ಹಿಂಗಾರು ಬೆಳೆಗಳ ನೂತನ ತಂತ್ರಜ್ಞಾನಗಳ ತರಬೇತಿ
ಮೂಡಲಗಿ: ರೈತರು ಬಿತ್ತನೆ ಮೊದಲು ತಮ್ಮ ಹೊಲಗಳಲ್ಲಿ ಬೆಳೆಗಳ ಯೋಜನೆಯನ್ನು ತಮ್ಮ ಕ್ಷೇತ್ರಕ್ಕೆ ಅನುಗುಣವಾಗಿ ತಯಾರಿಸಬೇಕು. ಮಣ್ಣಿನ ಗುಣಧರ್ಮ ಹವಾಮಾನ ಮತ್ತು ನೀರಾವರಿ ಮೂಲದ ಮೇಲೆ ಬೆಳೆಗಳನ್ನು ಆಯ್ಕೆ ಮತ್ತು ಹಿಂಗಾರಿ ಹಂಗಾಮಿನ ಬೀಜ ಬಿತ್ತುವ ಮುನ್ನ ಸುಧಾರಿತ ಬಿಜ್ಜವನ್ನು ಆಯ್ಕೆ ಮಾಡಿಕೊಳ್ಳವುದರಿಂದ ಬೀತನೆ ಮಾಡಿದ ಬೀಜಗಳಲ್ಲಿ ಸಸಿಗಳು ಹೆಚ್ಚು ಮೊಳಕೆ ಕಾಣಬಹುದು ಎಂದು ತುಕ್ಕಾನಟ್ಟಿ ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ತಜ್ಞ ಡಾ.ಮಾರುತಿ ಎನ್.ಮಲಾವಡೆ ಹೇಳಿದರು.
ಅವರು ಬುಧವಾರದಮದು ಜಿಲ್ಲಾ ಕೃಷಿ ತರಬೇತಿ ಕೇಂದ್ರ ಅರಭಾವಿಯಲ್ಲಿ ಜರುಗಿದ “ಹಿಂಗಾರು ಬೆಳೆಗಳ ನೂತನ ತಂತ್ರಜ್ಞಾನಗಳು” ಬಗ್ಗೆ ಆನ್ ಲೈನ್ ತರಬೇತಿಯಲ್ಲಿ ಮಾತನಾಡಿ, ಸುಧಾರಿತ ನೂತನ ತಂತ್ರಜ್ಞಾನಗಳಿಂದ ಭೂಮಿ ತಯಾರಿಸಿ ಬೆಳೆಗಳ ಅನುಗಣವಾಗಿ ವಿಧದ ದ್ರಾವಣಗಳಿಂದ ಬೀಜೋಪಚಾರ ಮಾಡಬೇಕು, ಮೆಳೆಯಾಶ್ರಿತ ಗೋದಿಯನ್ನು ಅಕ್ಟೋಬರ್ ಮಧ್ಯಭಾಗದಿಂದ ನವಂಬರ್ ಕೊನೆಯವರೆಗೆ ಹಾಗೂ ನೀರಾವರಿ ಆಶ್ರಿತ ಬೆಳೆಯನ್ನು ಡಿಸೆಂಬರ್ ಕೊನೆಯವರೆಗೆ ಬಿತ್ತನೆ ಮಾಡಬಹುದು. ತಡವಾದಂತೆ ಮೊಳಕೆಯೊಡೆಯುವ ಪ್ರಮಾಣ, ತೆನೆಯಲ್ಲಿ ಕಾಳು ಕಟ್ಟುವ ಪ್ರಮಾಣ ಹಾಗೂ ಕಾಳಿನ ಸಾಂದ್ರತೆ ಕಡಿಮೆ ಆಗಿ ಇಳುವರಿ ಕಡಿಮೆಯಾಗುವುದು ಎಂದ ಅವರು ತರಬೇತಿಯಲ್ಲಿ ಕಡಲೆ, ಜೋಳ ಹಾಗೂ ರವೆ ಗೋದಿ, ಚಪಾತಿ ಹಿಟ್ಟು ಗೋದಿ, ಜವೆ ಗೋದಿ ಬಿತ್ತನೆಯ ಮತ್ತು ಭೂಮಿ ತಯಾರಿಕೆ ಹಾಗೂ ಬೀಜೋಪಚಾರದ ಬಗ್ಗೆ ಸಮಗ್ರ ಮಾಹಿತಿ ನೀಡಿದರು
ಸಹಾಯಕ ಪ್ರಾಧ್ಯಾಪಕರು, ಅರಬಾಂವಿ ಕಿತ್ತೂರ ರಾಣಿ ಚನ್ನಮ್ಮಾ ತೋಟಗಾರಿಕಾ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ದೀಲಿಪ ಮಸೂತಿ, ಅರಬಾಂವಿ ಜಿಲ್ಲಾ ಕೃಷಿ ಕೇಂದ್ರ ಕೃಷಿ ಅಧಿಕಾರಿಗಳಾದ ಶ್ರೀಮತಿ ಜಡ್.ಆರ್. ಪೀರಜಾದೆ, ಶ್ರೀಮತಿ ಖಾಜಾ ರುಬೀನಾ ಎಸ್, ಶ್ರೀ ಅಶೋಕ ಎಸ್ ಸಬರದ ಮತ್ತಿತರು ಇದ್ದರು.
Check Also
ಖಾನಟ್ಟಿ ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ಉತ್ತಮ ಸಹಕಾರ ಸಂಘ ಪ್ರಶಸ್ತಿ
Spread the loveಮೂಡಲಗಿ : ಬೆಳಗಾವಿ ಜಿಲ್ಲಾ ಉತ್ತಮ ಸಹಕಾರಿ ಸಂಘ ಪ್ರಶಸ್ತಿ ಬೆಳಗಾವಿಯಲ್ಲಿ ನಡೆದ 71ನೇ ಅಖಿಲ ಭಾರತ …