಒಡನಾಟದ ಹೃದಯಸ್ಪರ್ಷಿ ಸಂಗತಿಗಳನ್ನು ಹಂಚಿಕೊಂಡರು.
ಸಭೆಯಲ್ಲಿ ಒಂದು ನಿಮಿಷ ಮೌನ ಆಚರಿಸಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದರು.
ಸಭೆಯಲ್ಲಿ ಶ್ರೀಶೈಲ್ ಲೋಕನ್ನವರ, ಡಾ. ಪ್ರಕಾಶ ನಿಡಗುಂದಿ, ಸಂಜಯ ಮೋಕಾಶಿ, ಮಹಾಂತೇಶ ಹೊಸೂರ, ಉದಯಕುಮಾರ ಜೋಕಿ, ಶಿವಾನಂದ ಗಾಡವಿ, ಅಬ್ದುಲ್ ಬಾಗವಾನ, ಸಂದೀಪ ಸೋನವಾಲಕರ, ಮಲ್ಲಿನಾಥ ಶೆಟ್ಟಿ, ಸುಪ್ರೀತ ಸೋನವಾಲಕರ ಪ್ರಕಾಶ ಅವರ ನಿಧನಕ್ಕೆ ಕಂಬನಿಯನ್ನು ಮೀಡಿದರು.
Home / Recent Posts / ಮೂಡಲಗಿ ಲಯನ್ಸ್ ಕ್ಲಬ್ ಪರಿವಾರದಿಂದ ಅಕಾಲಿಕ ನಿಧನರಾದ ಪ್ರಕಾಶ ಬಾಗೇವಾಡಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದರು ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದಲ್ಲಿ ಶ್ರದ್ಧಾಂಜಲಿ
Check Also
‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’
Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …