ಜ.26ರ ಒಳಗೆ ತಾಲೂಕಾ ಮಟ್ಟದ ಕಚೇರಿಗಳು ಬರದೇ ಇದ್ದಲ್ಲಿ ಉಗ್ರ ಹೋರಾಟ ಆರಂಭ : ಗಡಾದ
ಮೂಡಲಗಿ : ಮೂಡಲಗಿ ತಾಲೂಕು ಘೋಷಣೆಯಾಗಿ ಮೂರು ವರ್ಷಗಳಾದರೂ ಇಲ್ಲಿಯವರೆಗೂ ತಾಲೂಕಾ ಕೇಂದ್ರಕ್ಕೆ ಬರಬೇಕಾದ ಕಚೇರಿಗಳು ಬಂದಿಲ್ಲ. ಮನಸ್ಸು ಮಾಡಿದರೆ ಒಂದು ಗಂಟೆಯಲ್ಲಿ ಉಪ ನೋಂದಣಿ ಕಚೇರಿಯನ್ನು ತರುವ ಶಕ್ತಿ ಶಾಸಕರಲ್ಲಿದೆ ಎಂದು ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ ಹೇಳಿದರು.
ಗುರುವಾರದಂದು ಸಮರ್ಥ ಶಾಲೆಯಲ್ಲಿ ಪತ್ರಿಕಾಘೋಷ್ಠಿ ನಡೆಸಿ ಮಾತನಾಡಿದ ಅವರು ಮೂಡಲಗಿ ತಾಲೂಕಿಗೆ ಬರಬೇಕಾದ ಎಲ್ಲ ಕಚೇರಿಗಳು ಜನೇವರಿ 26ರ ಒಳಗೆ ಬರದೇ ಇದ್ದಲ್ಲಿ ಜನೇವರಿ 26ರ ನಂತರ ಸತ್ಯ ವೇದಿಕೆ ಮೂಲಕ ಉಗ್ರ ಹೋರಾಟ ಮಾಡಲಾಗುವುದು ಎಂದು ಹೇಳಿದರು.
ಕಲ್ಲೋಳಿಯ ಈರಪ್ಪ ಬೆಳಕೂಡ ಮಾತನಾಡಿ, ಒಂದು ಸರ್ಕಾರವನ್ನು ಉರುಳಿಸುವಂತ ಶಕ್ತಿ ಹೊಂದಿರುವ ಶಾಸಕರಿಗೆ ತಾಲೂಕಾ ಕಚೇರಿಗಳನ್ನು ತರುವುದು ಕಷ್ಟದ ಕೆಲಸವಲ್ಲ ಎಂದರು.
ಎಸ್.ಆರ್.ಸೋನವಾಲ್ಕರ ಮಾತನಾಡಿ.ತಾಲೂಕಿನ ಜನರಿಗೋಸ್ಕರ ಆದರೂ ಸಹ ಆದಷ್ಟು ಬೇಗಾ ತಾಲೂಕಿಗೆ ಬೇಕಾದ ಕಚೇರಿಗಳನ್ನು ಒದಗಿಸುವಂತ ಕಾರ್ಯವನ್ನು ಶಾಸಕರು ಮಾಡಿಲ್ಲಿ ಎಂದರು.ಪ್ರಕಾಶ.ಆರ್.ಸೋನವಾಲ್ಕರ ಮಾತನಾಡಿ, ರಾಯಬಾಗ ತಾಲೂಕಿನ ಕೆಲ ಹಳ್ಳಿಗಳನ್ನು ಸೇರಿಕೊಂಡು ಒಳ್ಳೆಯ ತಾಲೂಕನ್ನಾಗಿ ಮಾಡಬೇಕೆಂದರು.
ರಮೇಶ ಉಟಗಿ ಮಾತನಾಡಿ, ಒಂದು ತಿಂಗಳಲ್ಲಿ ಕಚೇರಿಗಳನ್ನು ತರುವುದಾಗಿ ಶಾಸಕರು ಭರವಸೆಯನ್ನು ನೀಡಿದರು ಆದರೆ ತಾಲೂಕಾಗಿ ವರ್ಷಗಳೇ ಕಳೆದರೂ ಶಾಸಕರ ಭರವಸೆ ಈಡೇರಿಲ್ಲ. ಎಂದರು. ಲಕ್ಕಣ್ಣ ಸವಸುದ್ದಿ ಮಾತನಾಡಿ, ತಾಲೂಕು ಘೋಷಣೆಯಾದ ಸಂದರ್ಭದಲ್ಲಿ ಎಲ್ಲ ಕಚೇರಿಗಳನ್ನು ತಂದು ತಿಂಗಳಲ್ಲಿ ಹದಿನೈದು ದಿನ ಮೂಡಲಗಿಯಲ್ಲಿ ಇರುವುದಾಗಿ ಹೇಳಿದ ಭರವಸೆ ಈಡೇರಿಸಿಲ್ಲ ಎಂದರು.
ಈ ಸಂದರ್ಭದಲ್ಲಿ ಸತೀಶ ವಂಟಗೋಡಿ ಈರಪ್ಪ ಕೊಣ್ಣುರ ನಿರೂಪಿಸಿದರು ಚನ್ನಪ್ಪ ಅಥಣಿ ಸ್ವಾಗತಿಸಿದರು ಮಲ್ಲಪ್ಪ ಮದಗುಣಕಿ ವಂದಿಸಿದರು