ಕಾರ್ಮಿಕ ಸಂಘದ ಸದಸ್ಯತ್ವ ಕಾರ್ಡ ಉಚಿತ ವಿತರಣೆ
ಮೂಡಲಗಿ : ಕಾರ್ಮಿಕರಿಗೆ ಮಾಹಿತಿಯ ಕೊರತೆ ಇದ್ದು ಹಲವಾರು ಕಾರ್ಮಿಕರು ಕಾರ್ಮಿಕ ಇಲಾಖೆಯಲ್ಲಿ ಇನ್ನೂವರೆಗೆ ಕಾರ್ಡ ಹೊಂದದೆ ಇರುವುದರಿಂದ ವಿವಿಧ ಸೌಲಭ್ಯಗಳನ್ನು ಪಡೆಯುವಲ್ಲಿ ವಂಚಿತರಾಗಿದ್ದಾರೆ. ಆದ್ದರಿಂದ ಕಾರ್ಮಿಕರು ಇಲಾಖೆಯ ಕಾರ್ಡ ಪಡೆದು ವಿವಿಧ ಸೌಲಭ್ಯಗಳನ್ನು ಪಡೆಯಬೇಕೆಂದು ಸಮರ್ಥ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಕಾರ್ಯದರ್ಶಿ ಸುಭಾಸ ಗೊಡ್ಯಾಗೋಳ ಹೇಳಿದರು
ಸೋಮವಾರ ಕಲ್ಮೇಶ್ವರ ವೃತ್ತದ ಹತ್ತಿರದ ಕಂಪ್ಯೂಟರ ಕೇಂದ್ರದಲ್ಲಿ ಕಾರ್ಮಿಕ ಸಂಘದ ಸದಸ್ಯತ್ವ ಕಾರ್ಡ ಹೊಂದಿದ ಕಾರ್ಮೀಕರಿಗೆ ಸಾಂಕೇತಿಕವಾಗಿ ಕಾರ್ಡ ವಿತರಿಸಿ ಮಾತನಾಡಿ,ಕಾರ್ಮಿಕರಿಗಾಗಿ ಕಾರ್ಮಿಕ ಇಲಾಖೆಯಿಂದ ಅವರ ಮಕ್ಕಳ ಮತ್ತು ಕುಟುಂಬದ ಹಿತದೃಷ್ಟಿಯಿಂದ ಈ ಕಾರ್ಡ ಅವಶ್ಯವಿದ್ದು ವಿವಿಧ ಸೌಲಭ್ಯಗಳಾದ ಶಿಕ್ಷಣ,ಶಿಷ್ಯವೇತನ,ಮಕ್ಕಳ ಮದುವೆ ವೆಚ್ಚ,ಅಫಘಾತ ವಿಮೆ ಇಂತಹ ಹಲವಾರು ಸೌಲಬ್ಯಗಳಿದ್ದು ಕಾರ್ಡ ಹೊಂದದೆ ಇರುವ ಕಾರ್ಮಿಕರು ಅವಶ್ಯ ಧಾಖಲೆಗಳನ್ನು ನೀಡಿ ಕಾರ್ಮಿಕ ಇಲಾಖೆಯಲ್ಲಿ ನೊಂದಣಿ ಮಾಡಿಸಿ ಇದರ ಪ್ರಯೋಜನ ಪಡೆಯುವಂತೆ ಸಲಹೆ ನೀಡಿ ಮುಂದಿನ ದಿನಮಾನಗಳಲ್ಲಿ ನಮ್ಮ ತಾಲೂಕಿನಲ್ಲಿಯೇ ಕಾರ್ಮಿಕ ಇಲಾಖೆ ಕಾರ್ಯಾಲಯ ಪ್ರಾರಂಭ ಮಾಡುವಂತೆ ಸ್ಥಳೀಯ ಶಾಸಕರಿಗೆ ಮತ್ತು ಸಂಬಂಧ ಪಟ್ಟ ಅಧಿಕಾರಿಗಳಿಗೆ ಮನವಿ ಮಾಡುವುದಾಗಿ ಹೇಳಿದರು
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಬಸವರಾಜ ಪೋಳ, ಈರಪ್ಪ ಢವಳೇಶ್ವರ, ಬೀರಪ್ಪ ಮಾಳಗಿ, ಪರಸಪ್ಪಾ ಚನ್ನಾಳ, ಮಂಜುನಾಥ ರೇಳೆಕರ, ಬಿಚ್ಚು ಝಂಡೆಕುರುಬರ, ರಾಘು ಮುನ್ಯಾಳ, ರವಿ ಮೊಪಗಾರ, ಸುಭಾಸ ಢವಳೇಶ್ವರ, ವಿಕ್ರಮ ಮೋಪಗಾರ, ಗಜನನ ಗಾಣಿಗೇರ, ತುಕಾರಾಮ ಗುಬಚಿ,ರಮೇಶ ಬಂಡಿವಡ್ಡರ, ಸಭಾಸ ಚೌಡಕಿ, ಮಲ್ಲಪ್ಪ ಕಂಕಣವಾಡಿ, ಶಿವಬಸು ಸುಳ್ಳನ್ನವರ, ಅಬಿಸಾಬ ನಿಡಗುಂದಿ ಮುಂತಾದ ಕಾರ್ಮಕರು ಭಾಗವಹಿಸಿದರು.