ಪ್ರಾಮಾಣಿಕ ಸೇವೆಯೇ ಪರಮಾತ್ಮನ ಸೇವೆ -ಲಾಲಸಾಬ ಸಿದ್ದಾಪೂರ
ಮೂಡಲಗಿ : ಸಮಾಜ ಸವೇಗೆ ಬದ್ದವಾಗಿ ಪ್ರಾಮಾಣಿಕ ಸೇವೆ ಮಾಡಿದಲ್ಲಿ ದೇವರು ಮೆಚ್ಚುವನು ಎಂದು ಅಂಜುಮನ ಇಸ್ಲಾಂ ಕಮಿಟಿ ಸದಸ್ಯ ಲಾಲಸಾಬ ಸಿದ್ದಾಪೂರ ಹೇಳಿದರು
ಅವರು ಸೋಮವಾರದಂದು ನೂತನ ಕಮಿಟಿ ಮೊಹಮದೀಯಾ ಅಭಿವೃದ್ದಿ ಸೇವಾ ಸಂಘದ ಸರಳ ಉದ್ಘಾಟನಾ ಸಮಾರಂಭದ ಅತಿಥಿಯಾಗಿ ಸತ್ಕಾರ ಸ್ವೀಕರಿಸಿ ಮಾತನಾಡಿ, ಸದಸ್ಯರೆಲ್ಲ ಒಗ್ಗಟ್ಟಿನಿಂದ ಕಾಯ ನಿರ್ವಹಿಸಿ ಎಲ್ಲ ವರ್ಗದ ಜನತೆಯ ಮೆಚ್ಚುಗೆ ಪಡೆದು ಮಾದರಿ ಸಂಘವಾಗಿ ಬೆಳೆಯಲಿ ಎಂದರು.
ಮೌಲಾನಾ ಅಬೂಬಕ್ಕರ ಪೈಲವಾನ ಮಾತನಾಡಿ,ನೆರೆಹೊರೆವರ ಕಾಳಜಿ ಆರ್ಥಿಕ ಸಂಕಷ್ಟದಲ್ಲಿರವವರಿಗೆ ಸಹಾಯ ಮತ್ತು ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ಕಮಿಟಿಯು ಕಾರ್ಯನಿರ್ವಹಿಸಲಿ ಎಂದು ಅನೇಕ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಮೊಹಮದಿಯಾ ಕಮಿಟಿ ವತಿಯಿಂದ ಅಂಜುಮನ ಇಸ್ಲಾಂ ಕಮಿಟಿಯ ನೂತನ ಅಧ್ಯಕ್ಷ ಮಲೀಕ ಹುಣಶ್ಯಾಳ,ಉಪಾಧ್ಯಕ್ಷ ಮೌಲಾಸಾಬ ಮೊಗಲ್ ಕಾರ್ಯದರ್ಶಿ ಶಕೀಲ ಬೇಪಾರಿ,ಮಲೀಕ ಪಾಶ್ಚಾಪೂರ ಅವರನ್ನು ಸತ್ಕರಿಸಿ ಗೌರವಿಸಿದರು.
ಮೊಹಮದೀಯಾ ಕಮಿಟಿಯ ಅಧ್ಯಕ್ಷ ಮಲೀಕಸಾಬ ಮೊಗಲ್,ಉಪಾಧ್ಯಕ್ಷ ನೂರ ಮೋಮಿನ, ಕಾರ್ಯದರ್ಶಿ ಇಮ್ತಿಯಾಜ ಕಲಾರಕೊಪ್ಪ, ಫಿರೋಜ ಮುಜಾವರ, ಸದಸ್ಯರಾದ ಗಜಬರಸಾಬ ಗೋಕಾಕ, ಸಮಿಅಲ್ಲಾ ಮಲ್ಲಾಪೂರ, ಅಶ್ಫಾಕ ಕಲಾರಕೊಪ್ಪ, ಯೂಸೂಫ ಗೂಡವಾಲೆ,ಆರಿಫ್ ಬಳಿಗಾರ, ನಾಶೀರ ಗೋವಿನಕೊಪ್ಪ, ಖ್ವಾಜಾ ಮೊಗಲ್,ಮುಜೀದ ಕಲಾರಕೊಪ್ಪ ಮತ್ತು ಅನೇಕ ಮುಖಂಡರು ಉಪಸ್ಥಿತರಿದ್ದರು.
IN MUDALGI Latest Kannada News