ಮೂಡಲಗಿ : “ರಾಜ್ಯದಲ್ಲಿಯೇ ಅತೀ ಹೆಚ್ಚು ಯೋಧರನ್ನು ದೇಶ ರಕ್ಷಣೆಗೆ ನೀಡುವ ಜಿಲ್ಲೆಗಳಲ್ಲಿ ಬೆಳಗಾವಿ ಜಿಲ್ಲೆ ಅಗ್ರ ಪಂಕ್ತಿಯಲ್ಲಿ ನಿಲ್ಲುತ್ತದೆ. ದೇಶ ಸೇವೆಗೆ ತಮ್ಮ ಕರುಳ ಕುಡಿಗಳನ್ನು ಧೈರ್ಯದಿಂದ ಕಳುಹಿಸುವ ಗಟ್ಟಿ ಗುಂಡಿಗೆಯ ತಾಯಿಂದಿರು ಇಲ್ಲಿದ್ದಾರೆ. ಇಂತಹ ವೀರ ನಾಡಿನಲ್ಲಿ ಹುಟ್ಟಿ ೨೦/0೯/೨೦೦೩ ರಲ್ಲಿ ಭಾರತೀಯ ಸೇನೆಗೆ ಸೇರಿ ಸುಮಾರು ೧೭ ವರ್ಷಗಳ ಕಾಲ ೪ನೇ ಮದ್ರಾಸ್ ರೆಜಿಮೆಂಟ್ ಬಟಾಲಿಯನ್ ನಲ್ಲಿ ಎಲ್.ಎನ್.ಕೆ ಹುದ್ದೆಯಲ್ಲಿ ಅಪ್ರತಿಮ ಸೇವೆ ಸಲ್ಲಿಸಿರುವವರು ಮೂಡಲಗಿಯ ಕಿರಣ ಚಂದ್ರಕಾಂತ ಇಂಗಳೆ. ಇವರು ದಿನಾಂಕ:೩೦/೦೯/೨೦೨೦ಕ್ಕೆ ನಿವೃತ್ತಿ ಹೊಂದಿರುತ್ತಾರೆ. ರಾಷ್ಟ್ರ ಸೇವೆಗೆ ಇವರು ಕೊಡುಗೆ ಅಪಾರವಾದುದು” ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ ಸಿ ಮನ್ನಿಕೇರಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ದಿನಾಂಕ:೦೨/೧೦/೨೦೨೦ ರಂದು ಮೂಡಲಗಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ದೇಶ ಸೇವೆಯಿಂದ ನಿವೃತ್ತರಾದ ಕಿರಣ ಚಂದ್ರಕಾಂತ ಇಂಗಳೆ ಇವರ ಆತ್ಮೀಯ ಸರಳ ಸತ್ಕಾರ ಸಮಾರಂಭವನ್ನು ಉದ್ದೇಶಿಸಿ ಮಾತನಾಡುತ್ತಾ ಈ ಅಭಿಪ್ರಾಯ ವ್ಯಕ್ತಪಡಿಸಿದರು. ದೇಶ ರಕ್ಷಣೆಗೆ ಕಿರಣ ಚಂದ್ರಕಾಂತ ಇಂಗಳೆಯವರು ನೀಡಿರುವ ಕೊಡುಗೆಯನ್ನು ಸ್ಮರಿಸಿ ಪ್ರಶಂಸಿಸಲಾಯಿತು.
ಈ ಸಂದರ್ಭದಲ್ಲಿ ಇ.ಸಿ.ಓ ಸತೀಶ ಬಿ.ಎಸ್, ಕಚೇರಿ ಸಿಬ್ಬಂದಿ ಚಿದಾನಂದ ಹಾಗೂ ಕಿರಣ ಇಂಗಳೆಯವರ ಗೆಳೆಯರು ಉಪಸ್ಥಿತರಿದ್ದರು.