ಮಂಗಲಾ ಕೌಜಲಗಿ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆ
ಮೂಡಲಗಿ: ತಾಲೂಕಿನ ನಾಗನೂರ ಪಟ್ಟಣ ಪಂಚಾಯಿತಿಗೆ ಮಂಗಳವಾರ ನಡೆದ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಯಾರು ನಾಮಪತ್ರ ಸಲ್ಲಿಸದೇ ಇರುವುದರಿಂದ ಅಧ್ಯಕ್ಷ ಸ್ಥಾನವನ್ನು ಮುಂದುಡಿ ಉಪಾಧ್ಯಕ್ಷ ಸ್ಥಾನಕ್ಕೆ ಮಂಗಲಾ ಸುರೇಶ ಕೌಜಲಗಿಯವರು ಒಬ್ಬರೇ ನಾಮಪತ್ರ ಸಲ್ಲಿಸಿದರಿಂದ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಕಾರಿ ಡಿ.ಜೆ. ಮಹಾತ್ ಪ್ರಕಟಣೆಯಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ ಸದಸ್ಯರು ಹಾಗೂ ಗಣ್ಯರಾದ ದಾಸಪ್ಪ ನಾಯ್ಕ್ ಪರಸಪ್ಪ ಬಬಲಿ, ಭೀಮಗೌಡ ಹೊಸಮನಿ, ಮುತ್ತಪ್ಪ ಕಾನಪ್ಪಗೋಳ, ಅಲ್ಲಪ್ಪ ಗುಡೆನ್ನವರ, ದುಂಡಪ್ಪ ನಂದಗಾವ, ಸತ್ತೇಪ್ಪ ಕರವಾಡಿ, ಯಮನಪ್ಪ ಕರಬನ್ನವರ, ಮುಖ್ಯಾಧಿಖಾರಿ ರವಿ ರಂಗಸುಬೆ ಹಾಗೂ ಅನೇಕರು ಉಪಸ್ಥಿತರಿದ್ದರು.