ಬಲವರ್ಧನೆ ಮತ್ತು ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ
ಮೂಡಲಗಿ: ಕೃಷಿ ಇಲಾಖೆಯ ಆತ್ಮ ಯೋಜನೆಯಡಿಯಲ್ಲಿ ಕಲ್ಲೋಳಿ ಗ್ರಾಮದ ಸಾವಯುವ ಕೃಷಿಕರಾದ ಕೃಷಿ ಪಂಡಿತ ಪ್ರಶಸ್ತಿ ವಿಜೇತೆ ಶ್ರೀಮತಿ ಸಕ್ರವ್ವಾ ಹಡಿಗಿನಾಳ(ನಾವಿ) ಅವರ ತೋಟದಲ್ಲಿ ರೈತ ಗುಂಪುಗಳಿಗೆ ಸಾಮರ್ಥ ಬಲವರ್ಧನೆ ಮತ್ತು ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ ಜರುಗಿತು.
ಈ ವೇಳೆಯಲ್ಲಿ ಕೃಷಿ ವಿಜ್ಞಾನಿಗಳು ರೈತರಿಗೆ ಅಗ್ನಿ ಹೊತ್ರ ಕೃಷಿಯ ತಾಂತ್ರಿಕತೆ ಮತ್ತು ಅಗ್ನಿಹೋತ್ರದ ಉಪಯೋಗದ ಉದ್ದೇಶಗಳ ಬಗ್ಗೆ ಪ್ರಾಯೋಗಿಕವಾಗಿ ಮಾಹಿತಿಯನ್ನು ತಿಳಿಸಿ ಮಣ್ಣು ಪರೀಕ್ಷೆ ಹಾಗೂ ಮಣ್ಣು ಮಾದರಿ ತೆಗೆಯುವ ಮೂಲಕ ಮಾಹಿತಿಯನ್ನು ತಿಳಿಸಿದರು.
ತುಕ್ಕಾನಟ್ಟಿ ಬಡ್ರ್ಸ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ: ಸೂರಜ ಕೌಜಲಗಿ ಅವರು ಹೈನುಗಾರಿಕೆ ಮತ್ತು ಆಧುನಿಕ ಪಶುಸಂಗೋಪನ ಕ್ರಮಗಳ ಬಗ್ಗೆ ಮತ್ತು ರಾಷ್ಟ್ರೀಯ ಪ್ರಸಸ್ತಿ ವಿಜೇತ ಸಣ್ಣಯಮನಪ್ಪ ರಾಜಾಪೂರೆ ಅವರು ಸಮಗ್ರ ಕೃಷಿಯ ಕುರಿತು ಹಾಗೂ ಸಾವಯುವ ಕೃಷಿಕ ರಾಮಸಿದ್ಧ ನಾವಿ ಅವರು ಅಗ್ನಿಹೋತ್ರದ ಬಗ್ಗೆ ಮಾಹಿತಿ ನೀಡಿದರು.
ಕೃಷಿ ಇಲಾಖೆಯ ಆತ್ಮಾ ಯೋಜನೆಯ ತಾಂತ್ರಿಕ ಅಧಿಕಾರಿ ಛಾಯಾ ಪಾಟೀಲ ಅವರು ಆತ್ಮಾ ಯೋಜನೆಯ ಸೌಲಭ್ಯಗಳನ್ನು ಹಾಗೂ ಸಾವಯುವ ಕೃಷಿ ಕುರಿತು ಮಾಹಿತಿ ವಿವರಿಸಿದರು.
ಕಾರ್ಯಕ್ರಮದಲ್ಲಿ ಪ್ರಗತಿಪರ ರೈತರು, ರೈತ ಮಹಿಳೆಯರು, ಸಾವಯುವ ಕೃಷಿಕರು ಭಾಗವಹಿಸಿದ್ದರು. ಕೌಜಲಗಿ ಆತ್ಮ ಯೋಜನೆಯ ತಾಂತ್ರಿಕ ವ್ಯವಸ್ಥಾಕ ವಿನೋಧ ಭಾಗಿಮನಿ ಸ್ವಾಗತಿಸಿದರು, ಆತ್ಮ ಯೋಜನೆಯ ತಾಂತ್ರಿಕ ವ್ಯವಸ್ಥಾಕಿ ಪೂರ್ಣಿಮಾ ಒಡರಾಳೆ ವಂದಿಸಿದರು.