ಶ್ರೀ ಮಹಾಲಕ್ಷ್ಮೀ ಸಹಕಾರಿ ವಾರ್ಷಿಕೋತ್ಸವ ಹಾಗು ಸತೀಶ ಕಡಾಡಿ ಸನ್ಮಾನ
ಬೆಟಗೇರಿ: ಶ್ರೀ ಮಹಾಲಕ್ಷ್ಮೀ ಸೌಹಾರ್ದ ಸಹಕಾರಿ ನಿ.,ಕಲ್ಲೋಳಿ ಶಾಖೆ ಬೆಟಗೇರಿ ಇದರ 5 ನೇ ವಾರ್ಷಿಕೋತ್ಸವ ಸಮಾರಂಭ ಸೋಮವಾರ ನ-02 ರಂದು ಬೆಳಿಗ್ಗೆ 11-00 ಶಾಖಾ ಕಛೇರಿಯಲ್ಲಿ ನಡೆಯಲಿದೆ. ನೂತನ ಡಿಸಿಸಿ ಬ್ಯಾಂಕ್ ನಿರ್ದೇಶಕ ಸತೀಶ ಕಡಾಡಿ ಜ್ಯೊತಿ ಬೆಳಗಿಸುವರು. ಪ್ರತಿಷ್ಠಿತ ದಿ ಬೆಳಗಾವಿ ಜಿಲ್ಲಾ ಮಧ್ಯವರ್ತಿ ಸಹಕಾರಿ ಬ್ಯಾಂಕಿನ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾದ ಸತೀಶ ಕಡಾಡಿ ಅವರನ್ನು ಸನ್ಮಾನಿಸಲಾಗುವುದು. ಸಮಾರಂಭದ ಅಧ್ಯಕ್ಷತೆ ಸಲಹಾ ಸಮೀತಿ ಅಧ್ಯಕ್ಷ ಈರಪ್ಪ ದೇಯನ್ನವರ ವಹಿಸುವರು. ಅತಿಥಿಗಳಾಗಿ ಶ್ರೀಶೈಲ ತುಪ್ಪದ, ಈಶ್ವರ ಮುಧೋಳ, ಬಸಪ್ಪ ಗೌಡರ, ಬಾಳಪ್ಪ ತಡಸಿ ಆಗಮಿಸುವರು ಎಂದು ಶಾಖಾ ವ್ಯವಸ್ಥಾಪಕ ಪರಪ್ಪ ಗಿರೆಣ್ಣವರ ಪ್ರಕಟಣೆಗೆ ತಿಳಿಸಿದ್ದಾರೆ.