ನಾಗನೂರದಲ್ಲಿ ಕಬ್ಬಿನ ಬೆಳೆಯ ಜಾಗ್ರತಿ ಸಭೆ
ಕಬ್ಬಿನ ಬೆಳೆಯಲ್ಲಿ ಜೈವಿಕ ಗೊಬ್ಬರಗಳ ಪ್ರಾಮುತ್ಯೆ : ಕುಲಕರ್ಣಿ
ಮೂಡಲಗಿ: ಆಧುನಿಕ ಯುಗದಲ್ಲಿ ಕೃಷಿ ಕ್ಷೇತ್ರದ ರೈತರು ಕಬ್ಬಿನ ಹೊಸ ತಂತ್ರಜ್ಞಾನಗಳಾದ ಅಗಲು ಸಾಲು ಪದ್ಧಿತಿಯಲ್ಲಿ ಹೆಚ್ಚುವರಿಯಾಗಿ ಮಿಶ್ರಬೆಳೆಗಳ ಜೊತೆಗೆ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡು ಕಡಿಮೆ ಖರ್ಚಿನ ನಾಟಿ ಪದ್ಧತಿಯಲ್ಲಿ ಹೆಚ್ಚಿನ ಇಳುವರಿ ಪಡೆದು ರೈತು ತಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸಿಕೊಳ್ಳಬೇಕೆಂದು ಎಂದು ಗೋದಾವರಿ ಸಕ್ಕರೆ ಕಾರ್ಖಾನೆಯ ಸಹಾಯಕ ಮಹಾಪ್ರಬಂಧಕರಾದ ಆರ್.ವಿ. ಕುಲಕರ್ಣಿ ಹೇಳಿದರು.
ಅವರು ತಾಲೂಕಿನ ನಾಗನೂರು ಗ್ರಾಮದಲ್ಲಿ ಸತ್ಯಪ್ಪ ಹಳ್ಳಿಗೌಡರ ತೋಟದಲ್ಲಿ ಸಮೀರವಾಡಿಯ ಗೋದಾವರಿ ಸಕ್ಕರೆ ಕಾರ್ಖಾನೆಯಿಂದ ಕಬ್ಬಿನ ಬೆಳೆಯಲ್ಲಿ ರೈತರಿಗೆ ಜಾಗ್ರತಿ ಮೂಡಿಸುವ ಕಾರ್ಯದಲ್ಲಿ ಮಾತನಾಡಿದರು,
ಕಾರ್ಖಾನೆಯ ಕಬ್ಬು ಅಭಿವೃದ್ಧಿ ಸಹಾಯಕ ವ್ಯವಸ್ಥಾಪಕ ವಿ.ಎಸ್.ಭುಜನ್ನವರ ಮಾತನಾಡಿ, ಕಬ್ಬು ನಾಟಿ ಮಾಡುವ ಮುಂಚೆ ಮಣ್ಣು ಪರೀಕ್ಷೆ ಮಾಡಿಸಿ ವರದಿ ಆಧರಿಸಿಕೊಂಡು ಜೈವಿಕ ಗೊಬ್ಬರಗಳಾದ ಸಾರಜನಕರ ಸ್ಥಿರೀಕರಿಸುವ ಮತ್ತು ರಂಜಕ ಕರಗಿಸುವ ಜೀವಾಣುಗಳನ್ನು ತಿಪ್ಪೆಗೊಬ್ಬರ ಅಥವಾ ಭೂಮಿಲಾಬದ ಜೊತೆಗೆ ಬಳಸಿ ರಸಾಯನಿಕ ಗೊಬ್ಬರಗಳ ಬಳಕೆ ಮಿತವಾಗಿ ಬಳಸಿ ಭೂಮಿಯ ಫಲವತ್ತತೆ ಕಾಪಾಡಿಕೊಳ್ಳಬೇಕೆಂದರು.
ಕಬ್ಬು ಅಭಿವೃದ್ಧಿ ಅಧಿಕಾರಿ ಇಂದು ನಾಯರ್ ಹಾಗೂ ಮೂಡಲಗಿ ವಲಯದ ಅಧಿಕಾರಿ ಎಸ್.ಎಸ್.ಅರಕೇರಿ ಮಾತನಾಡಿ, ಕಬ್ಬಿನಲ್ಲಿ ಸಾವಯುವ ಕೃಷಿಗೆ ಉತ್ತೇಜನ ನೀಡಬೇಕೆಂದರು.
ಸಭೆಯಲ್ಲಿ ಕಬ್ಬು ಬೆಳಗಾರರಾದ ಕೆ.ಬಿ.ಸಕ್ರೆಪ್ಪಗೋಳ, ಬಿ.ಎಲ್.ಹಳ್ಳಿಗೌಡರ್, ಎಸ್.ಕೆ.ತಡಸನ್ನವರ, ಬಿ.ಸಿ.ಕರಿಹೋಳಿ, ಎಸ್.ಬಿ.ದಿನ್ನಿಮನಿ, ಹಾಗೂ ಕಾರ್ಖಾನೆಯ ಮೂಡಲಗಿ ವಿಭಾಗದ ಸಿಬ್ಬಂದಿ ವರ್ಗದವರು, ನಾಗನೂರು ಗ್ರಾಮದ ರೈತರು ಭಾಗವಹಿಸಿದ್ದರು. ಐ.ಎಲ್.ಜಳ್ಳಿ ಸ್ವಾಗತಿಸಿ ವಂದಿಸಿದರು.
