Breaking News
Home / Recent Posts / ದಸರಾ ಹಾಗೂ ವಾಲ್ಮೀಕಿ ಜಯಂತಿ ಪ್ರಯುಕ್ತ ಕ್ರಿಕೇಟ್ ಪಂದ್ಯಾವಳಿ,ಉದ್ಘಾಟನೆ.

ದಸರಾ ಹಾಗೂ ವಾಲ್ಮೀಕಿ ಜಯಂತಿ ಪ್ರಯುಕ್ತ ಕ್ರಿಕೇಟ್ ಪಂದ್ಯಾವಳಿ,ಉದ್ಘಾಟನೆ.

Spread the love

ದಸರಾ ಹಾಗೂ ವಾಲ್ಮೀಕಿ ಜಯಂತಿ ಪ್ರಯುಕ್ತ ಕ್ರಿಕೇಟ್ ಪಂದ್ಯಾವಳಿ,ಉದ್ಘಾಟನೆ.

ಮೂಡಲಗಿ: ಗ್ರಾಮೀಣ ಭಾಗದಲ್ಲಿ ಕ್ರೀಡೆಗಳಿಗೆ ಹೆಚ್ಚಿನ ಪ್ರೋತ್ಸಾಹದ ಅವಸ್ಯಕತೆ ಇದ್ದು ಯುವಕರು ಕ್ರಿಡೆಗಳ ಆಸಕ್ತಿ ಬೆಳೆಸಿಕೊಳ್ಳುವುದರ ಜೊತೆಗೆ ಸದೃಡವಂತರಾಗಬೇಕು ಎಂದು ಲಕ್ಷ್ಮೀ ಎಜ್ಯೂಕೇಷನ್ ಟ್ರಸ್ಟ್‍ನ ನಿದೇಶಕರಾದ ಸರ್ವೊತ್ತಮ ಜಾರಕಿಹೊಳಿ ಹೇಳಿದರು.

ಮಂಗಳವಾರದಂದು ತಾಲೂಕಿನ ವಡೇರಹಟ್ಟಿ ಗ್ರಾಮದಲ್ಲಿ ದಸರಾ ಹಾಗೂ ವಾಲ್ಮೀಕಿ ಜಯಂತಿ ನಿಮಿತ್ಯ ಏರ್ಪಡಿಸಿದ ಪಂಚ ಸಿದ್ದೇಶ್ವರ ಕ್ರಿಕೇಟ್ ಕ್ಲಬ್ ಇವರ ಆಶ್ರಯದಲ್ಲಿ ಜರುಗಿದ ಹಾಪ್ ಪಿಚ್ ರಾಯಲ್ ಚಾಲೇಂಜರ್ಸ ಟ್ರೋಪಿ ಕ್ರಿಕೇಟ್ ಪಂದ್ಯಾವಳಿ ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿದ ಅವರು, ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸಿ, ಮಾಸ್ಕ, ಸ್ಯಾನಿಟೈಜರ, ಸಾಮಾಜಿಕ ಅಂತರ ಪಾಲಿಸಿ ಪಂದ್ಯಾವಳಿ ಯಶಶ್ವಿಗೊಳಿಸಬೇಕೆಂದರು.

ಮುಖ್ಯ ಅತಿಥಿ ಚಂದ್ರಶೇಖರ ಮೋಟೆಪ್ಪಗೋಳ ಮಾತನಾಡಿ ಕ್ರೀಡೆಗಳಲ್ಲಿ ಸೋಲು ಗೆಲವು ಮುಖ್ಯವಲ್ಲ ಭಾಗವಹಿಸುವಿಕೆ ಮುಖ್ಯ ಯುವಕರು ಕ್ರೀಡೆಗಳಲ್ಲಿ ಹೆಚ್ಚೆಚ್ಚು ಭಾಗವಹಿಸಿ ದೈಹಿಕವಾಗಿ ಮಾನಸಿಕವಾಗಿ ಸದೃಡವಂತರಾಗಬೇಕು ಎಂದರು.

ಕಾರ್ಯಕ್ರಮದ ಸಂಘಟಿಕ ಹಾಗೂ ವಡೇರಟ್ಟಿ ವಾಲ್ಮೀಕಿ ವೇದಿಕೆಯ ಅಧ್ಯಕ್ಷ ಕಿಶನ್ ನಂದಿ ಮಾತನಾಡಿ, ಯುವಕರು ದುಶ್ಚಟಗಳ ದಾಸರಾಗದೆ ಸದೃಡ ಕಾಯ ಹೊಂದಿ ಸಾಮಾಜಿಕ ಕಾಳಜಿಯೊಂದಿಗೆ ದೇಶದ ಪ್ರಗತಿಗೆ ಶ್ರಮಿಸಬೇಕೆಂದರು.

ಅರಭಾಂವಿ ಮಂಡಲ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸಿದ್ದಣ್ಣ ದುರದುಂಡಿ ಮಾತನಾಡಿ, ಅರಭಾಂವಿ ಶಾಸಕ ಹಾಗೂ ಕೆ.ಎಮ್.ಎಫ್.ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಕ್ಷೇತ್ರದ ಯುವ ಜನತೆಗೆ ಸಹಾಯ ಹಸ್ತ ನೀಡಿ ಪ್ರೋತ್ಸಾಹಿಸುವ ಕಾರ್ಯ ಶ್ಲಾಘನೀಯವಾಗಿದೆ. ಸ್ವಾಮಿ ವಿವೇಕಾಂದರು ಹೇಳಿರುವ ಹಾಗೆ ಈ ದೇಶದ ಪ್ರಗತಿಗೆ ಸದೃಡ ಯುವಕರ ಅವಷ್ಯವಿದ್ದು ವಿವೇಕಾನಂದರ ತತ್ವಾದರ್ಶಗಳನ್ನು ಯುವಕರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.

ರಾಜ್ಯ ಯುವ ಮೋರ್ಚಾ ಕಾರ್ಯದರ್ಶಿ ಈರಣ್ಣ ಅಂಗಡಿ,ಕಾರ್ಯಕ್ರಮದ ಸಂಘಟಿಕ ಅಜೀತ ಪಾಟೀಲ, ಮಾತನಾಡಿದರು.

ಡಾ.ಅಲಗೌಡ ಪಾಟೀಲ ಕ್ರೀಡಾಪಟುಗಳಿಗೆ ಮಾಸ್ಕ,ಸ್ಯಾನಿಟೈಜರ ವಿತರಿಸಿದರು.ಹಾಗೂ ವೇದಿಕೆಯ ಗಣ್ಯರನ್ನು ಸತ್ಕರಿಸಿದರು.

ಅರಭಾಂವಿ ಮಂಡಲ ಅಧ್ಯಕ್ಷ ಮಹಾದೇವ ಶೆಕ್ಕಿ,ಎಸ್.ಟಿ.ಮೋರ್ಚಾ ಅಧ್ಯಕ್ಷ ಯಲ್ಲಾಲಿಂಗ ವಾಳದ, ಯುವ ಮೋರ್ಚಾ ಅಧ್ಯಕ್ಷ ಪ್ರಮೋದ ನುಗ್ಗಾನಟ್ಟಿ, ಮಾಜಿ ಜಿ.ಪಂ.ಸದಸ್ಯ ಮಾರುತಿ ತೋಳಮರ್ಡಿ, ತಾ.ಪಂ. ಸದಸ್ಯ ಗೋಪಾಲ ಕುದರಿ, ವಿಠ್ಠಲ್ ಗಿಡೋಜಿ, ಮಹಾದೇವ ಗುಡೇರ, ಪಾಂಡು ದೊಡಮನಿ,ಯಮನಪ್ಪ ಮೇತ್ರಿ,ನಾಗರಾಜ ಕುದರಿ, ಬಾಳಪ್ಪ ಗಾಡದವರ ಬಸಪ್ಪ ನಾಯಿಕ,ಸಿದ್ದಾರೂಢ ಜಮುನಾಳ,ಮಲ್ಲಿಕಾರ್ಜುನ ಪತ್ತಾರ, ಎಸ್ ಆರ್.ಮಂಜುನಾಥ ಡಂಗ,ಮಹಾಂತೇಶ ಕುಡಚಿ ಹಾಗೂ ಜನಪ್ರತಿನಿಧಿಗಳು,ಗಣ್ಯರು,ಕ್ರೀಡಾ ಪ್ರೇಮಿಗಳು ಇದ್ದರು.


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ