Breaking News
Home / ತಾಲ್ಲೂಕು / ಹಳ್ಳೂರ : ಗ್ರಾಮದ ಜನರ ಮೇಲೆ ಹದ್ದಿನ ಕಣ್ಣು

ಹಳ್ಳೂರ : ಗ್ರಾಮದ ಜನರ ಮೇಲೆ ಹದ್ದಿನ ಕಣ್ಣು

Spread the love

ಹಳ್ಳೂರ : ಬೆಳಗಾವಿ ಜಿಲ್ಲೆಯಲ್ಲಿ ಮತ್ತೇ ಗುರುವಾರ 17 ಜನರಿಗೆ ಕರೋನಾ ಸೋಂಕು ದೃಢಪಟ್ಟಿದ್ದರಿಂದ ಬೆಳಗಾವಿ ಜಿಲ್ಲೆಯನ್ನು ಹೈ-ಅಲರ್ಟ ಘೋಷಿಸಲಾಗಿದೆ. ಗ್ರಾಮದಲ್ಲಿ ಮನೆಯಿಂದ ಹೊರಗೆ ಬರುವವರ ಮೇಲೆ ಡ್ರೋಣ ಕ್ಯಾಮರಾ ಮೂಲಕ ಹದ್ದಿನ ಕಣ್ಣು ಇಡಲಾಗಿದೆ ಎಂದು ಗ್ರಾಪಂ ಅಭಿವೃದ್ಧಿ ಅಧಿಕಾರಿ ಎಚ್ ವೈ ತಾಳಿಕೋಟಿ ಹಾಗೂ ಗ್ರಾಮದ ಬೀಟ್ ಪೋಲಿಸ್ ಎನ್ ಎಸ್ ಒಡೆಯರ್ ತಿಳಿಸಿದರು


ಕೆಲವರು ಲಾಕ್ ಡೌನ್ ಆದೇಶ ಉಲ್ಲಂಘಿಸಿ ಅನ್ಯರ ಜೀವನದೊಂದಿಗೆ ಚೆಲ್ಲಟ ನಡೆಸಿದ್ದು, ಇಂಥವರ ಪತ್ತೆಗೆ ಪೋಲಿಸ ಹಾಗೂ ಗ್ರಾಪಂ ಅಧಿಕಾರಿಗಳು ಡ್ರೋಣ ಕ್ಯಾಮರಾ ಮೋರೆ ಹೋಗಿದ್ದು. ಜನಸಂದನಿ ನಿಯಂತ್ರಿಸಲು ಸಹಕಾರಿಯಾಗಿದೆ.

ಗ್ರಾಮದ ಕೆಲವೊಂದು ಪ್ರದೇಶದಲ್ಲಿ ಗುಂಪು-ಗುoಪಾಗಿ ಜನರು ಕೂಡಿಕೊಂಡು ಕುಳಿತುಕೊಳ್ಳುತ್ತಿದ್ದಾರೆ, ಪೋಲಿಸರ ವಾಹನ ಹತ್ತಿರ ಹೋದರೆ ಮತ್ತೆ ಮನೆ ಸೇರುತ್ತಿದ್ದಾರೆ. ಅಂಥವರನ್ನು ಗುರುತಿಸಲು ಗ್ರಾಮ ಪಂಚಾಯತ್ ಇಲಾಖೆ ಡ್ರೋಣ ಕ್ಯಾಮರಾ ಬಳಕೆ ಮಾಡುತ್ತಿದೆ.

ಈ ಸದಂರ್ಭದಲ್ಲಿ ಮೂಡಲಗಿ ತಾಲೂಕಾ ಭೂ ನ್ಯಾಯ ಮಂಡಳಿಯ ಸದಸ್ಯ ಭೀಮಶಿ ಮಗದುಮ್ಮ, ಭರಮಪ್ಪ ಸಪ್ತಸಾಗರ, ಸುರೇಶ ಡಬ್ಬನ್ನವರ, ಸಂಗಪ್ಪ ಪಟ್ಟಣಶೆಟ್ಟಿ, ಭೀಮಪ್ಪ ಹೊಸಟ್ಟಿ, ಗ್ರಾಪಂ ಸಿಬ್ಬಂದಿಗಳಾದ ಮಂಜು ಕೋಹಳ್ಳಿ, ನಾಗಪ್ಪ ಮೊರೆ, ಕಿಶೋರ್ ಗಣಾಚಾರಿ, ಮಹಾಂತೇಶ್ ಕುಂದರಗಿ, ಅರ್ಜುನ ಕುಲಗೋಡ್, ಹಣಮಂತ ಹಡಪದ ಹಾಗೂ ಮುಂತಾದವರು ಉಪಸ್ಥಿತರಿದ್ದರು


Spread the love

About inmudalgi

Check Also

ಸಾಹಿತಿ ಚಿದಾನಂದ ಹೂಗಾರ ರವರ ಭಟ್ಟಿನೀಯ ಭ್ರಾಂತಿ ಚಿತ್ತ* ಕವನ ಸಂಕಲನ ಲೋಕಾರ್ಪಣೆ

Spread the loveಮೂಡಲಗಿಯ ಚೈತನ್ಯ ಸೊಸೈಟಿಯಲ್ಲಿ ಮೂಡಲಗಿ ತಾಲ್ಲೂಕು ಚುಸಾಪ ಮತ್ತು ಮಲ್ಲಿಕಾರ್ಜುನ ಪ್ರಕಾಶನದಿಂದ ಏರ್ಪಡಿಸಿದ ಚಿದಾನಂದ ಹೂಗಾರ ಅವರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ