ನಿಶ್ವಾರ್ಥ ಸೇವೆ ಆತ್ಮ ತೃಪ್ತಿ ನೀಡುತ್ತದೆ: ಪ್ರೊ.ಕೆ.ಜೆ.ಮಾಲಗಾಂವೆ
ಐನಾಪೂರ: ನಮ್ಮ ಸೇವೆಯು ಪ್ರಾಮಾಣಿಕವಾಗಿದ್ದರೆ ತಕ್ಕ ಪ್ರತಿಫಲ ದೊರೆಯುತ್ತದೆ ಎಂದು ಐನಾಪೂರದ ಕೆ.ಆರ್.ಇ.ಎಸ್. ಸಂಸ್ಥೆ ಪ.ಪೂ. ಕಾಲೇಜಿನ ಪ್ರಾಚಾರ್ಯ ಪ್ರೊ. ಕೆ.ಜೆ. ಮಾಲಗಾಂವೆ ಹೇಳಿದರು.
ಅವರು ನವ್ಯಸ್ಪೂರ್ತಿ ಸಮಾಜ ಸಂಸ್ಥೆ, ಐನಾಪೂರ ಹಾಗೂ ಕೆ.ಆರ್.ಇ.ಎಸ್. ಹೈಸ್ಕೂಲ್ ಸನ್ 1998-99 ಸಾಲಿನ ಹಳೆಯ ವಿದ್ಯಾರ್ಥಿಗಳ ಬಳಗ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಮತ್ತು ಸತ್ಕಾರ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಾ, ಜಗತ್ತನ್ನೇ ತಲ್ಲಣಗೊಳಿಸಿದ ಮಾರಕ ರೋಗ ಕೊರೊನಾ ವೈರಸ್ ನಿಯಂತ್ರಣ ಸಾಧಿಸಲು ಆರೋಗ್ಯ ಕ್ಷೇತ್ರದಲ್ಲಿಕರ್ತವ್ಯ ನಿರತ ಸೇನಾನಿಗೆ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆಗೈದವರಿಗೆ ಗೌರವ ಸಲ್ಲಿಸಲು ತುಂಬಾ ಹೆಮ್ಮೆ ಎನಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಕೆ.ಆರ್.ಇ.ಎಸ್. ಹೈಸ್ಕೂಲ್ ಉಪ ಪ್ರಾಚಾರ್ಯರಾದ ಎ. ಎಮ್. ಹುಲ್ಲೆನ್ನವರ ಹಾಗೂ ಕೊರೊನಾ ವಾರಿಯರ್ಸ್ ಶ್ರೀ ಧನ್ವಂತರಿ ನರ್ಸಿಂಗ್ ಹೊಂ ವೈದ್ಯರಾದ ಡಾ. ಆನಂದ ಮುತಾಲಿಕ ಅವರನ್ನು ಸತ್ಕರಿಸಲಾಯಿತು.
ಸಂಸ್ಥೆಯ ಖಜಾಂಜಿಯಾದ ಉದಯ ನಿಡಗುಂದಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ನವ್ಯಸ್ಪೂರ್ತಿ ಸಮಾಜ ಸೇವಾ ಸಂಸ್ಥೆಯ ಸದಸ್ಯರಾದ ಸಂಜು ಕಟ್ಟಿ, ಭರತೇಶ ದಾನೋಳ್ಳಿ, ವಿನೋದ ಯಂಡೊಳ್ಳಿ, ಮಹೇಶ ಕೇರಿಕಾಯಿ, ಉದಯ ಭೋವಿ, ಉಮೇಶ ಕೋರ್ಬು, ಅರುಣ ಭಾಗಿ, ಸಂಜಯ ಶಿರಹಟ್ಟಿ, ಸಂಜು ಬೀರಡಿ, ರಮೇಶ ಕುಲ್ಲೋಳಿ ಮುಂತಾದವರು ಉಪಸ್ಥಿತರಿದ್ದರು.
ಶ್ರೀಮತಿ ಎಸ್.ವಿ.ಕುಲಕರ್ಣಿ ಪ್ರಾರ್ಥಿಸಿದರು, ಶ್ರೀಮತಿ ವಿ.ಪಿ.ಪೋತದಾರ ಸ್ವಾಗತಿಸಿದರು. ಎಸ್.ಜೆ.ಜೌಗಲಾ ನಿರೂಪಿಸಿದರು, ಶಂಕರ ನಿಂಗನೂರ ವಂದಿಸಿದರು.