ಮೂಡಲಗಿ: ಮಾಸ್ಕ ಧರಿಸುವದು ಎಲ್ಲರಿಗೂ ಕಡ್ಡಾಯವಿರುವದಿಲ್ಲಾ, ಯಾವಾಗ ವ್ಯಕ್ತಿಯು ಶೀತ, ಕೆಮ್ಮು, ಜ್ವರ ಅಥವಾ ಉಸಿರಾಟದ ತೊಂದರೆಯಂತಹ ರೋಗದ ಲಕ್ಷಣಗಳಿದ್ದರೆ, ಶಂಕಿತ ಖಚಿತ ಕೋವಿಡ್-19 ವ್ಯಕ್ತಿಯ ನಿಗಾವಹಿಸುತ್ತಿದ್ದಲ್ಲಿ, ಉಸಿರಾಟ ತೊಂದರೆ ಇರುವಂತಹ ರೋಗಿಗಳ ಸೇವೆಯಲ್ಲಿ ತೊಡಗಿಕೊಂಡಿರುವ ಆರೋಗ್ಯ ಕಾರ್ಯಕರ್ತರು ಮಾಸ್ಕ ಧರಿಸುವ ಕುರಿತು ಆರೋಗ್ಯ ಇಲಾಖೆ ಆಯುಕ್ತರು ಸೂಚನೆ ನೀಡಿರುತ್ತಾರೆಂದು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ತಿಳಿಸಿದ್ದಾರೆ.
ಅನಗತ್ಯವಾಗಿ ಮಾಸ್ಕ ಕುರಿತು ಎಲ್ಲ ಕಡೆ ಕಡಿಮೆ ವೆಚ್ಚದ ಹಾಗೂ ಉಪಯೋಗಕ್ಕೆ ಬಾರದಂತಾಗಿದೆ. ಆರೋಗ್ಯ ಇಲಾಖೆಯ ಅಧಿಕೃತ ಮಾಹಿತಿಯಂತೆ ಯಾರು ಶಂಕಿತ ಖಚಿತ ಕೋವಿಡ್ 19 ರೋಗಕ್ಕೆ ತುತ್ತಾಗಿರುವ ವ್ಯಕ್ತಿ ಹಾಗೂ ಅವರ ಸೇವೆಯಲ್ಲಿರುವವರು ಹಾಗೂ ಉಸಿರಾಟದ ಮತ್ತು ಕೆಮ್ಮು ಶೀತ ಜ್ವರದ ಸಮಸ್ಯೆ ಇದ್ದವರು ಮಾತ್ರ ಎನ್ 95 ಮಾಸ್ಕ ಧರಿಸಬೇಕು. ರೋಗಿಯ ಚಿಕಿತ್ಸೆ ಆರೈಕೆ ಯಿಂದ ಉಳಿದವರು ಮೂರು ಪದರಗಳ ಸರ್ಜಿಕಲ್ ಮಾಸ್ಕ ಧರಿಸಬೇಕಾಗಿ ಆರೋಗ್ಯ ಮತ್ತು ಕುಟುಂಭ ಕಲ್ಯಾಣ ಸೇವೆಗಳ ಆಯುಕ್ತರು ಸೂಚನೆ ನೀಡಿರುವದಾಗಿ ಭೀಮಪ್ಪ ಗಡಾದ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ವರದಿ:ಕೆ.ವಾಯ್ ಮೀಶಿ
